ಹುಣಸಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಫೆ. 12ರಂದು ನಡೆಯಲಿರುವ ಸವಿತಾ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಹುಣಸಗಿ ತಹಶೀಲ್ದಾರ್ ಶ್ರೀಧರ ಮುಂದಿನಮನಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶ್ರೀಧರ ಮುಂದಿನಮನಿ ಮಾತನಾಡಿ, ಸವಿತಾ ಮಹರ್ಷಿ ಜಯಂತಿಯನ್ನು ಅತ್ಯಂತ ಶಿಸ್ತು ಬದ್ಧವಾಗಿ ಆಚರಿಸಲಾಗುವುದು. ಸವಿತಾ ಸಮಾಜದ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ನಂತರ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಮಾಳನೂರ ಮಾತನಾಡಿ, ಮಂಗಳವಾರ ನಡೆಯಲಿರುವ ಸವಿತಾ ಮಹರ್ಷಿ ಜಯಂತಿಯನ್ನು ಹುಣಸಗಿ ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ವೃತ್ತದಿಂದ ಪ್ರಾರಂಭವಾಗಿ ಮಹಾಂತಸ್ವಾಮಿ, ವಾಲ್ಮೀಕಿ ವೃತ್ತ, ಕಿತ್ತೂರ ರಾಣಿ ಚನ್ನಮ್ಮ, ಸಂಗೋಳಿ ರಾಯಣ್ಣ ಅಂಬೇಡ್ಕರ್ ವೃತ್ತದ ಮೂಲಕ ಅದ್ಧೂರಿ ಮೇರವಣಿಗೆ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಆಗಮಿಸಲಿದೆ. ನಂತರ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಸುನೀಲ್ ಮೂಲಿಮನಿ, ವೈದ್ಯಾಧಿಕಾರಿ ಸಂತೋಷ ಆಲಗೂರ, ಸಿಆರ್‌ಪಿ ವೀರೇಶ ಹಡಪದ, ಮೂರಾರ್ಜಿ ವಸತಿ ಶಾಲೆಯ ಮುಖ್ಯ ಗುರುಗಳಾದ ಅಶೋಕ ರಾಜನಕೋಳೂರ, ನಿಂಗಪ್ಪ ಸಿಂದಗೇರಿ, ಅಶೋಕ ವಠಾರ, ಅಶೋಕ ಶಹಾಪುರ, ನಿಂಗಣ್ಣ ವಡಗೇರಿ, ಪ್ರಭು ತಿರ್ಥ, ಸಂಗು ಬಾಚಿಮಟ್ಟಿ, ಚಂದ್ರಶೇಖರ ಅನವಾರ, ಚಂದ್ರಶೇಖರ ಬಾಚಿಮಟ್ಟಿ, ವೀರೇಶ ಹುಣಸಗಿ, ಶರಣಪ್ಪ ಹಳ್ಳಿ, ಮಲ್ಲಣ್ಣ ಗುಳಬಾಳ, ದೇವಪ್ಪ ಹುಣಸಗಿ, ಚಂದ್ರಶೇಖರ ವಠಾರ, ಭೀಮಣ್ಣ ನಾಟೇಕಾರ, ನಂದಪ್ಪ ಪೀರಾಪೂರ, ರುದ್ರಪ್ಪ ಮೇಟಿ ಇದ್ದರು.