ಮುಂಬೈ: ದೇವಸ್ಥಾನದ ಹುಂಡಿ ಕಳ್ಳತನ ಮಾಡುವ ವೇಳೆಯೂ ಕಳ್ಳನು ದೈವಭಕ್ತಿ ತೋರಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಇತ್ತೀಚೆಗೆ ಕಳ್ಳನೊಬ್ಬ ಖೋಪಾತ್ ಪ್ರದೇಶದ ಹನುಮಾನ್ ದೇಗುಲದ ಬಾಗಿಲು ಮುರಿದು ಒಳಗೆ ನುಗ್ಗಿದ್ದ. ಅಲ್ಲಿದ್ದ ಹನುಮಾನ್ ಮೂರ್ತಿಗೆ ನಮಸ್ಕರಿಸಿ, ಪ್ರಾರ್ಥನೆ ಸಲ್ಲಿಸಿ ನಂತರ ಅಲ್ಲಿದ್ದ ಹುಂಡಿಯನ್ನು ಕದ್ದುಕೊಂಡು ಹೋಗಿದ್ದ. ಹುಂಡಿಯಲ್ಲಿ 1000 ರೂಪಾಯಿ ಇದ್ದಿದ್ದಾಗಿ ಹೇಳಲಾಗಿದೆ.
ಈ ವಿಚಾರವಾಗಿ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು, ಕಳ್ಳನನ್ನು ಶನಿವಾರ ಬಂಧಿಸಲಾಗಿದೆ. ದೇವಸ್ಥಾನದ ಸಿಸಿಟಿವಿ ದೃಶ್ಯದಲ್ಲಿ ಕಳ್ಳ ದೇವರಿಗೆ ನಮಸ್ಕರಿಸುತ್ತಿರುವುದು ಸೆರೆಯಾಗಿದೆ.
ಇದನ್ನೂ ಓದಿ : ಮುಂದಿನ ದಿನಗಳಲ್ಲಿ ಬಿಟ್ ಕಾಯಿನ್ ಕಾಂಗ್ರೆಸ್ ಮುಖಂಡರಿಗೆ ತಿರುಗುಬಾಣವಾಗಲಿದೆ : ಸಿ.ಸಿ.ಪಾಟೀಲ