ಮುಂಬಯಿ: ತುಳು-ಕನ್ನಡಿಗ ಸಂಚಾಲಕತ್ವದ ದೇಶದಾದ್ಯಂತ ಹೆಸರುವಾಸಿಯಾಗಿರುವ ತುಳು-ಕನ್ನಡಿಗರ ಹೆಮ್ಮೆಯ ಮಹೇಶ್ ಟ್ಯುಟೋರಿಯಲ್ಸ್‌ನ ಚಂಡಿಘಡ್ ಶಾಖೆಯ ವಿದ್ಯಾರ್ಥಿ ಸರ್ವೇಶ್ ಮೆಹ್ತಾನಿ ಅವರು ಐಐಟಿ-ಜೀ (ಅಡ್ವಾನ್ಸ್) ಎಂಜಿನೀಯರಿಂಗ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಸರ್ವೇಶ್ ಮೆಹ್ತಾನಿ ಅವರು ಐಐಟಿ-ಜೀ ಮಹೇಶ್ ಟ್ಯುಟೋರಿಯಲ್ಸ್‌ನ ಪಂಜಾಬ್‌ನ ಚಂಡಿಘಡ್‌ನಲ್ಲಿರುವ ಇದರ ಅಂಗಸಂಸ್ಥೆ ಲಕ್ಷÂ ಇಲ್ಲಿಂದ ತರಬೇತಿಯನ್ನು ಪಡೆದು ಮೊದಲ ಸ್ಥಾನವನ್ನು ಗಳಿಸಿದ್ದಾರೆ. 366 ಅಂಕಗಳಲ್ಲಿ 339 ಅಂಕಗಳನ್ನು ಪಡೆದ ಅವರು ಗಣಿತ ವಿಷಯದಲ್ಲಿ 120, ಫಿಸಿಕ್ಸ್‌ನಲ್ಲಿ 104, ಕೆಮೆಸ್ಟಿÅàಯಲ್ಲಿ 115 ಅಂಕಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಜೂ. 12 ರಂದು ನಾರಿಮನ್‌ಪಾಯಿಂಟ್ ಟ್ರೆಂಡೆಲ್ ಟವರ್ಸ್‌ನ ದಿ ಮಲಬಾರ್ ಸಭಾಗೃಹದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಹೇಶ್ ಟ್ಯುಟೋರಿಯಲ್ಸ್‌ನ
ಆಡಳಿತ ನಿರ್ದೇಶಕ ಮಹೇಶ್ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ, ಸರ್ವೇಶ್ ಅವರು ತನ್ನ ಪರಿಶ್ರಮ, ಶ್ರದ್ಧೆ, ಏಕಾಗ್ರತೆಯಿಂದ ಹಾಗೂ ಮಹೇಶ್ ಟ್ಯುಟೋರಿಯಲ್ಸ್‌ನ ಮಾರ್ಗದರ್ಶನದಲ್ಲಿ ದೇಶಕ್ಕೆ ಪ್ರಥಮಿಗರೆನಿಸಿದ್ದು ಹೆಮ್ಮೆಯ ವಿಷಯವಾಗಿದೆ. ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಇದೊಂದು ನೂತನ ಮೈಲುಗಲ್ಲಾಗಿದೆ. ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಈ ಪರೀಕ್ಷೆಯು ಅತಿ ಕಷ್ಟಕರವಾಗಿದ್ದು, ಯುವ ಪೀಳಿಗೆಯ ಹೆಬ್ಬಯಕೆಯ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಆಗಿದೆ. ದೇವರ ದಯೆ ಕೂಡಾ ಪ್ರತಿಭೆಗಳಿಗೆ ಅಳತೆಗೋಲಾಗಿರಬೇಕು. ಸರ್ವೇಶ್ ಅವರು ತನ್ನ ಅಪ್ರತಿಮ ಫಲಿತಾಂಶದಿಂದ ನಮಗೆಲ್ಲರಿಗೂ ಗೌರವ ತಂದಿದ್ದಾನೆ. ಆತನ ಶಿಕ್ಷಕರ ಅಧ್ಯಯನ ಶೈಲಿಯ ಮಾರ್ಗದರ್ಶನವನ್ನು, ಸೂಕ್ಷ್ಮ ವಿವರಗಳ ಬಗ್ಗೆ ಗಮನ ಹರಿಸಿ, ತನ್ನ ಅಂಕಗಳನ್ನು ಅಧಿಕಗೊಳಿಸಿಕೊಳ್ಳಲು ಕ್ರಮಬದ್ಧವಾಗಿ ವಿಶ್ಲೇಷಣೆ ನಡೆಸಿದ್ದಾನೆ. ರೋಬೊ ಮೇಟ್ ಪ್ಲಸ್‌ನಿಂದ ಆತ ಪ್ರಯೋಜನ ಪಡೆದಿರುವುದು ವಿಶೇಷತೆಯಾಗಿದೆ. ಇದನ್ನು ಎಲ್ಲಿ ಬೇಕಾದರೂ ಯಾವುದೇ ಸಮಯದಲ್ಲೂ ಅಧ್ಯಯನ ಸಲಕರಣೆಗಳನ್ನು ಬಳಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ತಾನು ಗಳಿಸಿದ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಆತ ಸಮಾಜಕ್ಕೆ ಹಿಂತಿರುಗಿಸುತ್ತಾನೆ ಎಂಬ ಭರವಸೆ ನನಗಿದೆ. ಇದು ನಮ್ಮ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ದೇಶದ ಅರ್ಧದಷ್ಟು ವಿದ್ಯಾರ್ಥಿಗಳು ಇದರ ಅಧ್ಯಯನದಲ್ಲಿ ನಿರತರಾಗಿದ್ದು ಅಭಿನಂದನೀಯ. ಭವಿಷ್ಯದಲ್ಲಿ ಸಂಸ್ಥೆಯಿಂದ ಇನ್ನಷ್ಟು ಸಾಧನೆಗಳು ನಡೆದು ಇತಿಹಾಸವನ್ನು ಸೃಷ್ಟಿಸುವಂತಾಗಲಿ ಎಂದು ನುಡಿದು ಶುಭ ಹಾರೈಸಿದರು.
