Advertisement

Maharashtra; ಸಚಿವರಾಗಲು ರೇಸ್‌: ಯಾರಿಗೆ ಸಿಗಲಿದೆ ಮೋದಿ ಸಂಪುಟದಲ್ಲಿ ಚಾನ್ಸ್‌?

11:44 PM Jun 06, 2024 | Team Udayavani |

ಮುಂಬಯಿ: ಮೋದಿ ನೇತೃತ್ವದಲ್ಲಿ ಎನ್‌ಡಿಎ 3ನೇ ಬಾರಿಗೆ ಅಧಿಕಾರ ಹಿಡಿಯಲು ರೆಡಿಯಾಗುತ್ತಿರುವಂತೆ ಇತ್ತ ಮಹಾರಾಷ್ಟ್ರದಲ್ಲಿ ಯಾರೆಲ್ಲ ಸಚಿವರಾಗಲಿದ್ದಾರೆಂಬ ಚರ್ಚೆಗಳು ಶುರುವಾಗಿವೆ. ಮಹಾರಾಷ್ಟ್ರದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಶಿಂಧೆ ಶಿ ವಸೇನೆಯಿಂದ 2, ಬಿಜೆಪಿಯಿಂದ 3 ಮತ್ತು ಒಬ್ಬರು ಮರಾಠಾ ನಾಯಕನಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

Advertisement

ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಪಿಯೂಷ್‌ ಗೋಯಲ್‌, ನಿತಿನ್‌ ಗಡ್ಕರಿ ಮತ್ತು ನಾರಾಯಣ ರಾಣೆ ಸಚಿವರಾಗುವುದು ಬಹುತೇಕ ಪಕ್ಕಾ ಆಗಿದೆ. ಜತೆಗೆ ಶಿಂಧೆ ಶಿವಸೇನೆಯ ಇಬ್ಬರು ಸಂಸದರಿಗೆ ಸಚಿವ ಸ್ಥಾನ ದೊರೆಬಹುದು. ಮರಾಠರನ್ನು ಸೆಳೆಯುವುದಕ್ಕಾಗಿ ಬಿಜೆಪಿಯು ಮರಾಠ ನಾಯಕರೊಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ.

ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಬಿಜೆಪಿ ಈ ಬಾರಿ ಹೀನಾಯವಾಗಿ ಸೋತಿದೆ. ಮರಾಠವಾಡ ವ್ಯಾಪ್ತಿಯಲ್ಲಿನ ನಾಂದೇಡ್‌, ಪರ್ಭಾನಿ, ಹಿಂಗೋಲಿ, ಉಸ್ಮಾನಾಬಾದ್‌, ಲಾತೂರ್‌, ಔರಂಗಾಬಾದ್‌, ಜಲಾ° ಮತ್ತು ಬೀಡ್‌ನ‌ಲ್ಲಿ ಬಿಜೆಪಿ ಸೋತಿದೆ. ಕಾಂಗ್ರೆಸ್‌ ಸ್ಪರ್ಧಿಸಿದ್ದ ನಾಂದೇಡ್‌, ಜಲಾ° ಮತ್ತು ಲಾತೂರ್‌ನಲ್ಲಿ ಗೆದ್ದಿದ್ದರೆ, ಉದ್ಧವ್‌ ಶಿವಸೇನೆ ಸ್ಪರ್ಧಿಸಿದ 4 ಕ್ಷೇತ್ರದಲ್ಲಿ 3ರಲ್ಲಿ ಗೆದ್ದಿದೆ. ಬೀಡ್‌ನ‌ಲ್ಲಿ ಶರದ್‌ ಎನ್‌ಸಿಪಿ ಗೆಲುವು ಸಾಧಿಸಿ ದೆ. ಹಾಗಾಗಿ, ಮರಾಠಾರನ್ನು ತನ್ನತ್ತ ಸೆಳೆಯಲು ಒಬ್ಬರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಅಜಿತ್‌ ಪವಾರ್‌ NCP 15 ಶಾಸಕರು ಶರದ್‌ ಪವಾರ್‌ ಬಣಕ್ಕೆ ಶಿಫ್ಟ್?
ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಬಣದ ಎನ್‌ಸಿಪಿ ಶಾಸಕರಿಗೆ ಇಕ್ಕಟ್ಟಿನ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ 10-15 ಮಂದಿ ಶಾಸಕರು ಈಗ ಮತ್ತೆ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಬಣಕ್ಕೆ ವಾಪಸಾಗಲು ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಶರದ್‌ ಬಣದ ಎನ್‌ಸಿಪಿಯ ಅಧ್ಯಕ್ಷ ಜಯಂತ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ. ಜೂ.9ರಂದು ಪಕ್ಷದ ಸಂಸ್ಥಾಪನಾ ದಿನ. ಕೆಲವೊಂದು ನಾಯಕರು ನಮ್ಮನ್ನು ಭೇಟಿಯಾಗಲು ಮುಂದಾಗಿದ್ದಾರೆ ಎಂದಿದ್ದಾರೆ. ಆದರೆ, ಇದನ್ನು ಅಜಿತ್‌ ಬಣ ತಿರಸ್ಕರಿಸಿದೆ. ಅಜಿತ್‌ ಪವಾರ್‌ ಮುಂಬಯಿನಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ನಡೆಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next