ನ್ಯೂಯಾರ್ಕ್: ಅಮೆರಿಕದ ಮ್ಯಾನ್ ಹಟನ್ ನಗರದ ಯೂನಿಯನ್ ಸ್ಕೇಯರ್ ನಲ್ಲಿ ಅಳವಡಿಸಲಾಗಿದ್ದ ಎಂಟು ಅಡಿ ಎತ್ತರದ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಶನಿವಾರ ಮುಂಜಾನೆ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಅಮೆರಿಕದಲ್ಲಿರುವ ರಾಜತಾಂತ್ರಿಕ ಕಚೇರಿ, 1986 ರ ಅ. 2ರಂದು ಜರಗಿದ್ದ ಗಾಂಧಿಯವರ 117ನೇ ಹುಟ್ಟುಹಬ್ಬದ ಪ್ರಯುಕ್ತ ಈ ಪ್ರತಿಮೆಯನ್ನು ಅನಾವರಣಗೊಳಿಸಿತ್ತು.
ಈ ಕೃತ್ಯವನ್ನು ಭಾರತೀಯ ರಾಜತಾಂತ್ರಿಕ ಕಚೇರಿ ‘ಹೇಯ’ ಎಂದು ಖಂಡಿಸಿದೆ. ” ಈ ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ” ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದರು. ತಕ್ಷಣದ ತನಿಖೆಗಾಗಿ ಈ ವಿಷಯವನ್ನು ಸ್ಥಳೀಯ ಅಧಿಕಾರಿಗಳು ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಈ ಹೇಯ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇದನ್ನೂ ಓದಿ:“ಕೆಟಮಿನ್’ನಿಂದ ಖಿನ್ನತೆ ಶಮನ? ಮಾನಸಿಕ ಸಮಸ್ಯೆಗೆ ಅರಿವಳಿಕೆ ಔಷಧದಿಂದ ಚಿಕಿತ್ಸೆ
ಕಳೆದ ತಿಂಗಳು ಕೆಲವು ಅಪರಿಚಿತ ದುಷ್ಕರ್ಮಿಗಳು ಅಮೇರಿಕಾದ ಕ್ಯಾಲಿಫೋರ್ನಿಯಾ ಉದ್ಯಾನವನದಲ್ಲಿ ಗಾಂಧೀಜಿಯವರ ಮತ್ತೊಂದು ಪ್ರತಿಮೆಯನ್ನು ಧ್ವಂಸಗೊಳಿಸಿ, ಬುಡದಿಂದ ಕಿತ್ತು ಹಾಕಿದ್ದರು. ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳ ಪ್ರತಿಭಟನೆಯ ನಡುವೆ ನಾಲ್ಕು ವರ್ಷಗಳ ಹಿಂದೆ ಪ್ರತಿಮೆ ಸ್ಥಾಪಿಸಲಾಗಿತ್ತು.