ಕೋಲ್ಕತ್ತಾ : ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ ಮಹಾತ್ಮಾ ಗಾಂಧಿಯನ್ನು ಮಹಿಷಾಸುರನಂತೆ ಬಿಬಿಸಿರುವುದು ಭಾರಿ ವಿರೋದಕ್ಕೆ ಕಾರಣವಾಗಿದ್ದು ಕೇಂದ್ರ ಗೃಹ ಸಚಿವಾಲಯದ ಸೂಚನೆ ಮತ್ತು ಪಶ್ಚಿಮ ಬಂಗಾಳದ ಪೊಲೀಸರ ನಿರ್ದೇಶನದ ಮೇರೆಗೆ ಮಹಾತ್ಮಾ ಗಾಂಧಿಯ ಗೊಂಬೆಯನ್ನು ಅಖಿಲ ಭಾರತ ಹಿಂದು ಮಹಾಸಭಾ ತೆಗೆದು ಹಾಕಿದ ಪ್ರಸಂಗ ನಡೆದಿದೆ.
ದೇಶದೆಲ್ಲೆಡೆ ನವರಾತ್ರಿಯ ಪರ್ವಕಾಲದಲ್ಲಿ ದುರ್ಗಾ ಪೂಜೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಅದರಂತೆ ಕೋಲ್ಕತ್ತಾದ ಅಖಿಲ ಭಾರತ ಹಿಂದೂ ಮಹಾಸಭಾವೂ ದುರ್ಗಾ ಪೂಜೆಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದೆ. ಆದರೆ ರವಿವಾರ ನಡೆದ ದುರ್ಗಾ ಪೂಜೆಯಲ್ಲಿ ಮಹಿಷಾಸುರ ಮರ್ದಿನಿಯಂತೆ ಚಿತ್ರಿಸಲಾಗಿತ್ತು. ಅಂದರೆ ದೇವಿ, ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಿದಂತೆ ಗೊಂಬೆಗಳನ್ನು ಜೋಡಿಸಲಾಗಿತ್ತು. ಅದರಂತೆ ದೇವಿಯ ಕಾಲಡಿಯಲ್ಲಿ ಬಿದ್ದ ಮಹಿಷಾಸುರನಾಗಿ ಮಹಾತ್ಮ ಗಾಂಧಿ ಗೊಂಬೆಯನ್ನು ಇಡಲಾಗಿತ್ತು. ಅದನ್ನು ಕಂಡ ಅನೇಕ ಮಂದಿ ಆಕ್ರೋಶ ಹೊರಹಾಕಿದ್ದಾರೆ.
ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸಚಿವಾಲಯ ಹಾಗೂ ಪೊಲೀಸರ ನಿರ್ದೇಶನದಂತೆ ಗಾಂಧಿಯ ಮೂರ್ತಿಯನ್ನು ತೆಗೆಯಲಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡರು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ “ನಾವು ಗಾಂಧಿಯನ್ನು ನಿಜವಾದ ಅಸುರನಂತೆ ನೋಡುತ್ತೇವೆ. ಹಾಗಾಗಿ ಗಾಂಧಿ ಮೂರ್ತಿಯನ್ನು ಈ ರೀತಿಯಲ್ಲಿ ಬಿಂಬಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹತ್ತು ಮಿಲಿಯನ್ ಹಾರ್ಟ್ಸ್ ಗೆದ್ದ ಬನಾರಸ್ ಟ್ರೇಲರ್