Advertisement

ಮಳೆಗೆ ನಲುಗಿದ ಮುಂಬಯಿ : ನದಿ ಪ್ರವಾಹಕ್ಕೆ ಇಬ್ಬರ ಬಲಿ, ಮಹಾರಾಷ್ಟ್ರದಲ್ಲಿ ರೆಡ್‌ ಅಲರ್ಟ್‌

12:30 AM Jul 08, 2022 | Team Udayavani |

ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಸದ್ಯ ಕ್ಕಂತೂ ವರುಣನ ಆರ್ಭಟ ನಿಲ್ಲುವಂತೆ ಕಾಣುತ್ತಿಲ್ಲ. ಮುಂಬಯಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಪುಣೆ, ಸತಾರಾ, ಮುಂಬಯಿ, ಫಾಲ್ಗರ್, ಥಾಣೆ ಮತ್ತು ಕೊಲ್ಹಾಪುರಗಳಲ್ಲಿ ಮುಂದಿನ 3 ದಿನಗಳ ಕಾಲ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಕೊಲ್ಹಾಪುರದ ಪಂಚಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ರಾತ್ರಿಪೂರ್ತಿ ಮಳೆ ಸುರಿದರೆ ಶುಕ್ರವಾರದ ವೇಳೆಗೆ ನದಿಯು ಅಪಾ ಯದ ಮಟ್ಟ ಮೀರಿ ಹರಿಯಲಿದೆ ಎಂಬ ಆತಂಕ ಸ್ಥಳೀಯರದ್ದು. ಪ್ರವಾಹಭೀತಿ ಇರುವ ಕಾರಣ ಇಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ ಎರಡು ತಂಡಗಳನ್ನು ನಿಯೋಜಿಸಲಾಗಿದೆ.

ಚಿಪ್ನುನ್ ನ ಪರಶುರಾಮ ಘಾಟ್‌ ಸೆಕ್ಷನ್‌ನಲ್ಲಿ ಗುರುವಾರ ಭೂಕುಸಿತ ಉಂಟಾದ ಕಾರಣ ಮುಂಬಯಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ ವಾಹನಗಳನ್ನು ಪರ್ಯಾಯ ಮಾರ್ಗ ಗಳ ಮೂಲಕ ಕಳುಹಿಸಲಾಗಿದೆ. ಮುಂದಿನ 2 ದಿನಗಳ ಕಾಲ ಘಾಟ್‌ ರಸ್ತೆ ಮುಚ್ಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿ ಹೋದರು: ಫಾಲ್ಗರ್ ಜಿಲ್ಲೆಯಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ಇಬ್ಬರು ಕೊಚ್ಚಿ ಹೋಗಿದ್ದಾರೆ. ಮನೆಯೊಂದು ಬಿದ್ದ ಪರಿಣಾಮ ಒಬ್ಬರು ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ ಕನಿಷ್ಠ 32 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.

ಬೀಚ್‌ ಭೇಟಿಗೆ ಕಾಲಮಿತಿ: ಭಾರೀ ಮಳೆ ಹಿನ್ನೆಲೆ ಮುಂಬಯಿನ ಎಲ್ಲ ಬೀಚ್‌ಗಳಲ್ಲೂ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ಗಂಟೆಯ ಅನಂತರ ಯಾರಿಗೂ ಪ್ರವೇಶವಿಲ್ಲ ಎಂದು ಬೃಹನ್ಮುಂಬೈ ಪಾಲಿಕೆ ಘೋಷಿಸಿದೆ.

Advertisement

ಇನ್ನೂ 4 ದಿನ ಬಿಡುವಿಲ್ಲ: ದಕ್ಷಿಣ ಗುಜರಾತ್‌ ಮತ್ತು ಸೌರಾಷ್ಟ್ರ ಪ್ರದೇಶದಲ್ಲಿ ಗುರುವಾರವೂ ನಿರಂತರವಾಗಿ ಮಳೆ ಸುರಿದಿದೆ. 4 ದಿನ ಪರಿಸ್ಥಿತಿ ಹೀಗೆಯೇ ಮುಂದು ವರಿ ಯಲಿದೆ. ಸಮುದ್ರಕ್ಕಿ ಳಿಯದಂತೆ ಮೀನುಗಾರರಿಗೆ ಎಚ್ಚರಿಸಲಾಗಿದೆ.

ಹಿಮಾಚಲದಲ್ಲಿ ಆರೆಂಜ್‌ ಅಲರ್ಟ್‌: ಗುರುವಾರ ಹಿಮಾಚಲ ಪ್ರದೇಶದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಶುಕ್ರವಾರದಿಂದ ಜು.11ರ ವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರ ವಾರ ಮತ್ತು ಶನಿವಾರಕ್ಕೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಬಿಯಾಸ್‌, ಪರ್ಬತಿ, ಸರ್ವರಿ, ಮನಲ್ಸು, ಅಲ್ಲೆ„ನ್‌ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಉತ್ತರಾ ಖಂಡದ ಡೆಹ್ರಾಡೂನ್‌, ಹರಿದ್ವಾರ, ತೆಹ್ರಿ, ನೈನಿತಾಲ್‌, ಪೌರಿ ಮತ್ತು ಅಲ್ಮೋರಾ ಜಿಲ್ಲೆಗಳಲ್ಲಿ ಶುಕ್ರ ವಾರ ಭಾರೀ ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

24 ಗಂಟೆ: 11 ಸಾವು
ಮಧ್ಯಪ್ರದೇಶದ 4 ಜಿಲ್ಲೆಗಳಲ್ಲಿ ಮಳೆ ಯೊಂದಿಗೆ ಸಿಡಿಲಿನ ಅಬ್ಬರವೂ ಮುಂದು ವರಿದಿದ್ದು, ಕೇವಲ 24 ಗಂಟೆಗಳಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದಲ್ಲಿ ಒಟ್ಟಾರೆ ಮೃತಪಟ್ಟವರ ಸಂಖ್ಯೆ 45ಕ್ಕೇರಿಕೆ ಯಾಗಿದೆ. ಅಜ್ನೋಲ್‌ ಅರಣ್ಯಕ್ಕೆ ಪಿಕ್‌ನಿಕ್‌ ತೆರಳಿದ್ದ 6 ಮಂದಿ ಸ್ನೇಹಿತರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹವಾಮಾನ ವೈಪ ರೀತ್ಯದಿಂದಾಗಿ ಮುಂಗಾರಿನ ಅವಧಿ ಯಲ್ಲೂ ಸಿಡಿಲು ಬಡಿಯುವ ಪ್ರಕರಣ ಗಳು ಹೆಚ್ಚುತ್ತಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next