Advertisement

ಮಹಾತ್ಮಗಾಂಧಿ ನರೇಗಾದಿಂದ ಹಸಿರು ಹಳ್ಳಿನಿರ್ಮಾಣ

01:52 PM Jun 05, 2021 | Team Udayavani |

ಮನುಷ್ಯನ ಆಧನಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಭೂಮಿಯ ಮೇಲಿನ ಅರಣ್ಯಪ್ರದೇಶದ ನಿರಂತರ ನಾಶದಿಂದ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮಉಂಟಾಗುತ್ತಿದೆ. ಇದರಿಂದ ಮಳೆ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದೆ.ಅಲ್ಲದೇ ಋತುಮಾನಗಳಲ್ಲಿಯೂ ವ್ಯತ್ಯಾಸವಾಗುತ್ತಿದ್ದು, ಹವಾಮಾನ ವೈಪರಿತ್ಯಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ಅರಣ್ಯ ನಾಶದಿಂದ ಬಯಲಾಗುತ್ತಿರುವಭೂಮಿಗೆ ಹಸಿರು ಹೊದಿಕೆ ಹಾಕುವ ಮೂಲಕ ಭೂತಾಯಿಗೆ ಹಸಿರು ಸೀರೆಉಡಿಸುವುದು.

Advertisement

ಬಯಲು ಭೂಮಿಯನ್ನು ಹಸಿರು ಮಾಡಲು ರಾಜ್ಯ ಸರ್ಕಾರಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(ನರೇಗಾ) ಶೇ.65 ರಷ್ಟು ಆರ್ಥಿಕ ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಕಾಮಗಾರಿಗಳ ಅನುಷ್ಠಾನಕ್ಕೆ ವಿನಿಯೋಗಿಸಲಾಗುತ್ತಿದೆ. ಗ್ರಾಮೀಣ ಕರ್ನಾಟಕದಲ್ಲಿಪರಿಸರ ಸಂರಕ್ಷಣೆಗೆ ಯಾವೆಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆಎಂಬುದರ ಕುರಿತು ಪತ್ರಿಕೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾದ ಕೆ.ಎಸ್‌. ಈಶ್ವರಪ್ಪ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 ಉದ್ಯೋಗ ಖಾತರಿ ಯೋಜನೆ ಹಸಿರು ಹೊದಿಕೆಯಲ್ಲಿ ಯಾವ ರೀತಿಕೊಡುಗೆ ನೀಡುತ್ತಿದೆ ?

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2020-21 ನೇ ಸಾಲಿನಲ್ಲಿ 4729.85ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯೀಕರಣ, 1937.37 ಕಿ.ಮೀ ರಸ್ತೆ ಬದಿ ನೆಡು ತೋಪು,ರೈತರ ಜಮೀನಿನಲ್ಲಿ ಅರಣ್ಯ ಕೃಷಿಗಾಗಿ 50.22 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಈಸಾಲಿನಲ್ಲಿಯೂ ವೈಯಕ್ತಿಕ ಹಾಗೂ ಸಾರ್ವಜನಿಕ ಸ್ಥಳಗಳ ಭೂಮಿಯಲ್ಲಿಅರಣ್ಯೀಕರಣಕ್ಕಾಗಿ 1.75 ಕೋಟಿ ಸಸಿಗಳನ್ನು ಬೆಳೆಸಲಾಗಿದೆ.

ನಾಟಿ ಮಾಡಿದ ಸಸಿಗಳ ಪೋಷಣೆ ಅವಶ್ಯಕತೆಯಿದ್ದು, ಇದಕ್ಕಾಗಿಯೋಜನೆಯಡಿ ಯಾವ ಕ್ರಮಗಳನ್ನು ತೆಗೆದುಕೊಂಡಿದೆ. ?

Advertisement

ಸಮುದಾಯ ಮತ್ತು ವೈಯಕ್ತಿಕ ಜಮೀನಿನಲ್ಲಿ ಸಸಿಗಳನ್ನು ನಾಟಿ ಮಾಡಿದ ನಂತರಅವು ಜೀವಂತವಾಗಿ ಉಳಿಯಲು 03 ವರ್ಷ ನಿರ್ವಹಣೆಗೆ ಅವಕಾಶ ಮಾಡಿದೆ.ಹಾಗೆಯೇ ವೈಯಕ್ತಿಕ ಫ‌ಲಾನು ಭವಿಗಳಿಗೆ ಸಸಿಗಳ ನಿರ್ವಹಣೆಗೆ ನೆರವನ್ನುನೀಡಲಾಗುತ್ತಿದೆ.

