Advertisement

ಮಾಹೆ ವಿ.ವಿ. ನೂತನ ಕುಲಸಚಿವರಾಗಿ ಡಾ|ಪಿ. ಗಿರಿಧರ್‌ ಕಿಣಿ ಅಧಿಕಾರ ಸ್ವೀಕಾರ

01:30 AM Dec 01, 2022 | Team Udayavani |

ಉಡುಪಿ: ಮಾಹೆ ವಿಶ್ವವಿದ್ಯಾನಿಲಯದ ಅಡ್ಮಿಶನ್‌ ವಿಭಾಗದ ನಿರ್ದೇಶಕ, ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ| ಪಿ. ಗಿರಿಧರ್‌ ಕಿಣಿ ಅವರು ಮಾಹೆ ವಿ.ವಿ.ಯ ನೂತನ ಕುಲಸಚಿವರಾಗಿ ನೇಮಕಗೊಂಡಿದ್ದು, ಡಿ. 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Advertisement

ಬಿಇ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್ (1995), ಎಂಟೆಕ್‌ (1998) ಮತ್ತು ಪಿಎಚ್‌. ಡಿ. ಪದವೀಧರರಾದ ಅವರು 1999ರಲ್ಲಿ ತಾವು ಓದಿದ ಸಂಸ್ಥೆ ಮಣಿಪಾಲದ ಎಂಐಟಿಯಲ್ಲಿಯೇ ಉಪನ್ಯಾಸಕ ವೃತ್ತಿ ಆರಂಭಿಸಿ ಅಂದಿನಿಂದ ಮಾಹೆಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.

2012ರಿಂದ ಮಣಿಪಾಲ್‌ ವಿ.ವಿ. ಜೈಪುರದಲ್ಲಿ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ ವಿಭಾಗ, ಸ್ಕೂಲ್‌ ಆಫ್ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ ಎಂಜಿನಿಯರಿಂಗ್‌ (ಎಸ್‌ಇಇಸಿ) ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

2013ರಿಂದ 2017ರ ವರೆಗೆ ಮಣಿಪಾಲ ಎಂಐಟಿಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2018ರಲ್ಲಿ ಅಡ್ಮಿಶನ್‌ ವಿಭಾಗದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಂಕೀರ್ಣ ಸಮಯದ ನಡುವೆಯೂ ಮಾಹೆಯ ಅಡ್ಮಿಶನ್‌ ವಿಭಾಗವು ಉತ್ತಮ ಅಡ್ಮಿಶನ್‌ ಹೊಂದುವಂತೆ ಕಾರ್ಯನಿರ್ವಹಿಸಿದ್ದರು.

ಇದೇ ಸಂದರ್ಭ ಡಿ. 1ರಿಂದ ಮಾಹೆಯ ಈಗಿನ ರಿಜಿಸ್ಟ್ರಾರ್‌ ಆಗಿರುವ (2015ರಲ್ಲಿ ನೇಮಕಗೊಂಡ) ಡಾ| ನಾರಾಯಣ ಸಭಾಹಿತ್‌ ಅವರು ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹಕುಲಪತಿಗಳಾಗಿ ಹುದ್ದೆಯನ್ನು ಸ್ವೀಕರಿಸಲಿದ್ದಾರೆ.

Advertisement

ಡಾ| ಸಭಾಹಿತ್‌ ಅವರು ಸಂಸ್ಥೆಯ ಇತರ ನಾಯಕ ರೊಡಗೂಡಿ ಯಶಸ್ವಿಯಾಗಿ ಯುಜಿಸಿ ಪರಿಶೀಲನೆ, ಐಒಇ ಅಧಿಕಾರಿಗಳ ಸಮಿತಿಯ ಭೇಟಿ, ನ್ಯಾಕ್‌ ತಂಡದ ಭೇಟಿ ಇತ್ಯಾದಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕೋವಿಡ್‌ ಅವಧಿಯಲ್ಲಿ ಅವರ ನಾಯಕತ್ವ ಮೆಚ್ಚುಗೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next