Advertisement
ಒಪಿಡಿ ಕಟ್ಟಡ ಹಳೆಯದಾಗಿ ಶಿಥಿಲಗೊಂಡಿರುವ ಬಗ್ಗೆ ಎರಡು ವರ್ಷಗಳ ಹಿಂದೆ ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕರು ಪ್ರಸ್ತಾವ ಕಳುಹಿಸಿದ್ದರು. ಮಾಹೆ ವಿ.ವಿ. ತನ್ನ ರಜತ ಮಹೋತ್ಸವ ಆಚರಣೆ ವೇಳೆ 2018ನೇ ಇಸವಿಯಲ್ಲಿ ಅದರ ನವೀಕರಣಕ್ಕೆ ಮುಂದಾಗಿತ್ತು. ಒಂದೂವರೆ ವರ್ಷಗಳ ಹಿಂದೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು.
50 ವರ್ಷ ಹಳೆಯ ಕಟ್ಟಡ
ವೆನ್ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗವು 1964-65ರಲ್ಲಿ ಉದ್ಘಾಟನೆಯಾಗಿದ್ದು, 50 ವರ್ಷ ಹಳೆಯದಾಗಿದೆ. ಉದ್ಘಾಟನೆಯಾದ ಬಳಿಕ ಒಮ್ಮೆಯೂ ನವೀಕರಣ ನಡೆಯದ್ದರಿಂದ ವಿಭಾಗದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಮಳೆಗಾಲದಲ್ಲಿ ಅಲ್ಲಲ್ಲಿ ಮಳೆ ನೀರು ಸೋರುತ್ತಿದ್ದುದಲ್ಲದೆ, ಗೋಡೆಯ ಪೈಂಟಿಂಗ್ ಎದ್ದು ಹೋಗಿತ್ತು.
ಮಾಹೆ ವಿಶ್ವವಿದ್ಯಾನಿಲಯದ ರಜತ ಮಹೋತ್ಸವ ವರ್ಷಾಚರಣೆ ವೇಳೆ ಸಾಮಾಜಿಕ ಬದ್ಧತಾ ಕಾರ್ಯಕ್ರಮದಡಿ ವೆನ್ಲಾಕ್ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನು ನವೀಕರಣಗೊಳಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಇಡೀ ವಿಭಾಗವನ್ನು ಆಕರ್ಷಕಗೊಳಿಸಲಾಗಿದೆ.
-ಡಾ| ಎಂ.ವಿ. ಪ್ರಭು ಡೀನ್, ಕೆಎಂಸಿ ಮಂಗಳೂರು
– ಧನ್ಯಾ ಬಾಳೆಕಜೆ