Advertisement
ನಗರ ನಕ್ಸಲರನ್ನು (Urban Naxals) ಮಟ್ಟ ಹಾಕಲು ಮುಖ್ಯ ಮಂತ್ರಿ ಏಕ ನಾಥ ಶಿಂಧೆ ನೇತೃ ತ್ವದ ಸರಕಾರವು ಮಹಾರಾಷ್ಟ್ರದ ವಿಧಾನಸಭೆಯಲ್ಲಿ “ಮಹಾ ರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ’ (ಎಂಎಸ್‌ಪಿಸಿ) ಮಸೂದೆ ಮಂಡಿಸಿದೆ.ಈ ವಿವಾದಿತ ಮಸೂದೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆ ಯು ತ್ತಿವೆ. ಕೇಂದ್ರ ಸರಕಾರದ ಪ್ರಕಾರ “ಅರ್ಬನ್ ನಕ್ಸಲ್’ ಅಥವಾ “ನಗರ ನಕ್ಸಲ್’ ಎಂಬ ಪದ ಬಳ ಕೆಯ ಇಲ್ಲ! ಆದರೂ ಮಹಾ ರಾಷ್ಟ್ರ ಜಾರಿಗೆ ತರಲು ಹೊರಟಿರುವ ಈ ಕಾಯ್ದೆಯು, ಜನರ ಗಮನವನ್ನು ಬೇರೆ ಡೆಗೆ ಸೆಳೆ ಯುವ ಪ್ರಯತ್ನ ಎಂದು ವಿಪ ಕ್ಷ ಗಳು ವಾದಿ ಸಿ ದರೆ, ಈಗ ನಕ್ಸಲರ ವ್ಯಾಪ್ತಿ ಕೇವಲ ಕಾಡಷ್ಟೇ ಅಲ್ಲ. ಅವರಿಗೆ ನೆರವು ಒದಗಿಸುವ ದೊಡ್ಡ ಗುಂಪೇ ನಗರದಲ್ಲಿದೆ. ಅಂಥ ವ ರಿಗೆ ಶಿಕ್ಷೆ ನೀಡಲು ಕಾಯ್ದೆ ಅಗತ್ಯ ಎಂಬ ವಾದವನ್ನು ಮಹಾರಾಷ್ಟ್ರ ಸರಕಾರ ಮುಂದಿಡುತ್ತಿದೆ.
7 ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ
1. ಕಾನೂನು ಬಾಹಿರ ಚಟುವಟಿಕೆ: ಸಾರ್ವಜನಿಕ ಸುವ್ಯವಸ್ಥೆ, ಶಾಂತಿ ಮತ್ತು ನೆಮ್ಮದಿಗೆ ಅಪಾಯ ಅಥವಾ ಅಪಾಯವನ್ನುಂಟುಮಾಡುವ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಅಡ್ಡಿಪಡಿಸುವ ಅಥವಾ ಹಸ್ತಕ್ಷೇಪ ಮಾಡುವ ಅಥವಾ ಕಾನೂನು ಅಥವಾ ಅದರ ಸ್ಥಾಪಿತ ಸಂಸ್ಥೆಗಳು ಮತ್ತು ಸಿಬಂದಿಯ ಆಡಳಿತಕ್ಕೆ ಅಡ್ಡಿಪಡಿಸುವ ಅಥವಾ ಹಸ್ತಕ್ಷೇಪ ಮಾಡುವ ಯಾವುದೇ ಕ್ರಮವನ್ನು ಉದ್ದೇ ಶಿತ ಮಸೂ ದೆ ಯಲ್ಲಿ ಕಾನೂನು ಬಾಹಿರ ಚಟು ವ ಟಿಕೆ ಎಂದು ತಿಳಿ ಸ ಲಾ ಗಿ ದೆ. 2. ಕಾನೂನು ಬಾಹಿರ ಸಂಘಟ ನೆ: ಯಾ ವುದೇ ಕಾನೂ ನು ಬಾ ಹಿರ ಚಟು ವ ಟಿ ಕೆ ಯಲ್ಲಿ ಪಾಲ್ಗೊ ಳ್ಳು ವುದು. ಪ್ರತ್ಯ ಕ್ಷ ವಾಗಿ ಇಲ್ಲವೇ ಪರೋ ಕ್ಷ ವಾಗಿ ಉತ್ತೇ ಜನ, ನೆರವು ನೀಡುವ ಸಂಘ ಟ ನೆ.
