Advertisement

ಮಹದಾಯಿ: ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ

10:20 AM Dec 25, 2019 | Suhan S |

ಧಾರವಾಡ: ಮಹದಾಯಿ ವಿವಾದಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಮಹದಾಯಿಗಾಗಿ ಮಹಾವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು. ನ್ಯಾಯಾಧೀಕರಣದ ಆದೇಶ ದಂತೆ ಮತ್ತು ಮಲಪ್ರಭೆಗೆ ಕೊರತೆಯಾದ ನೀರನ್ನು ಬಿಡಲು ಈ ಕೂಡಲೇ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ನಾಲ್ಕು ದಶಕಗಳ ವ್ಯಾಜ್ಯ ಬಗೆಹರಿಸಬೇಕು. ಪ್ರತಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಮಹದಾಯಿ ವಿಷಯವನ್ನು ಬಗೆಹರಿಸುವುದಾಗಿ ಸರಕಾರಗಳು ಭರವಸೆ ನೀಡುತ್ತವೆ. ಆದರೆ, ಸಮಸ್ಯೆ ಮಾತ್ರ ಇದುವರೆಗೂ ಬಗೆಹರಿಯುತ್ತಿಲ್ಲ ಎಂದು ಆರೋಪಿಸಲಾಯಿತು.

ಈ ಭಾಗದ ನಾಲ್ಕು ಜಿಲ್ಲೆಗಳ ಶಾಸಕರು, ಸಚಿವರು ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಪರಿಸರ ಇಲಾಖೆ ನೀಡಿದ ಅನುಮತಿ ಹಿಂಪಡೆದಿರುವುದನ್ನು ಮರಳಿ ಅನುಮತಿ ಆದೇಶ ನೀಡಬೇಕು. ಈ ವಿವಾದಕ್ಕೆ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸುವಂತೆ ಮನವಿ ಸಲ್ಲಿಸಲಾಯಿತು. ಶಂಕ್ರಪ್ಪ ಅಂಬಲಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಲಕ್ಷ್ಮಣ ಬಕ್ಕಾಯಿ, ಬಾಲಚಂದ್ರ ಸುರಪುರ, ಶರೀಫ ಅಮ್ಮಿನಭಾವಿ, ಹನುಮಂತ ಕಟ್ಟಿಮನಿ, ಶಂಕರ ಸುಗತೆ, ಶೋಭಾ ಚಲವಾದಿ, ಮೋಹನ ಅರ್ಕಸಾಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.-

Advertisement

Udayavani is now on Telegram. Click here to join our channel and stay updated with the latest news.

Next