Advertisement

ಹುದ್ದಲಿಯಲ್ಲಿ 7 ದಿನ ವಾಸವಿದ್ದ ಮಹಾತ್ಮ ಗಾಂಧೀಜಿ

03:03 PM Aug 10, 2018 | |

ಬಳ್ಳಾರಿ: ರಾಷ್ಟ್ರಪತಿ ಮಹಾತ್ಮಾಗಾಂಧಿಜಿಯವರು ಹುದ್ದಲಿ ಗ್ರಾಮಕ್ಕೆ ಆಗಮಿಸಿ 7 ದಿನಗಳ ಕಾಲ ನಮ್ಮೊಂದಿಗೆ ವಾಸವಿರುವುದು ಅವಿಸ್ಮರಣೀಯವಾದ ಸವಿನೆನಪು ಎಂದು ಹಿರಿಯ ಸ್ವಾತಂತ್ರ್ಯಾ ಹೋರಾಟಗಾರ ಗಂಗಪ್ಪ ಮುದ್ದಪ್ಪ ಮಾಳಗಿ ಸ್ಮರಿಸಿದರು.

Advertisement

ನಗರದ ಗಾಂಧಿ ಭವನದಲ್ಲಿ ಮಲ್ಲಸಜ್ಜನ ವ್ಯಾಯಾಮ ಶಾಲೆ, ಭಾರತ್‌ ಸೇವಾದಳದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ ಭಾರತ-70 ಸ್ಮಾರಕದ ಲೋಕಾರ್ಪಣೆ ಮತ್ತು ಕ್ವಿಟ್‌ ಇಂಡಿಯಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಬೆಳಗಾವಿ ಜಿಲ್ಲೆಯ ಹುದ್ದಲಿ ಗ್ರಾಮದಲ್ಲಿ ದೇಶದ ಸ್ವಾತಂತ್ರ್ಯಾಕ್ಕಾಗಿ ಬ್ರಿಟಿಷರ ವಿರುದ್ಧ ಬ್ರಿಟಿಷರ ಕೆಲಸ ಇಲ್ಲೇನಿದೆ ಎಂಬ ಘೋಷಣೆಗಳನ್ನು ಕೂಗಿ ಮನೆಗೊಬ್ಬರು ಹೋರಾಟಗಾರರು ಜೈಲು ಸೇರಿದ್ದರು ಎಂದು ಸ್ಮರಿಸಿದ ಅವರು, ದೇಶಕ್ಕೆ ಸ್ವತಂತ್ರ ಸಿಕ್ಕ ಬಳಿಕ ಇಂದಿನ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದನ್ನು ತಿಳಿಯಬೇಕು. ದೊರೆತಿರುವ ಸ್ವತಂತ್ರ್ಯಾವನ್ನು ಉಳಿಸಿಕೊಳ್ಳುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದೆ.

ಮೊಮ್ಮಗಳ ಮದುವೆ ನಿಮಿತ್ತ ಮನೆಗೆ ಬಂದಿದ್ದ ಗಾಂಧೀಜಿಯವರು, ಏಳು ದಿನಗಳ ಕಾಲ ಗ್ರಾಮದಲ್ಲಿ ನಮ್ಮೊಂದಿಗೆ ವಾಸವಾಗಿರುವುದು ಅವಿಸ್ಮರಣೀಯ ಎಂದು ಸ್ಮರಿಸಿದರು. ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ, ದೇಶವನ್ನು ಕಟ್ಟುವಲ್ಲಿ ಸಾಕಷ್ಟು ಹೋರಾಟಗಾರರು, ಹಿರಿಯರು ಶ್ರಮಿಸಿದ್ದಾರೆ. ಆದರೂ, ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟು ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯಾ
ಸಿಕ್ಕಿದೆಯಾದರೂ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸ್ವಾತಂತ್ರ್ಯಾ ಸಿಗಬೇಕಾಗಿದೆ. ಗಾಂಧಿಜಿಯವರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಬಡತನ ನಿರ್ಮೂಲನೆಗೆ ಶ್ರಮಿಸಬೇಕು. ಅಹಿಂಸೆ, ಸತ್ಯ
ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು. 