3ಮೂರು ಲಕ್ಷ ರೂ. ದಂಡ, 3 ವರ್ಷ ಜೈಲು: ಕಾನೂ ನು ಬಾ ಹಿರ ಸಂಘ ಟ ನೆಯ ಸಭೆ, ಚಟು ವ ಟಿ ಕೆ ಗ ಳಲ್ಲಿ ಪಾಲ್ಗೊ ಂಡಿರುವುದು ಸಾಬೀ ತಾದರೆ ಅಂಥ ವ್ಯಕ್ತಿ ಗಳಿಗೆ ಗರಿಷ್ಠ 3 ವರ್ಷ ಜೈಲು ಮತ್ತು 3 ಲಕ್ಷ ರೂ. ದಂಡ ವಿಧಿಸಲು ಅವ ಕಾ ಶ.
Related Articles
Advertisement
ನಕ್ಸಲ್‌ವಾದ ಎಂದರೇನು?ನಕ್ಸಲ್‌ವಾದ ಎನ್ನು ವುದು ಉಗ್ರ ಗಾಮಿ ಸಿದ್ಧಾಂತ ವಾ ಗಿದ್ದು, ಪ್ರಜಾಪ್ರಭುತ್ವ ಮತ್ತು ಪ್ರಜಾ ಸ ತ್ತಾ ತ್ಮಕ ಪ್ರಕ್ರಿ ಯೆ ಗ ಳಲ್ಲಿ ಅದು ವಿಶ್ವಾ ಸ ವನ್ನು ಇರಿ ಸು ವು ದಿಲ್ಲ. ತುಳಿ ತ ಕ್ಕೊ ಳ ಗಾ ದ ವರು, ದೌರ್ಜ ನ್ಯ ಕ್ಕೊ ಳ ಗಾ ದ ವರ ಪರ ಮತ್ತು ನ್ಯಾಯ ಕ್ಕಾಗಿ ಹೋರಾಟ ನಡೆ ಸು ವು ದಾಗಿ ಹೇಳಿ ಕೊ ಳ್ಳುವ ನಕ್ಸ ಲ್ ವಾದ ಅಥವಾ ನಕ್ಸ ಲರು ಕಾನೂನು ಬಾಹಿರ ಚಟು ವ ಟಿಕೆ ನಡೆ ಸು ತ್ತಾರೆ. ತಮ್ಮ ಸಾಧ ನೆ ಗಾಗಿ ಸಶಸ್ತ್ರ ಬಂಡಾ ಯವನ್ನು ಸಾರು ತ್ತಾರೆ. ವಿಶೇಷ ವಾಗಿ ಸರಕಾರ, ಪೊಲೀ ಸರು, ಭದ್ರತಾ ಪಡೆ ಗಳ ವಿರುದ್ದ ಹಿಂಸಾಚಾರವನ್ನು ಸಾಧಿಸು ತ್ತಾರೆ. ಯಾರು ನಗರ ನಕ್ಸಲರು?
