ನೆಲದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆಯೋ, ಯಾವ ನೆಲದಲ್ಲಿ ನಡೆದಾಡುವ ದೇವರಾಗಿದ್ದ ಶ್ರೀ ಸಿದ್ಧಾರೂಢರು ತಪಸ್ಸು ಮಾಡಿದ್ದರೋ ಅಂತಹ ಕಿತ್ತೂರು ಕರ್ನಾಟಕದ ನೆಲಕ್ಕೆ ಮಹಾತ್ಮಾ ಗಾಂಧೀಜಿ ಅಡಿಯಿಟ್ಟ
ಶತಮಾನೋತ್ಸವ.
Advertisement
ಹೌದು. ಇಡೀ ರಾಜ್ಯ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ,ಗದಗ, ಹಾವೇರಿ ಜಿಲ್ಲೆಗಳಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಾಲಿಟ್ಟು ನೂರು ವರ್ಷಗಳಾಗಿದ್ದು, ಧಾರವಾಡಿಗರು ಈ
ಸಂಭ್ರಮಾಚರಣೆಯಲ್ಲಿದ್ದಾರೆ. ಇಡೀ ಉತ್ತರ ಕರ್ನಾಟಕವನ್ನೇ ಹೊಸ ಮನ್ವಂತರದತ್ತ ಹೆಜ್ಜೆ ಹಾಕುವಂತೆ ಮಾಡಿದ್ದ ರಾಷ್ಟ್ರಪಿತನ ಈ ಭೇಟಿ ಇತಿಹಾಸದ ಪುಟದಲ್ಲಿ ದಾಖಲಾಗಿ ಧಾರವಾಡಿಗರ ಪಾಲಿಗೆ ಅವಿಸ್ಮರಣೀಯ ದಿನವಾಗಿ ದಾಖಲಾಗಿದೆ.
Related Articles
Advertisement
ತಲೆ ಎತ್ತಿದ ರಾಷ್ಟ್ರಧ್ವಜ ಕೇಂದ್ರ: ಮಹಾತ್ಮಾ ಗಾಂಧೀಜಿ ಅವರು ಧಾರವಾಡದಲ್ಲಿ ಖಾದಿ ಗ್ರಾಮೋದ್ಯೋಗ ಪರಿಕಲ್ಪನೆ ಅಡಿಯಲ್ಲಿ ಮಾಡಿದ ಭಾಷಣ, ನೀಡಿದ ಮಾರ್ಗದರ್ಶನದಿಂದಲೇ ಗರಗ, ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ ಗ್ರಾಮಗಳಲ್ಲಿನ ಖಾದಿ ಗ್ರಾಮೋದ್ಯೋಗ ಉಚ್ಛಾಯ ಸ್ಥಿತಿಗೆ ತಲುಪಿತು. ಅತ್ಯಂತ ಹಿಂದುಳಿದ ಹಳ್ಳಿಗಳಾಗಿದ್ದ ಈ ಗ್ರಾಮಗಳು ಇಡೀ ದೇಶಕ್ಕೆ ಬೇಕಾಗುವ ರಾಷ್ಟ್ರಧ್ವಜಗಳನ್ನು ಉತ್ಪಾದಿಸುವ ಕೇಂದ್ರಗಳಾಗಿ ಹೊರಹೊಮ್ಮಲು 1920ರಲ್ಲಿ ಮಹಾತ್ಮಾ ಗಾಂಧೀಜಿ ಅವರು ಇಲ್ಲಿಗೆ ಭೇಟಿ ಕೊಟ್ಟು ಸ್ಫೂರ್ತಿಯ ಮಾತುಗಳನ್ನಾಡಿದ್ಧೇ ಪ್ರಮುಖ ಕಾರಣವಾಗಿತ್ತು. ಇಡೀ ದೇಶಕ್ಕೆ ಇಂದಿಗೂ ರಾಷ್ಟ್ರಧ್ವಜ ಪೂರೈಕೆಯಾಗುವುದು ಇಲ್ಲಿಂದಲೇ ಎಂಬುದು ಜಿಲ್ಲೆಯ ಹೆಮ್ಮೆ.
