Advertisement

Mahayuti Government: ನಮ್ಮದು ಬದಲಾವಣೆ ರಾಜಕಾರಣ, ದ್ವೇಷದ್ದಲ್ಲ: ಸಿಎಂ ಫ‌ಡ್ನವೀಸ್‌

03:02 AM Dec 06, 2024 | Team Udayavani |

ಮುಂಬಯಿ: ಬಿಜೆಪಿ ನೇತೃತ್ವದ ಮಹಾಯುತಿ ಕೂಟ ಮಹಾರಾಷ್ಟ್ರಕ್ಕೆ ಸ್ಥಿರ ಸರಕಾರ ನೀಡಲಿದೆ. ನಾವು ಬದಲಾವಣೆಯ ರಾಜಕಾರಣ ಮಾಡಲಿದ್ದೇವೆಯೇ ಹೊರತು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಪ್ರಮಾಣ ವಚನ ಸ್ವೀಕಾರ ಮತ್ತು ಮೊದಲ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಈ ಬಾರಿಯ ಜನಾದೇಶ ಜನರಿಗೆ ನಮ್ಮ ಮೇಲಿರುವ ಪ್ರೀತಿ, ನಿರೀ ಕ್ಷೆಗೆ ಸಾಕ್ಷಿಯಾಗಿದೆ. ಮುಂದಿನ 5 ವರ್ಷಗಳ ಕಾಲ ರಾಜ್ಯದ ಜನತೆ ಸ್ಥಿರವಾದ ಸರಕಾರ ಕಾಣಲಿದ್ದಾರೆ.

ಲಡ್ಕಿ ಬಹಿನ್‌ ಯೋಜನೆ ಅನ್ವಯ ರಾಜ್ಯದ ಅರ್ಹ ಮಹಿಳೆಯರಿಗೆ ನೀಡುತ್ತಿರುವ ಹಣವನ್ನು 1500 ರೂ.ಗಳಿಂದ 2,100 ರೂ.ಗಳಿಗೆ ಏರಿಸುವುದಾಗಿ ಚುನಾವಣೆಗೂ ಮುನ್ನ ಭರವಸೆ ನೀಡಿದ್ದೆವು ಅದನ್ನೂ ಸೇರಿ ಚುನಾವಣೆ ವೇಳೆ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದೂ ಫ‌ಡ್ನವೀಸ್‌ ಹೇಳಿದ್ದಾರೆ.

ಹಿಂದಿನ ಎರಡೂವರೆ ವರ್ಷಗಳಲ್ಲಿ ರಾಜ್ಯವು ಸಾಮಾಜಿಕವಾಗಿ, ಮೂಲಸೌಕರ್ಯಗಳಲ್ಲಿ, ಕೈಗಾರಿಕ ಕ್ಷೇತ್ರದಲ್ಲಿ ಯಾವೆಲ್ಲ ಅಭಿವೃದ್ಧಿಯನ್ನು ಸಾಧಿಸಿತೋ ಅದೇ ವೇಗದಲ್ಲಿ ಮುಂದೆಯೂ ಅಭಿವೃದ್ಧಿಯತ್ತ ಸಾಗಲಿದೆ ಎಂದೂ ಹೇಳಿದ್ದಾರೆ. ಅಲ್ಲದೇ ವಿಧಾನಸಭೆಯಲ್ಲಿ ವಿಪಕ್ಷದ ಸಂಖ್ಯಾಬಲ ಕಡಿಮೆಯಾಗಿದೆ ಆದರೂ ಪ್ರತಿಪಕ್ಷಗಳು ಪ್ರಸ್ತಾಪಿಸುವ ಎಲ್ಲಾ ಮೌಲ್ಯಯುತ ವಿಚಾರಗಳನ್ನು ಸರಕಾರ ಪರಿಗಣಿಸಲಿದೆ ಎಂದು ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ 5 ಲಕ್ಷ ರೂ. ಪರಿಹಾರ ವಿತರಣೆ
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣಚವನ ಸ್ವೀಕರಿಸಿದ ಬೆನ್ನಲ್ಲೇ ದೇವೇಂದ್ರ ಫ‌ಡ್ನವೀಸ್‌ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಸಂಬಂಧಿಸಿದ ಮೊದಲ ಫೈಲ್‌ಗೆ ಸಹಿ ಹಾಕಿದರು. ಪುಣೆ ಮೂಲದ ವ್ಯಕ್ತಿಯೊ ಬ್ಬರಿಗೆ ಅಸ್ಥಿರಜ್ಜು ವರ್ಗಾವಣೆಗೆ 5 ಲಕ್ಷ ರೂ. ಪರಿಹಾರ ವನ್ನು ವಿತರಣೆ ಮಾಡಿದರು.

ಚಿಕಿತ್ಸೆ ಆವಶ್ಯಕತೆ ಇರುವ ಚಂದ್ರಕಾಂತ್‌ ಶಂಕರ್‌ ಕುರಾಡೆ ಅವರ ಪತ್ನಿ ಈ ಮೊದಲೇ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಇದಾದ ಬಳಿಕ ಇಬ್ಬರು ಉಪಮುಖ್ಯಮಂತ್ರಿಗಳ ಜತೆ ಸೇರಿ ಪಕ್ಷದ ಹಿರಿಯ ನಾಯಕರ ಜತೆ ಸಭೆ ನಡೆಸಿದರು. ಈ ವೇಳೆ ರಾಜ್ಯದ ಹಿತದೃಷ್ಟಿಯಿಂದ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next