ಯುವಕರು ಯಾವುದೇ ಕಾರ್ಯ ಮಾಡುವ ಮುನ್ನ ಒಂದಷ್ಟು ಭಯ ಸಹಜ. ಆದರೆ, ಪ್ರಯತ್ನ ಮುಖ್ಯ. ಪ್ರಯತ್ನವಿಲ್ಲದೇ ಯಶಸ್ಸು ಅಸಾಧ್ಯ. ಯಶಸ್ಸು ದೊರೆಯುವುದೋ ಇಲ್ಲವೋ ಎಂಬುದರ ಬಗ್ಗೆ ಚಿಂತಿಸಿ ಪ್ರಯತ್ನವನ್ನೇ ಮಾಡದೆ, ಸೋತಿದ್ದೇನೆ ಎಂಬುದಕ್ಕೆ ಅರ್ಥವೇ ಇಲ್ಲ. ಅದ್ದರಿಂದ ಮೊದಲು ಪ್ರಯತ್ನಿಸಬೇಕು. 

Advertisement

ಆ ಪ್ರಯತ್ನ ತಮ್ಮನ್ನು ಗೆಲುವಿನತ್ತ ಕೊಂಡೊಯ್ಯುವಂತಿರಬೇಕು. ಗಾಂಧಿಜಿಯವರು ಸಹ ಪ್ರಯತ್ನದ ಮೂಲಕವೇ ಬ್ರಿಟಿಷರನ್ನು ದೇಶಬಿಟ್ಟು ಓಡಿಸಿ ಸ್ವತಂತ್ರ್ಯಾ ತಂದುಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜ್ಯೋತಿಗೆ ಅದ್ಧೂರಿ ಸ್ವಾಗತ; ಸ್ವತಂತ್ರ ಭಾರತ-70 ಸ್ಮಾರತಕದ ಉದ್ಘಾಟನೆ ನಿಮಿತ್ತ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ತಂದ ಸ್ವತಂತ್ರ ಜ್ಯೋತಿಯನ್ನು ಹಿರಿಯ ಹೋರಾಟಗಾರ ಜಿ.ಎಂ.ಮಾಳಗಿ ಸ್ವಾಗತಿಸಿದರು. ಬಳಿಕ ಮಹರ್ಷಿ ಬುಲುಸು ಸಾಂಬಮೂರ್ತಿ ಮೈದಾನಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸ್ವಾತಂತ್ರ ಸ್ಮಾರಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇದಕ್ಕೂ ಮುನ್ನ ವಿವಿಧ ಶಾಲಾ ವಿದ್ಯಾರ್ಥಿಗಳು, ಸೇವಾದಳ ವಿದ್ಯಾರ್ಥಿಗಳು ಪ್ರಭಾತ್‌ ಪೇರಿ ನಡೆಸಿದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಡಾ| ಟೇಕೂರು ರಮಾನಾಥ್‌ ಅವರು ಅಧ್ಯಕ್ಷತೆ ವಹಿಸಿದ್ದರು. ವ್ಯಾಯಾಮ ಶಾಲೆಯ ಟಿ.ಜಿ.ವಿಠ್ಠಲ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊನೆಯಲ್ಲಿ ಹೋರಾಟಗಾರ ಗಂಗಪ್ಪ ಮುದ್ದಪ್ಪ ಮಾಳಗಿ ಅವರನ್ನು
ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ರಾಜ್ಯಾಧ್ಯಕ್ಷ ಎಚ್‌. ಎಂ.ಗುರುಸಿದ್ದಸ್ವಾಮಿ, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್‌ ಎಂ.ಎ.ಷಕೀಬ್‌, ರವೀಂದ್ರ, ಬಾರಿಕೆರ್‌ ಗಣೇಶ್‌ ಸೇರಿದಂತೆ ವಿವಿಧ ಶಾಲೆಗಳ
ವಿದ್ಯಾರ್ಥಿಗಳು, ಶಿಕ್ಷಕರು ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next