ಸರ ಳ ವಾಗಿ ಹೇಳ ಬೇ ಕೆಂದರೆ, ನಗರ ಪ್ರದೇ ಶ ಗ ಳಲ್ಲಿ ವಾಸಿ ಸು ತ್ತಿದ್ದು ನಕ್ಸಲ್ ಚಟು ವ ಟಿ ಕೆಗಳಿಗೆ ಸಹಾಯ ಮಾಡು ವ ವರು ಹಾಗೂ ನಕ್ಸ ಲರ ಸಹಾ ನು ಭೂ ತಿ ಗ ಳನ್ನು ನಗ ರ ನಕ್ಸ ಲರು ( ಅ ರ್ಬನ್ ನಕ್ಸ ಲ್ ) ಎಂದು ಕರೆ ಯ ಲಾ ಗು ತ್ತದೆ. ಬಲ ಪಂಥೀಯರು ಈ ಪದ ವನ್ನು ಹೆಚ್ಚು ಬಳ ಸು ತ್ತಾರೆ. ಬಾಲಿ ವುಡ್ ಚಿತ್ರ ರಂಗ ದ ನಿರ್ದೇ ಶಕ ವಿವೇಕ ಅಗ್ನಿ ಹೋತ್ರಿ “ಅರ್ಬನ್ ನಕ್ಸಲ್’ ಎಂಬ ಪುಸ್ತಕ ಕೂಡ ಬರೆ ದಿ ದ್ದಾರೆ. ಎಡ ಚಿಂತ ನೆಯ ಬುದ್ಧಿ ಜೀ ವಿ ಗಳು, ಕೆಲವು ಸಾಮಾ ಜಿಕ ಕಾರ್ಯ ಕ ರ್ತರು, ವಕೀ ಲರು, ಪತ್ರ ಕ ರ್ತರು ಸೇರಿ ಸಂಘ ಸಂಸ್ಥೆ ಗ ಳನ್ನು “ಅರ್ಬನ್ ನಕ್ಸಲ್’ ಎಂದು ದೂಷಿ ಸ ಲಾ ಗು ತ್ತದೆ. ದಿಲ್ಲಿ ಸಿಎಂ ಅರ ವಿಂದ್ ಕೇಜ್ರಿ ವಾಲ್ ಅವ ರನ್ನು ಬಿಜೆಪಿ ಆಗಾಗ ನಗರ ನಕ್ಸಲ್ ಎಂದು ಛೇಡಿ ಸು ತ್ತ ದೆ! ನಗರ ನಕ್ಸಲ್ ಆರೋ ಪಿ ತ ರು
2018ರಲ್ಲಿ ಮಹಾ ರಾ ಷ್ಟ್ರ ದಲ್ಲಿ ಸಂಭ ವಿ ಸಿದ ಭೀಮಾ ಕೋರೆ ಗಾಂವ್ ಹಿಂಸಾ ಚಾ ರ ಸಂಬಂಧ ಬಂಧಿ ಸ ಲಾದ ಪ್ರಮುಖ ಸಾಮಾ ಜಿಕ ಕಾರ್ಯ ಕ ರ್ತರು, ಎಡ ಚಿಂತ ನಾ ಕಾ ರ ರನ್ನು ಕೆಲ ವು ಮಾಧ್ಯ ಮ ಗಳು ಮತ್ತು ಬಲ ಪಂಥೀ ಯರು “ನಗರ ನಕ್ಸ ಲರು’ ಎಂದೇ ಸಂಬೋಧಿಸು ತ್ತಾರೆ. ಈ ಪ್ರಕ ರ ಣ ದಲ್ಲಿ 300 ಜನರನ್ನು ಬಂಧಿ ಸ ಲಾ ಗಿತ್ತು. ಸುಧೀರ್ ಧವಳೆ, ರೋನಾ ವಿಲ್ಸನ್, ಶೋಮಾ ಶೋನ್, ಮಹೇಶ್ ರಾವತ್, ಸುರೇಂದ್ರ ಗಾಡ್ಲಿಂಗ್, ವರ ವರ ರಾವ್, ಸುಧಾ ಭಾರ ದ್ವಾಜ್, ವೆರ್ನಾನ್ ಗೋನ್ಸಾಲ್Ì, ಅರುಣ್ ಫೆರಾ ರಿಯಾ ನಗರ ನಕ್ಸಲ್ ಎಂಬ ಆಪಾ ದಿ ತರ ಪಟ್ಟಿ ಯ ಲ್ಲಿ ರುವ ಪ್ರಮುಖ ಸಾಮಾ ಜಿಕ ಕಾರ್ಯಕರ್ತರಾಗಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ರಿಂದಲೂ ಬಳಕೆ!
