ದಿಂಡಿಗಲ್ (ತಮಿಳುನಾಡು) : ಹವಾಮಾನ ಬಿಕ್ಕಟ್ಟು ಸೇರಿದಂತೆ ಆಧುನಿಕ ದಿನಮಾನದ ಸವಾಲುಗಳಿಗೆ ಮಹಾತ್ಮ ಗಾಂಧಿಯವರ ಆಲೋಚನೆಗಳು ಉತ್ತರಗಳನ್ನು ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ ಮತ್ತು ‘ಆತ್ಮನಿರ್ಭರ ಭಾರತ್’ ತನ್ನ ಸ್ವಾವಲಂಬನೆಯ ಗುರಿಯತ್ತ ಕೆಲಸ ಮಾಡಲು ತಮ್ಮ ಸರ್ಕಾರವು ಗಾಂಧಿಯವರಿಂದ ಪ್ರೇರಿತವಾಗಿದೆ ಎಂದು ಪ್ರತಿಪಾದಿಸಿದರು.
ಗಾಂಧಿಗ್ರಾಮ್ ರೂರಲ್ ಇನ್‌ಸ್ಟಿಟ್ಯೂಟ್‌ನ 36ನೇ ಘಟಿಕೋತ್ಸವವನ್ನು ಉದ್ದೇಶಿಸಿ ತಮ್ಮ ಭಾಷಣದಲ್ಲಿ “ಗಾಂಧಿಯ ಮೌಲ್ಯಗಳು ಬಹಳ ಪ್ರಸ್ತುತವಾಗುತ್ತಿವೆ” ಎಂದರು.
“ಘರ್ಷಣೆಗಳನ್ನು ಕೊನೆಗೊಳಿಸುವುದು ಅಥವಾ ಹವಾಮಾನ ಬಿಕ್ಕಟ್ಟು ಆಗಿರಲಿ, ಮಹಾತ್ಮ ಗಾಂಧಿಯವರ ಆಲೋಚನೆಗಳು ಇಂದಿನ ಅನೇಕ ಸವಾಲುಗಳಿಗೆ ಉತ್ತರಗಳನ್ನು ಹೊಂದಿವೆ. ಗಾಂಧಿ ಜೀವನ ವಿಧಾನದ ವಿದ್ಯಾರ್ಥಿಗಳಾದ ನಿಮಗೆ ದೊಡ್ಡ ಪರಿಣಾಮ ಬೀರಲು ಉತ್ತಮ ಅವಕಾಶವಿದೆ,” ಎಂದರು.
“ಮಹಾತ್ಮ ಗಾಂಧಿ ಅವರಿಗೆ ಸಲ್ಲಿಸುವ ಅತ್ಯುತ್ತಮ ಗೌರವವೆಂದರೆ ಅವರ ಹೃದಯಕ್ಕೆ ಹತ್ತಿರವಿರುವ ವಿಚಾರಗಳ ಮೇಲೆ ಕೆಲಸ ಮಾಡುವುದು” ಎಂದು ಮೋದಿ ಹೇಳಿದರು.
ಮಹಾತ್ಮರು ಹಳ್ಳಿಗಳಲ್ಲಿ ಖಾದಿಯನ್ನು “ಸ್ವಯಂ ಆಡಳಿತದ ಸಾಧನ” ಎಂದು ನೋಡಿದರು ಮತ್ತು ಅವರಿಂದ ಪ್ರೇರಿತರಾಗಿ ಕೇಂದ್ರವು ದೇಶದ ‘ಆತ್ಮರ್ನಿಭರ್ತ’ದ ಕಡೆಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಗಮನಸೆಳೆದರು.