Advertisement

ಮಾಹೆ ವಿ.ವಿ.- ಐಯುಪಿಯುಐ ಒಪ್ಪಂದ

04:23 AM May 18, 2019 | Sriram |

ಉಡುಪಿ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯ ಮತ್ತು ಇಂಡಿಯಾನಾ ವಿಶ್ವವಿದ್ಯಾನಿಲಯ- ಪದ್ಯೂರ್ ವಿಶ್ವವಿದ್ಯಾನಿಲಯ ಇಂಡಿಯಾನಾ ಪೊಲಿಸ್‌ (ಐಯುಪಿ ಯುಐ) ನಡುವೆ ಒಪ್ಪಂದ ಪತ್ರಕ್ಕೆ ಸಹಿ ಮಾಡಲಾಗಿದೆ. ಸಹಕಾರ ಶಿಕ್ಷಣದ ಸಲುವಾಗಿ ಮಣಿಪಾಲ್ ಕಾಲೇಜ್‌ ಆಫ್ ಹೆಲ್ತ್ ಪ್ರೊಫೆಶನ್ಸ್‌ (ಎಂಸಿಎಚ್ಪಿ) ಪರವಾಗಿ ಇಂಡಿಯಾನಾ ಸಂಸ್ಥೆ ಒಪ್ಪಂದಕ್ಕೆ ಬಂದಿದೆ.

Advertisement

ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಮತ್ತು ಅಮೆರಿಕದ ಇಂಡಿಯಾನಾ ಯುನಿವಿರ್ಸಿಟಿ ಸ್ಕೂಲ್ ಆಫ್ ಇನ್‌ಫಾರ್ಮೆಟಿಕ್ಸ್‌ ಆ್ಯಂಡ್‌ ಕಂಪ್ಯೂಟಿಂಗ್‌ ನಿರ್ದೇಶಕ ಪ್ರೊ| ಜೋಸೆಟ್ ಜೋನ್ಸ್‌ ಸಹಿ ಮಾಡಿದರು. ಮಾಹೆ ಇಂಟರ್‌ನೇಶನಲ್ ಕೊಲಾಬರೇಶನ್‌ ನಿರ್ದೇಶಕ ಡಾ|ರಘು, ಎಂಸಿಎಚ್ಪಿ ಡೀನ್‌ ಡಾ| ಜಿ. ಅರುಣ್‌ ಮಯ್ಯ, ಐಯುಪಿಯುಐ ಹಿರಿಯ ಕಾರ್ಯ ನಿರ್ವಾಹಕ ಸಹ ಡೀನ್‌ ಡಾ| ಪಳಕಳ ಮ್ಯಾಥ್ಯೂ ಉಪಸ್ಥಿತರಿದ್ದರು.

ಹೆಲ್ತ್ ಇನ್‌ಫಾರ್ಮೇಶನ್‌ ಮ್ಯಾನೇಜ್ಮೆಂಟ್ ಪ್ರೊಗ್ರಾಮ್‌ನಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಜಾಗತಿಕ ಪ್ರಮಾಣೀಕರಣವನ್ನು ಒದಗಿಸುವ ಕುರಿತು ಮತ್ತು ಅಂತಿಮ ವರ್ಷದ ಅಧ್ಯಯನವನ್ನು ಐಯುಪಿಯುಐ ಕ್ಯಾಂಪಸ್‌ನಲ್ಲಿ ನಡೆಸಲು ಒಪ್ಪಂದಕ್ಕೆ ಬರಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಸ್ನಾತ ಕೋತ್ತರ ಪದವಿ ಪಡೆಯಲೂ ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next