 ಜಲಸಂರಕ್ಷಣೆಗೆ ಯೋಜನೆಯಡಿ ಯಾವ ಕ್ರಮಗಳನ್ನುತೆಗೆದುಕೊಳ್ಳಲಾಗಿದೆ.?

ಸನ್ಮಾನ್ಯ ಪ್ರಧಾನ ಮಂತ್ರಿಯವರು ಮಳೆ ನೀರು ಸಂರಕ್ಷಣೆಗೆ ಘೋಷಿಸಿ ರುವ ಜಲಶಕ್ತಿ ಅಭಿಯಾನಕ್ಕೆ ರಾಜ್ಯದಲ್ಲಿಯೂ ಚಾಲನೆ ನೀಡಲಾಗಿದೆ.ಅಭಿಯಾನದಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ಗೋಕಟ್ಟೆ ನಿರ್ಮಾಣ, ಚೆಕ್‌ಡ್ಯಾಂ, ಇಂಗುಗುಂಡಿಗಳು, ರೈತರ ಜಮೀನಿನಲ್ಲಿ ಬದು ಮತ್ತು ಕೃಷಿ ಹೊಂಡ ನಿರ್ಮಾಣ, ಕಲ್ಯಾಣಿಗಳಪುನಶ್ಚೇತನ ಸೇರಿದಂತೆ ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನುಅನುಷ್ಠಾನಗೊಳಿಸಲಾಗುತ್ತಿದೆ.

ಕೋವಿಡ್‌-19 ಸಂಕಷ್ಟಕ್ಕೆ ಒಳಗಾದ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆ ಹೇಗೆ ನೆರವಾಗಿದೆ?

ಕೋರೊನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡು ಗ್ರಾಮಗಳಿಗೆ ಮರಳಿದಕುಟುಂಬಗಳಿಗೆ ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿವಸ ಕೆಲಸನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಸುಮಾರು 57 ಲಕ್ಷ ಜನ ಕೂಲಿಕಾರರಿಗೆ 14.85ಕೋಟಿ ಮಾನವ ದಿನಗಳ ಕೆಲಸ ಹಾಗೂ ಪ್ರಸಕ್ತ ಸಾಲಿನಲ್ಲಿ ಈಗಾಗಲೇ 23 ಲಕ್ಷ ಜನರಿಗೆ2.42 ಕೋಟಿ ಮಾನವ ದಿನ ಕೆಲಸ ನೀಡಿದ್ದೇವೆ. ಈ ಕೋರೊನಾ ಸಂಕಷ್ಟದಲ್ಲಿ ಒಟ್ಟು8.30 ಲಕ್ಷ ಕುಟುಂಬಗಳಿಗೆ ಹೊಸದಾಗಿ ಉದ್ಯೋಗ ಚೀಟಿ ನೀಡಿದ್ದು,ಸುಮಾರು 19.87 ಲಕ್ಷ ಕೂಲಿಕಾರರು ಯೋಜನೆಗೆಸೇರ್ಪಡೆಯಾಗಿದ್ದಾರೆ. ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಪ್ರತಿ ದಿನಕ್ಕೆ ರೂ.289ಕೂಲಿ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ.

 ಕೋರೊನಾ ಲಾಕಡೌನ್‌ ಸಂದರ್ಭದಲ್ಲಿ ನರೇಗಾ ಕೆಲಸಕ್ಕೆಅನುಮತಿಸಿರುವುದರಿಂದ, ಜನರಿಗೆ ಯಾವ ರೀತಿ ಕೆಲಸಗಳನ್ನುನೀಡಲಾಗುತ್ತಿದೆ?