ಇದನ್ನೂ ಓದಿ:ಕಡಬ: ಇನ್ನೂ ತೆರೆದಿಲ್ಲ ತಾಲೂಕು ಮಟ್ಟದ ಸರಕಾರಿ ಕಚೇರಿಗಳು
ಕಲ್ಲು ಬಿದ್ದವು: ಇಂದಿನ ಎಮ್ಮಿಕೇರಿ ಪ್ರದೇಶದಲ್ಲಿರುವ ಗಾಯಕವಾಡ ಬಂಗಲೆಯಲ್ಲಿ ಮಹಾತ್ಮಾ ಗಾಂಧೀಜಿ ಅವರು ತಂಗಿದ್ದರು. ಕೆಲವಷ್ಟು ಜನ ಯುವಕರನ್ನು ಕರೆದುಕೊಂಡು ಸಭೆ ಮಾಡುತ್ತಿದ್ದಾಗ ಅವರ ಮೇಲೆ ಕಲ್ಲುಗಳು ತೂರಿ ಬಂದವು. ಅಸ್ಪ್ರಶ್ಯತೆ ನಿವಾರಣೆ ಕುರಿತ ಈ ಸಭೆಯನ್ನು ಅಂದು ಹಲವಾರು ಜನ ವಿರೋಧಿಸಿದ್ದರು.
ಶ್ರೀ ಸಿದ್ಧಾರೂಢರಿಗೆ ಬಾಪುರಿಂದ ಖಾದಿ ಅರ್ಪಣೆನ.1ರಂದು ಮಹಾತ್ಮಾ ಗಾಂಧೀಜಿ ಮೊದಲು ಬೆಳಗಾವಿ ಜಿಲ್ಲೆ ನಿಪ್ಪಾಣಿ, ಚಿಕ್ಕೋಡಿಗೆ ಭೇಟಿ ಕೊಟ್ಟು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾರೆ. ನ.9ರಂದು ಬೆಳಗಾವಿಗೆ ಭೇಟಿ ಕೊಟ್ಟು ಅಲ್ಲಿನ ಯುವ ಮುಖಂಡರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಚಳವಳಿ ಕುರಿತು ಸ್ಫೂರ್ತಿಯ ಮಾತುಗಳನ್ನಾಡುತ್ತಾರೆ. ಅಲ್ಲಿಂದ ಬೀಡಿ, ಅಳ್ನಾವರ ಮೂಲಕ ಧಾರವಾಡ ತಲುಪಿದ ಗಾಂಧೀಜಿ ಇಲ್ಲಿನ ಕರಿಗುದರಿ ಹಾಗೂ ಗಾಯಕವಾಡರ ಬಂಗಲೆಯಲ್ಲಿ ತಂಗುತ್ತಾರೆ. ನಂತರ ನ.10ರಂದು ಬೆಳಗ್ಗೆ ಉಳವಿ ಚೆನ್ನಬಸವೇಶ್ವರ
ದೇವಸ್ಥಾನ ಬಯಲಿನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಾರೆ. ನ.11ರಂದು ಹುಬ್ಬಳ್ಳಿಗೆ ಭೇಟಿ ಕೊಟ್ಟು ಅಲ್ಲಿನ ಕೊಪ್ಪೀಕರ ರಸ್ತೆ ಬಯಲಿನಲ್ಲಿ ಗಾಂಧೀಜಿ ಸಾರ್ವಜನಿಕ ಸಭೆ ನಡೆಸುತ್ತಾರೆ. ನಂತರ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಿ ಅವರ ಕೊರಳಿಗೆ ಖಾದಿಯ ಹಾರ ಹಾಕಿ ಅಭಿನಂದಿಸಿ, ಧಾರ್ಮಿಕ ಸಮಾನತೆ, ಸೌಹಾರ್ದತೆಗಾಗಿ ಸಿದ್ಧಾರೂಢರು ಮಾಡಿದ್ದ ಕೆಲಸವನ್ನು ಬಾಪೂಜಿ ಕೊಂಡಾಡಿದ್ದರೆಂಬ ವಿಚಾರ ಗಾಂಧಿ ಸಾಹಿತ್ಯದಲ್ಲಿ ದಾಖಲಾಗಿದೆ ಎನ್ನುತ್ತಾರೆ ಧಾರವಾಡದ ಹಿರಿಯ ಗಾಂಧಿವಾದಿಗಳು.