Advertisement
ಕಂದಾಯ ಸಚಿವ ಇ.ಚಂದ್ರಶೇಖರನ್ ಗಾಂಧೀಜಿ ಪ್ರತಿಮೆಯ ಅನಾವರಣ ನಡೆಸಿದರು. ಈ ಸಂದರ್ಭ ಮಾತನಾಡಿದ ಸಚಿವ ಮಹಾತ್ಮಾ ಗಾಂಧಿ ಅವರ ಜೀವನ ದರ್ಶನ ಕಾಲಾತೀತವಾದುದು ಮತ್ತು ಈ ಕಾಲಾವಧಿಗೆ ಅನಿವಾರ್ಯವೂ ಹೌದು. ವಿಶ್ವಕ್ಕೆ ಮಹತ್ವದ ಆದರ್ಶವನ್ನು ಕೊಡುಗೆಯಗಿ ನೀಡಿದ ಅವರ ಬದುಕು ಉಳಿದವರಿಗೆ ಪಾಠ. ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳಿಗೆ ಬಾಪೂಜಿ ಅವರ ತತ್ವಗಳು ಹೆಚ್ಚುವರಿ ಪುಷ್ಟಿ ಒದಗಿಸಲಿದೆ. ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಡೆಸುತ್ತಿರುವ ವೇಳೆ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಈ ಪ್ರತಿಮೆಯ ಅನಾವರಣ ಅರ್ಥಪೂರ್ಣ ಎಂದರು.Related Articles
ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಕಾರ್ಗಿಲ್ ಸ್ಮೃತಿ ಮಂಟಪದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪೂರ್ಣ ರೂಪದ ಪ್ರತಿಮೆ ಈಗ ಅನಾವರಣಗೊಂಡಿದೆ. ಈ ಮೂಲಕ ಜಿಲ್ಲಾಧಿ ಕಾರಿ ಕಚೇರಿ ಆವರಣಕ್ಕೆ ಹೊಸ ಶೋಭೆ ಲಭಿಸಿದೆ. 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಈ ಸುಂದರ ಶಿಲ್ಪವನ್ನು ಖ್ಯಾತ ಕಲಾವಿದ ಉಣ್ಣಿ ಕಾನಾಯಿ ನಿರ್ಮಿಸಿದ್ದಾರೆ. ಗ್ರಾಮ ಪಂಚಾಯತ್‌ಗಳ ಸ್ವಂತ ನಿಧಿಯಿಂದ ಮತ್ತು ದೇಣಿಗೆ ಮೂಲಕ ಧನಸಂಗ್ರಹ ಮಾಡಿ ಪ್ರತಿಮೆ ನಿರ್ಮಾಣ ನಡೆಸಲಾಗಿದೆ.
Advertisement