ಕೋವಿಡ್‌-19 ಸೋಂಕು ಹರಡದಂತೆ ಸಾಮಾಜಿಕ ಅಂತರ ಪಾಲಿಸಿಕೊಂಡು ಒಂದುಕಾಮಗಾರಿಯಲ್ಲಿ ಗರಿಷ್ಠ 40 ಜನ ಕೂಲಿಕಾರರು ಮೀರದಂತೆ ಕೆಲಸ ನೀಡಲಾಗುತ್ತಿದೆ.ಕೆಲಸದಲ್ಲಿ ತೊಡಗಿದ ಕೂಲಿಕಾರರಿಗೆ ಮಾಸ್ಕ್ ಧರಿಸುವುದು,ಆಗಾಗ್ಗೆ ಕೈಗಳನ್ನು ಸ್ವತ್ಛವಾಗಿಸಿಕೊಳ್ಳಲು ನೀರು, ಸೋಪು,ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಕೂಲಿಕಾರರಲ್ಲಿ ಕೋವಿಡ್‌ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿನೀಡಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೊಂದು ಅಂಶವೆಂದರೆಸಾಮಾಜಿಕ ಅಂತರದ ದೃಷ್ಟಿಯಿಂದ ವೈಯಕ್ತಿಕ ಕಾಮಗಾರಿ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆನೀಡುತ್ತಿದ್ದೇವೆ. ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಕಾಮಗಾರಿ ಅನುಷ್ಠಾನಕ್ಕಾಗಿಯೋಜನೆಯಡಿ ರೂ.2.5 ಲಕ್ಷ ವರೆಗೆ ನೆರವು ನೀಡಲಾಗುತ್ತಿದೆ.

ಕ್ಷೀಣಿಸುತ್ತಿರುವ ಹಸಿರು ಹೊದಿಕೆಯಿಂದಉಂಟಾಗುತ್ತಿರುವ ಹವಾಮಾನಬದಲಾವಣೆಯನ್ನು ತಡೆಯಲುಪರಿಸರ ಸಮತೋಲನಕಾಯ್ದುಕೊಳ್ಳುವ ಅಗತ್ಯತೆ ಇದೆ. ಇದಕ್ಕಾಗಿ ಮಹಾತ್ಮಾಗಾಂಧಿ ನರೇಗಾ ಯೋಜನೆ ಅಡಿ ಬೃಹತ್‌ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಹಮ್ಮಿಕೊಂಡಿರುವುದು ಶ್ಲಾಘನೀಯ.

ಮಹಾತ್ಮ ಗಾಂಧಿರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯುಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ನಿವಾರಣೆಯೊಂದಿಗೆ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸಿದೆ.ಇದರೊಂದಿಗೆ ಪರಿಸರ ಸಂರಕ್ಷಣೆಗೆ ಪೂರಕಚಟುವಟಿಕೆಗಳು ಗ್ರಾಮೀಣ ಜನರ ಬದುಕನ್ನು ಉತ್ತಮಪಡಿಸಲು ನೆರವಾಗಿದೆ.ರಾಜ್ಯದಲ್ಲಿ ಜೂನ್‌ 5, 2021ರಂದು ಗ್ರಾಮಪಂಚಾಯತಿ ಮಟ್ಟದಲ್ಲಿ ಸಾಂಕೇತಿಕವಾಗಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನುಆಚರಿಸುತ್ತಿದ್ದು, ಈ ಸಾಲಿನಲ್ಲಿ 1.75ಕೋಟಿಸಸಿಗಳನ್ನು ರೈತರ ಜಮೀನುಗಳಲ್ಲಿ ಹಾಗೂಸಾರ್ವಜನಿಕ ಸ್ಥಳಗಳಲ್ಲಿ ನೆಡಲಾಗುವುದು.

ಇದರೊಂದಿಗೆ ಜಲ ಸಂರಕ್ಷಣೆಗೆ ಅರಣ್ಯ ಪ್ರದೇಶದಲ್ಲಿ13.94 ಲಕ್ಷ ಘನ ಮೀಟರ್‌ ಇಂಗು ಗುಂಡಿಗಳನ್ನುನಿರ್ಮಿಸಲಾಗುತ್ತಿದೆ. ಈ ಮಹತ್ತರ ಕಾರ್ಯದಲ್ಲಿತಾವೆಲ್ಲರೂ ಭಾಗವಹಿಸಿ ಪರಿಸರ ಸಂರಕ್ಷಿಸುವಂತೆ ಈಮೂಲಕ ಕರೆ ನೀಡುತ್ತಿದ್ದೇನೆ.

 ಬಿ.ಎಸ್‌.ಯಡಿಯೂರಪ್ಪ ,ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next