Advertisement

ಮಹಾ ಕುಟುಂಬ ರಾಜಕಾರಣ ; 36 ಸಚಿವರಲ್ಲಿ 18 ಮಂದಿ ನೇತಾರರ ಸಂಬಂಧಿಕರು

10:00 AM Jan 03, 2020 | Hari Prasad |

ಮುಂಬಯಿ/ಪಾಲ್ಘರ್‌: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಸರಕಾರದಲ್ಲಿ 18 ಸಚಿವರು ರಾಜಕಾರಣಿಗಳ ಕುಟುಂಬಸ್ಥರೇ ಆಗಿದ್ದಾರೆ. ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ 36 ಸಚಿವರ ಪೈಕಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ಎನ್‌ಸಿಪಿ ನಾಯಕ ಸುನೀಲ್‌ ಥಟ್ಕರೆ ಪುತ್ರಿ ಅದಿತಿ ಥಟ್ಕರೆ, ಕಾಂಗ್ರೆಸ್‌ ನಾಯಕ ವಿಲಾಸ್‌ ರಾವ್‌ ದೇಶ್‌ಮುಖ್‌ ಪುತ್ರ ಅಮಿತ್‌ ದೇಶ್‌ಮುಖ್‌ ಸಹಿತ 18 ಸಚಿವರು ಮುಖಂಡರ ಸಂಬಂಧಿಕರೇ ಆಗಿದ್ದಾರೆ. ಈ ಕುರಿತು ಮೂರು ಪಕ್ಷಗಳಲ್ಲೂ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

Advertisement

ಶಿವಸೇನೆಯಿಂದ ಶಾಸಕ ಆದಿತ್ಯ ಠಾಕ್ರೆ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದಕ್ಕೆ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

19 ಮಂದಿ ಬಂಧನ: ಕಾಂಗ್ರೆಸ್‌ ಶಾಸಕ ಸಂಗ್ರಾಮ್‌ ಥೋಪ್ಟೆಗೆ ಸಚಿವ ಸ್ಥಾನ ನಿರಾಕರಿಸಿದ್ದಾಗಿ ಪಕ್ಷ ಕಚೇರಿಯಲ್ಲಿ ದಾಂಧಲೆ ನಡೆಸಿದ ಪ್ರಕರಣದಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next