ಕೇಂದ್ರ ಸರಕಾರವೇ ಅಧಿಕೃತ ವಾಗಿ ಅರ್ಬನ್ ನಕ್ಸಲ್ ಪದ ಬಳಸುವುದಿಲ್ಲವಾದರೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಬಹು ತೇಕ ಸಚಿ ವರು, ಸಂಸ ದರು ಈ ಪದವನ್ನು ಬಳ ಸು ತ್ತಾರೆ. ಕಳೆದ ಲೋಕ ಸಭೆ ಚುನಾ ವಣೆ ವೇಳೆಯೂ ಮೋದಿ ಅರ್ಬನ್ ನಕ್ಸಲ್ ಪದ ಬಳ ಸಿ ದ್ದಾರೆ. ಕಾಂಗ್ರೆಸ್ ಪಕ್ಷವು ಅರ್ಬನ್ ನಕ್ಸ ಲ ರಿಂದ ನಡೆ ಯು ತ್ತಿದೆ ಎಂದು ಆರೋ ಪಿ ಸಿ ದ್ದರು. ಬಿಜೆ ಪಿಯ ಬಹು ತೇಕ ನಾಯ ಕರು ಈ ಪದ ವನ್ನು ಬಳಸಿ ಟೀಕೆ ಮಾಡುತ್ತಾರೆ. ತೆಲಂಗಾಣ, ಆಂಧ್ರ, ಒಡಿಶಾದಲ್ಲೂ ಕಾಯ್ದೆ
ಮಹಾರಾಷ್ಟ್ರದಲ್ಲಿ ಮುಕ್ತವಾಗಿಯೇ ನಗರ ನಕ್ಸ ಲ್ ನಿಯಂತ್ರಣ ಅಂಶ ವನ್ನು ಒಳ ಗೊಂಡಿ ರುವ ಮಸೂದೆಯನ್ನು ಮಂಡಿ ಸ ಲಾ ಗಿದೆ. ಇದೇ ಮಾದ ರಿಯ ಕಾನೂನುಗಳು ಕೆಲವು ರಾಜ್ಯ ಗ ಳಲ್ಲಿ ಜಾರಿ ಯ ಲ್ಲಿವೆ. ಈ ಕಾಯ್ದೆ ಗ ಳಲ್ಲಿ ಪ ರೋ ಕ್ಷ ವಾಗಿ ಪ್ರಸ್ತಾವಿಸ ಲಾ ಗಿದೆ. ಛತ್ತೀ ಸ್ ಗಢ, ತೆಲಂಗಾಣ, ಆಂಧ್ರಪ್ರ ದೇಶ, ಒಡಿಶಾ ಸೇರಿ ಕೆಲವು ರಾಜ್ಯ ದಲ್ಲಿ ಸಾರ್ವ ಜ ನಿಕ ಭದ್ರತಾ ಕಾಯ್ದೆ ಗಳು ಅಸ್ತಿ ತ್ವ ದ ಲ್ಲಿವೆ. ನಕ್ಸಲ್ ಸಂಘ ಟ ನೆ ಗಳು ಮತ್ತು ನಿಷೇ ಧಿತ 48 ಸಂಸ್ಥೆ ಗಳ ಕಾನೂನು ಬಾಹಿರ ಚಟು ವ ಟಿ ಕೆ ಗ ಳನ್ನು ಈ ಕಾಯ್ದೆಯ ಮೂಲಕ ನಿಯಂತ್ರಿ ಸ ಲಾ ಗು ತ್ತದೆ. ಅರ್ಬನ್ ನಕ್ಸಲ್: ಕೇಂದ್ರಕ್ಕೇ ಗೊತ್ತಿಲ್ಲ ಬಲಪಂಥೀಯರು ಮತ್ತು ಬಲ ಪಂಥೀಯ ಸಹಾನುಭೂತಿಗಳು ಹೆಚ್ಚಾಗಿ ಬಳಸುವ ಈ ಅರ್ಬನ್ ನಕ್ಸಲ್ ಪದ ವನ್ನು ಸರಕಾರ ಕೂಡ ಬಳ ಸು ತ್ತಿ ದೆಯೇ ಎಂದು 2020ರಲ್ಲಿ ಟಿಎಂಸಿ ಸಂಸ ದ ರೊ ಬ್ಬರು ಸರಕಾರಕ್ಕೆ ಪ್ರಶ್ನೆ ಕೇಳಿ ದ್ದರು. ಈ ಕುರಿತು ಸಂಸ ತ್ತಿ ನಲ್ಲಿ ಲಿಖೀತ ಉತ್ತರ ನೀಡಿದ್ದ ಅಂದಿನ ಗೃಹ ಇಲಾ ಖೆಯ ರಾಜ್ಯ ಸಚಿವ ಜಿ.ಕಿ ಶನ್ ರೆಡ್ಡಿ, “ಕೇಂದ್ರ ಗೃಹ ವ್ಯವ ಹಾ ರಗಳ ಸಚಿ ವಾ ಲಯವು ಅರ್ಬನ್ ನಕ್ಸಲ್ ಎಂಬ ಪದ ವನ್ನು ಬಳಸುತ್ತಿಲ್ಲ’ ಎಂದು ಉತ್ತರಿಸಿದ್ದರು.