Advertisement

Spy Master; ಅಜಿತ್‌ ದೋವಲ್‌ ಭಾರತದ ಜೇಮ್ಸ್‌ಬಾಂಡ್‌!

11:58 PM Jun 25, 2024 | Team Udayavani |

ಐಪಿಎಸ್‌ ಅಧಿಕಾರಿಯಾಗಿ, ಗುಪ್ತಚರ ಇಲಾಖೆಯ ನಿರ್ದೇಶಕರಾಗಿ ಭಾರತವೇ ಮೆಚ್ಚುವ ಕೆಲಸ ಮಾಡಿದ ಅಜಿತ್‌ ದೋವಲ್‌ 3ನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲವು ದಿನಗಳ ಹಿಂದೆ ನೇಮಕಗೊಂಡಿದ್ದಾರೆ. “ಸ್ಪೈಮಾಸ್ಟರ್‌’ ಅಜಿತ್‌ ದೋವಲ್‌ ಸಾಹಸಗಳ ಕುರಿತಾದ ಮಾಹಿತಿ ಇಲ್ಲಿದೆ.

Advertisement

ಭಾರತದ “ಜೇಮ್ಸ್‌ಬಾಂಡ್‌’ ಎಂದೇ ಖ್ಯಾತರಾಗಿ ರುವ “ಸ್ಪೈಮಾಸ್ಟರ್‌’ ಅಜಿತ್‌ ದೋವಲ್‌ ಭಾರ ತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ(ಎನ್‌ಎಸ್‌ಎ) 3ನೇ ಅವಧಿಗೆ ಕೆಲವು ದಿನಗಳ ಹಿಂದೆ ನೇಮಕಗೊಂಡಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಎನ್‌ಎಸ್‌ಎ ಆಗಿ ನೇಮಿಸಿದ್ದರು. ಬಳಿಕ 2019ರಲ್ಲೂ ಅವರನ್ನೇ ಮುಂದುವರಿಸಿದ್ದರು.

ಭಾರತದ ಭದ್ರತಾ ಸವಾಲುಗಳು ಮತ್ತು ಪರಿಹಾರಗಳ ಕುರಿತು ಅಜಿತ್‌ ದೋವಲ್‌ ಮಾಸ್ಟರ್‌! ಅವರನ್ನು ಈ ವಿಷಯದಲ್ಲಿ ಮೀರಿ ಸು ವವರು ಮತ್ತೂಬ್ಬರಿಲ್ಲ. ಸೀಕ್ರೆಟ್‌ ಏಜೆಂಟ್‌ ಆಗಿ ಪಾಕಿಸ್ಥಾನದಲ್ಲಿ ಗಳಿಸಿದ ಅನುಭವವು, ಉಗ್ರರ ವಿರುದ್ಧ ಕಾರ್ಯಾ ಚರಣೆಯಲ್ಲಿ ಅವರಿಗೆ ಮಹತ್ತರ ಸ್ಥಾನವನ್ನು ಕಲ್ಪಿಸಿದೆ.

ಭಾರತೀಯ ಗುಪ್ತಚರ ಇಲಾಖೆಯು ಟಿ.ಜಿ. ಸಂಜೀವ್‌ ಪಿಳ್ಳೆ„, ಬಿ.ಎನ್‌. ಮಲ್ಲಿಕ್‌, ಎಂ.ಎಂ.ಎಲ್‌ ಹೂಜಾ,  ಎ.ಕೆ. ದವೆ, ಕೆ.ಶಂಕರನ್‌ ನಾಯರ್‌, ಜಿ.ಸಿ. ಸಕ್ಸೇನಾ ಅವರಂಥ ದಕ್ಷ ಅಧಿಕಾರಿಗಳು, ನಿರ್ದೇಶಕರನ್ನು ಕಂಡಿದೆ. ಆ ಸಾಲಿನಲ್ಲಿ ಅಜಿತ್‌ ದೋವಲ್‌ ಕೂಡ ನಿಲ್ಲುತ್ತಾರೆ. ಐಪಿಎಸ್‌ ಅಧಿಕಾರಿ ಯಾಗಿ, ಗುಪ್ತಚರ ಇಲಾಖೆಯಲ್ಲಿ ಅಧಿಕಾರಿಯಾಗಿ, ನಿರ್ದೇ ಶಕ ರಾಗಿ ದೋವಲ್‌ ಅನೇಕ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅವರದ್ದು 10 ವರ್ಷಗಳಿಂದ ಯಶಸ್ವಿ ಪಯಣ. ಅನೇಕ ಸವಾಲು ಗಳನ್ನು ಮೆಟ್ಟಿ ನಿಂತಿದ್ದಾರೆ. ಮೂರನೇ ಅವಧಿಯಲ್ಲೂ ಅವರ ಮುಂದೆ ಆಂತರಿಕ ಮತ್ತು ಬಾಹ್ಯ ಭದ್ರತಾ ಸವಾಲುಗಳಿವೆ. ಅವುಗಳನ್ನು ಪರಿಹರಿಸಲು ಹೇಗೆ ತಮ್ಮ ಚಾಣಾಕ್ಷ ಮತ್ತು ಅನುಭವವನ್ನು ಧಾರೆ ಎರೆಯುತ್ತಾರೆ ಕಾದು ನೋಡಬೇಕು.

