Advertisement

ಮಾಹೆ :ಏರೋ ಎಂಐಟಿ ತಂಡಕ್ಕೆ ಪ್ರಶಸ್ತಿ

11:32 PM Apr 11, 2019 | sudhir |

ಉಡುಪಿ: ಮಾಹೆಯ ಏರೋಮಾಡೆಲಿಂಗ್‌ ತಂಡ ಏರೋ ಎಂಐಟಿಯು ಮಾರ್ಚ್‌ನಲ್ಲಿ ಯುಎಸ್‌ಎ ಯ ಟೆಕ್ಸಾಸ್‌ನಲ್ಲಿ ನಡೆದ ಎಸ್‌ಎಇ ಏರೋ ಡಿಸೈನ್‌ ಈಸ್ಟ್‌ -2019 ಸ್ಪರ್ಧೆಯಲ್ಲಿ 5ನೇ ಸ್ಥಾನಗಳಿಸಿದೆ. ಇಷ್ಟೇ ಅಲ್ಲದೆ ಉತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡ ಎಂಬ ಕೀರ್ತಿ ಗಳಿಸಿದೆ.

Advertisement

ಭಾರತದ ಇತರ ತಂಡಗಳಾದ ವೆಲ್ಲೂರು ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನೋಲಜಿ, ಡಿಜೆಎಸ್‌ ಎಂಜಿನಿಯರಿಂಗ್‌ ಕಾಲೇಜು, ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು ಮತ್ತು ಮ್ಯಾನೇಜೆ¾ಂಟ್‌ ತಂಡಗಳೂ ಭಾಗವಹಿಸಿದ್ದವು. ಚೀನಾದ ನಿನ್‌ಗಿÕಯಾ ವಿವಿ ಪ್ರಥಮ, ಜೋರ್ಜಿಯಾದ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನೋಲಜಿ ದ್ವಿತೀಯ ಮತ್ತು ವ್ರಾಕ್ಲೋ ವಿಶ್ವವಿದ್ಯಾನಿಲಯ ತೃತೀಯ ಸ್ಥಾನ ಪಡೆ ಯಿತು.

ಎಂಐಟಿ ತಂಡದ ಸದಸ್ಯರಾದ ಶಕ್ತಿ ಹಬೀಬ್‌, ಆರೋನ್‌ ಸಿಕ್ವೇರಾ, ಉಲ್ಲಾಸ್‌ ಭಟ್‌, ಕಿರಣ್‌ ಡಿ’ಸೋಜಾ, ಅಶ್ವಿ‌ನ್‌ ವರ್ಕೆ, ಕೌಸ್ತುಭ್‌ ಭುಜ್‌ಬಲ್‌, ಅಮೇಯಾ ಶಹಾನೆ, ಇಶನ್‌ ವೈದ್ಯ, ಜಾಸ್ಕೃತ್‌ ಭಕಿÏ, ಸೊವಿತ್‌ ಅಗರ್ವಾಲ್‌, ಅದಿತಿ ಕಾಮತ್‌, ಪ್ರಣವ್‌ ಕಾರ್ತಿಕ್‌, ಆರ್ಣವ್‌ ದೇವ್‌, ಹಾರ್ದಿಕ್‌ ಜೋಷಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ತಿಂಗಳ ಹಿಂದೆಯೇ ತರಬೇತಿ ಆಯೋಜಿಸಿದ್ದೆವು. ವಾಯುಬಲ ವೈಜ್ಞಾನಿಕ ಪರಿಣಾಮಕಾರಿಯಾಗಲು ಹಲವು ರೀತಿಯ ಸವಾಲು ಎದುರಿಸಿದೆವು. ಇದಕ್ಕೆ ಬೇಕಿರುವ ಉಪಕರಣ ಮತ್ತು ಇಲೆಕ್ಟ್ರಾನಿಕ್‌ ವಸ್ತುಗಳು ವಿದೇಶದಲ್ಲಿ ಮಾತ್ರ ದೊರೆಯುವ ಕಾರಣ ಅದನ್ನು ಪಡೆಯುವುದು ಸ್ವಲ್ಪ ಕಷ್ಟಕರವಾಗಿತು
-ಶಕ್ತಿ ಹಬೀಬ್‌, ಟೀಮ್‌ ಲೀಡರ್‌

Advertisement

Udayavani is now on Telegram. Click here to join our channel and stay updated with the latest news.

Next