Advertisement

Ramdurg: ಪ್ರವಾಸಿ ತಾಣವಾಗಿ ಬೆಳೆಯಲಿದೆ ಅಶೋಕ ವನ: ಡಿಸಿ

06:00 PM Sep 21, 2023 | Team Udayavani |

ರಾಮದುರ್ಗ: ಪಟ್ಟಣ ಹೊರವಲಯದ ಶಿವನಮೂರ್ತಿಯ ಅಶೋಕ ವನದ ರಾಮೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಧಿಕಾರಿ ಡಾ| ನಿತೇಶ ಪಾಟೀಲ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶಿವನಮೂರ್ತಿ ಅಶೋಕ ವನದಲ್ಲಿ  ನಿರ್ಮಿಸಲಾಗುತ್ತಿರುವ ಸಾಯಿ ಮಂದಿರ, ನಂದಿ ವಿಗ್ರಹ, ಶಿವನಮೂರ್ತಿ ಹಾಗೂ ರಾಮೇಶ್ವರ ದೇವಸ್ಥಾನವನ್ನು ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಾಲೂಕಿನಲ್ಲಿ ಪ್ರವಾಸಿ ತಾಣವಾಗಿ ನಿರ್ಮಾಣವಾಗುತ್ತಿರುವ ಈ ಕ್ಷೇತ್ರ ಮುಂದೊಂದು ದಿನ ಅತ್ಯಂತ ಭವ್ಯವಾಗಿ ಬೆಳೆಯಲಿದೆ. ಧಾರ್ಮಿಕ ಪುಣ್ಯಕ್ಷೇತ್ರವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳ ಕುರಿತಾದ ನೀಲನಕ್ಷೆಯಯನ್ನು ಜಿಲ್ಲಾಧಿಕಾರಿಗಳಿಗೆ ಸರಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ ವಿವರಿಸಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಯುಕ್ತ ಟ್ರಸ್ಟ್‌ ವತಿಯಿಂದ ಜಿಲ್ಲಾಧಿಕಾರಿಗಳನ್ನು ಸತ್ಕರಿಸಲಾಯಿತು. ಮುಖಂಡರಾದ ಪ್ರದೀಪ
ಪಟ್ಟಣದ, ಪರಪ್ಪ ಜಂಗವಾಡ, ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ರಮೇಶ ಬಂಡಿವಡ್ಡರ, ಹನಮಂತ ಕೋಟಗಿ, ಸಂತೋಷ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿವಿಧ ಕಾಮಗಾರಿಗಳ ವೀಕ್ಷಣೆ: ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ  ಅವರು, ಪುರಸಭೆಯ ವ್ಯಾಪ್ತಿಯಲ್ಲಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಕಾಮಗಾರಿಗಳ ವೀಕ್ಷಣೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ್ದು, ಅವುಗಳ
ಗುಣಮಟ್ಟದ ವರದಿ ಪಡೆದ ನಂತರವೇ ಬಿಲ್‌ ಸಂದಾಯ ಮಾಡಲಾಗುವದು. ಅಲ್ಲದೇ ನಗರೋತ್ಥಾನ ಯೋಜನೆಯಡಿ ಇನ್ನೂ 1.5 ಕೋಟಿ ಅನುದಾನದ ಕಾಮಗಾರಿಗಳಿಗೆ ವರ್ಕ್‌ ಆರ್ಡರ್‌ ನೀಡಿಲ್ಲ. ಅವುಗಳನ್ನು ಪರಿಶೀಲಿಸಿ ಕಾಮಗಾರಿ ಕೈಗೊಳ್ಳಲಾಗುವದು. ಅಲ್ಲದೇ ಶಾಸಕರೊಂದಿಗೆ ತಾಲೂಕಿನ ಅನೇಕ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದ್ದು, ಅವುಗಳನ್ನು ಕೈಗೊಳ್ಳಲು ಕ್ರಮವಹಿಸುವುದಾಗಿ ತಿಳಿಸಿದರು.

Advertisement

ಈ ಮೊದಲು ರಾಮದುರ್ಗ ತಾಲೂಕನ್ನು ಬರ ಪಟ್ಟಯಿಂದ ಕೈಬಿಡಲಾಗಿತ್ತು. ಶಾಸಕರು ಸಚಿವರ ಗಮನಕ್ಕೆ ತಂದು ಬರಗಾಲ ತಾಲೂಕು ಘೋಷಣೆಗೆ ಶ್ರಮಿಸಿದ್ದಾರೆ. ಸದ್ಯದಲ್ಲಿಯೇ ಕೇಂದ್ರ ವೀಕ್ಷಣೆ ತಂಡ ಆಗಮಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next