ಸರ್ವೇಶ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ನಾನು ಉನ್ನತ 10 ಮಂದಿಯಲ್ಲಿ ಒಬ್ಬನಾಗಬೇಕು ಎಂದು ಬಯಸಿ, ಅಧ್ಯಯನದಲ್ಲಿ ನಿರತನಾಗಿದ್ದೆ. ಪ್ರಸ್ತುತ ಆ ನನ್ನ ಕನಸು ನನಸಾಗಿದೆ. ಎಂಟಿ ಎಜ್ಯುಕೇರ್ ಲಕ್ಷ್ಯ ಫೋರಂ ಫಾರ್ ಕಾಂಪಿಶನ್ಸ್ ನೀಡಿದದ್ದ ಬೆಂಬಲ ಮತ್ತು ಮಾರ್ಗದರ್ಶನಕ್ಕೆ
ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸಾಧಿಸುವ ಛಲವಿದ್ದಾಗ ನಮಗೆ ಇಂತಹ ಸಂಸ್ಥೆಗಳು ಮಾರ್ಗದರ್ಶನ ನೀಡಿ ಬೆಂಬಲಿಸುತ್ತವೆ. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಕಾರಣ ಮಹೇಶ್ ಟ್ಯುಟೋರಿಯಲ್ಸ್ ಆಗಿದೆ. ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮ, ಏಕಾಗ್ರತೆಯಿಂದ ಇಂತಹ ಸಾಧನೆಗಳನ್ನು ಮಾಡಬೇಕು. ನನ್ನಂತಹ ಸಾಧನೆಯ ವಿದ್ಯಾರ್ಥಿಗಳನ್ನು ಈ ಸಂಸ್ಥೆ ಮತ್ತೆ ಮತ್ತೆ ಸೃಷ್ಟಿಸುವಂತಾಗಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಂಜಾಬ್‌ನ ಮುಖ್ಯಸ್ಥ ಸಾಹಿಲ್ ಆರ್ಜಾಯಿ, ಮುಂಬಯಿ ವಿಭಾಗದ ನಿರ್ದೇಶಕ ಚಂದ್ರೇಶ್ ಪೂರ್ಯ, 7 ನೇ ರ್‍ಯಾಂಕ್ ಪಡೆದ ಆಶೀಶ್ ವೈಕರ್, 32ನೇ ರ್‍ಯಾಂಕ್ ಗಳಿಸಿದ ಮಂಥನ್ ಜಿಂದಲ್ ಅವರು ಉಪಸ್ಥಿತರಿದ್ದರು.
1998ರಲ್ಲಿ ಸ್ಥಾಪನೆಗೊಂಡ ಎಂಟಿ ಎಜುಕೇರ್ ಪ್ರಸ್ತುತ ದೇಶದಾದ್ಯಂತ ಶಾಖೆಗಳನ್ನು ಸ್ಥಾಪಿಸಿಕೊಂಡು ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾನ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. 250 ಕೋಚಿಂಗ್ ಸೆಂಟರ್‌ಗಳನ್ನು ಹೊಂದಿರುವುದಲ್ಲದೆ, 1,300 ಅತ್ಯುತ್ತಮ ತರಭೇತಿ ಹೊಂದಿದ ಶಿಕ್ಷಕ ವೃಂದವನ್ನು ಸಂಸ್ಥೆಯು ಹೊಂದಿದೆ. ವಿಜ್ಞಾನ, ವಾಣಿಜ್ಯ, ಜೆಇಇ ಅಡ್ವಾನ್ಸ್‌ಡ್ ಆ್ಯಂಡ್ ಮೈನ್ಸ್ ಫಾರ್ ಇಂಜಿನೀಯರಿಂಗ್, ಎನ್‌ಇಇಟಿ ಫಾರ್ ಮೆಡಿಕಲ್, ಸಿಪಿಟಿ/ಐಪಿಸಿಸಿ/ಸಿಎ ಫೈನಲ್ ಕಾಮರ್ಸ್, ಸಿಎಟಿ/ಸಿಇಟಿ ಫಾರ್ ಎಂಬಿಎ ಇತ್ಯಾದಿ ಕೋರ್ಸ್‌ಗಳನ್ನು ಸಂಸ್ಥೆಯು ಹೊಂದಿದೆ.