Advertisement
ನಗರದ ಗಾಂಧಿ ಭವನದಲ್ಲಿ ಮಲ್ಲಸಜ್ಜನ ವ್ಯಾಯಾಮ ಶಾಲೆ, ಭಾರತ್ ಸೇವಾದಳದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ ಭಾರತ-70 ಸ್ಮಾರಕದ ಲೋಕಾರ್ಪಣೆ ಮತ್ತು ಕ್ವಿಟ್ ಇಂಡಿಯಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿಕ್ಕಿದೆಯಾದರೂ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸ್ವಾತಂತ್ರ್ಯಾ ಸಿಗಬೇಕಾಗಿದೆ. ಗಾಂಧಿಜಿಯವರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಬಡತನ ನಿರ್ಮೂಲನೆಗೆ ಶ್ರಮಿಸಬೇಕು. ಅಹಿಂಸೆ, ಸತ್ಯ
ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
Related Articles
Advertisement
ಆ ಪ್ರಯತ್ನ ತಮ್ಮನ್ನು ಗೆಲುವಿನತ್ತ ಕೊಂಡೊಯ್ಯುವಂತಿರಬೇಕು. ಗಾಂಧಿಜಿಯವರು ಸಹ ಪ್ರಯತ್ನದ ಮೂಲಕವೇ ಬ್ರಿಟಿಷರನ್ನು ದೇಶಬಿಟ್ಟು ಓಡಿಸಿ ಸ್ವತಂತ್ರ್ಯಾ ತಂದುಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜ್ಯೋತಿಗೆ ಅದ್ಧೂರಿ ಸ್ವಾಗತ; ಸ್ವತಂತ್ರ ಭಾರತ-70 ಸ್ಮಾರತಕದ ಉದ್ಘಾಟನೆ ನಿಮಿತ್ತ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ತಂದ ಸ್ವತಂತ್ರ ಜ್ಯೋತಿಯನ್ನು ಹಿರಿಯ ಹೋರಾಟಗಾರ ಜಿ.ಎಂ.ಮಾಳಗಿ ಸ್ವಾಗತಿಸಿದರು. ಬಳಿಕ ಮಹರ್ಷಿ ಬುಲುಸು ಸಾಂಬಮೂರ್ತಿ ಮೈದಾನಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸ್ವಾತಂತ್ರ ಸ್ಮಾರಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಇದಕ್ಕೂ ಮುನ್ನ ವಿವಿಧ ಶಾಲಾ ವಿದ್ಯಾರ್ಥಿಗಳು, ಸೇವಾದಳ ವಿದ್ಯಾರ್ಥಿಗಳು ಪ್ರಭಾತ್ ಪೇರಿ ನಡೆಸಿದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಡಾ| ಟೇಕೂರು ರಮಾನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು. ವ್ಯಾಯಾಮ ಶಾಲೆಯ ಟಿ.ಜಿ.ವಿಠ್ಠಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊನೆಯಲ್ಲಿ ಹೋರಾಟಗಾರ ಗಂಗಪ್ಪ ಮುದ್ದಪ್ಪ ಮಾಳಗಿ ಅವರನ್ನುಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ರಾಜ್ಯಾಧ್ಯಕ್ಷ ಎಚ್. ಎಂ.ಗುರುಸಿದ್ದಸ್ವಾಮಿ, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಎಂ.ಎ.ಷಕೀಬ್, ರವೀಂದ್ರ, ಬಾರಿಕೆರ್ ಗಣೇಶ್ ಸೇರಿದಂತೆ ವಿವಿಧ ಶಾಲೆಗಳ
ವಿದ್ಯಾರ್ಥಿಗಳು, ಶಿಕ್ಷಕರು ಇತರರಿದ್ದರು.