Advertisement

MAHE University: ಹಳೆವಿದ್ಯಾರ್ಥಿಯಿಂದ 12 ಕೋ.ರೂ. ವಿದ್ಯಾರ್ಥಿವೇತನ ಘೋಷಣೆ

01:00 AM Apr 08, 2024 | Team Udayavani |

ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಎಂಐಟಿಯ ಹಳೆವಿದ್ಯಾರ್ಥಿ ಹರೀಶ್‌ ಶಾ ಅವರ ಹರೀಶ್‌ ಮತ್ತು ಬಿನಾ ಶಾ ಫೌಂಡೇಶನ್‌ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬಿಎಚ್‌ಎಸ್‌ಎಫ್-ಮಾಹೆ ಎಜುಎಂಪವರ್‌ ಸ್ಕಾಲರ್‌ಶಿಪ್‌ ಆರಂಭಿಸಿದೆ.

Advertisement

ಎಂಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹೆ ವಿವಿ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಇದಕ್ಕೆ ಚಾಲನೆ ನೀಡಿ, ಶೈಕ್ಷಣಿಕ ಸಂಸ್ಥೆಯ ಸಾಧನೆ ಮತ್ತು ಅದರ ಹಳೇ ವಿದ್ಯಾರ್ಥಿ ಸಾಧನೆಯ ಗುಣಮಟ್ಟಕ್ಕೆ ಇದು ಸಾಕ್ಷಿಯಾಗಿದೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಣೆಯ ಮೂಲಕ ಸದೃಢ ಸಮಾಜಕ್ಕೆ ಪೂರಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ ಮಾತನಾಡಿ, ಸಂಸ್ಥೆಯ ಹಳೆ ವಿದ್ಯಾರ್ಥಿ ರೂಪಿಸಿರುವ ಈ ಉಪಕ್ರಮವು ಪ್ರತಿಭೆಯನ್ನು ಪೋಷಿಸುತ್ತದೆ. ಆರ್ಥಿಕವಾಗಿ ದುರ್ಬಲರಾಗಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದರು.

ಹರೀಶ್‌ ಶಾ ಅವರು ಅಭಿಪ್ರಾಯ ಹಂಚಿಕೊಂಡರು. ಈ ವಿದ್ಯಾರ್ಥಿವೇತನದಡಿಯಲ್ಲಿ ವರ್ಷಕ್ಕೆ 60 ವಿದ್ಯಾರ್ಥಿಗಳಂತೆ 240 ವಿದ್ಯಾರ್ಥಿಗಳಿಗೆ 12 ಕೋ.ರೂ. ನೀಡುವ ಗುರಿ ಹೊಂದಿದೆ. 2024-25ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಈ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಯು ಮಾಹೆ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿಯ 1-10,000 ನಡುವೆ ಇರಬೇಕು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ವಿಜ್ಞಾನ ವಿಭಾಗದಲ್ಲಿ ಬೋರ್ಡ್‌ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು ಮತ್ತು 8ನೇ ತರಗತಿಯಿಂದ 12ನೇ ತರಗತಿ ಶಿಕ್ಷಣ ಭಾರತದಲ್ಲಿ ಮಾಡಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next