ಕೇರಳ ಕೇಡರ್‌ನ ಅಧಿಕಾರಿ

Advertisement

ಕೇರಳ ಕೇಡರ್‌ನ ಅಧಿಕಾರಿಯಾಗಿ ದೋವಲ್‌ 1968ರಲ್ಲಿ ಭಾರತೀಯ ಪೊಲೀಸ್‌ ಸೇವೆಯನ್ನು ಆರಂಭಿಸಿದರು. ಕೊಟ್ಟಾಯಂ ಜಿಲ್ಲೆಯಲ್ಲಿ ಎಎಸ್‌ಪಿಯಾಗಿದ್ದರು. ಕೆಲವು ವರ್ಷ ಕೇರಳದಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ಕೇಂದ್ರ ಸೇವೆಗೆ ಹೋದರು.

ಎನ್‌ಎಸ್‌ಎ ನಾರಾಯಣನ್‌ ಗರಡಿಯಲ್ಲಿ ಪಳಗಿದ ದೋವಲ್‌

ಭಾರತ ಕಂಡ ಅತ್ಯಂತ ದಕ್ಷ, ಚಾಣಾಕ್ಷ ರಾಷ್ಟ್ರೀಯ ಭದ್ರತಾ ಸಲಹೆಗಾರ ಪೈಕಿ ಎಂ.ಕೆ.ನಾರಾಯಣನ್‌ ಕೂಡ ಒಬ್ಬರು. ಅಜಿತ್‌ ದೋವಲ್‌, ಎ.ಎಸ್‌.ದೌಲತ್‌ರಂಥ ಅಧಿಕಾರಿ ಗಳನ್ನು ತಯಾರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತೀಯ ಗುಪ್ತಚರ ಇಲಾಖೆಯಲ್ಲಿದ್ದಾಗ(ಐಬಿ) ಅವರಿಗೆ ನಾರಾಯಣನ್‌ ಮಾರ್ಗದರ್ಶನ ದೊರೆಯಿತು. ಐಬಿಯ ಯಾವುದೇ ಅಧಿಕಾರಿಯನ್ನು ತೆಗೆದುಕೊಂಡರೂ ಅವರಿಗೆ ಎಂ.ಕೆ.ನಾರಾಯಣನ್‌ ಮಾರ್ಗದರ್ಶಕರಾಗಿದ್ದರು. ನಾರಾಯಣನ್‌ ತಂಡ ನಿರ್ವಹಣ ಕೌಶಲವನ್ನು ದೋವಲ್‌ ಅವರಲ್ಲೂ ಕಾಣಬಹುದು.

ಪಾಕಿಸ್ಥಾನದಲ್ಲಿ ಅಂಡರ್‌ಕವರ್‌!

ಅಜಿತ್‌ ದೋವಲ್‌ ಒಟ್ಟು 7 ವರ್ಷಗಳ ಕಾಲ ಪಾಕಿಸ್ಥಾನ ದಲ್ಲಿದ್ದರು. ಒಂದು ವರ್ಷ ಸೀಕ್ರೆಟ್‌ ಏಜೆಂಟ್‌ ಆಗಿದ್ದ ಅವರು, ಈ ಅವಧಿಯಲ್ಲಿ ಸಕ್ರಿಯವಾಗಿದ್ದ ಎಲ್ಲ ಉಗ್ರ ಸಂಘಟನೆಗಳ ಮಹತ್ವದ ಮಾಹಿತಿಯನ್ನು ಕಲೆ ಹಾಕುವಲ್ಲಿ ಯಶಸ್ವಿಯಾ ಗಿದ್ದರು. ಬಳಿಕ ಪಾಕಿಸ್ಥಾನದ ದೂತಾವಾಸ ಕಚೇರಿಯಲ್ಲಿ 6 ವರ್ಷಗಳ ಕಾಲ ಕೆಲಸ ಮಾಡಿದರು. ದೋವಲ್‌ ನೀಡಿದ ಮಾಹಿತಿಯು, ಮುಂದೆ ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು.

ಇರಾಕ್‌ನಿಂದ ನರ್ಸ್‌ಗಳ ರಕ್ಷಣೆ

2014ರಲ್ಲಿ ಇರಾಕ್‌ನಲ್ಲಿ ಐಸಿಸ್‌ ಉಗ್ರರ ದಾಳಿ ಮೇಲುಗೈ ಸಾಧಿಸಿತ್ತು. ಈ ವೇಳೆ ಉಗ್ರರು ತಿಕ್ರಿತ್‌ ಆಸ್ಪತ್ರೆಯನ್ನು ತಮ್ಮ ವಶಕ್ಕೆ ಪಡೆದು, ಅಲ್ಲಿದ್ದ ಎಲ್ಲರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಈ ಪೈಕಿ ಭಾರತದ 46 ನರ್ಸ್‌ಗಳಿದ್ದರು. ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ವಾಪಸ್‌ ಕರೆತರುವಲ್ಲಿ ಭಾರತವು ಯಶಸ್ವಿಯಾಗಿತ್ತು. ಈ ಒಟ್ಟು ಕಾರ್ಯಾಚರಣೆಯ ಹಿಂದೆ ಅಜಿತ್‌ ದೋವಲ್‌ ಅವರ ಪಾತ್ರ ದೊಡ್ಡದಾಗಿತ್ತು ಎಂದು ಹೇಳಲಾಗುತ್ತಿದೆ.

ಸರ್ಜಿಕಲ್‌, ಏರ್‌ ಸ್ಟ್ರೈಕ್‌ ರೂವಾರಿ

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಿ ದ್ದಂತೆ ಅಜಿತ್‌ ದೋವಲ್‌ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿದರು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಮಹ ತ್ವದ ಪಾತ್ರವನ್ನು ಅವರು ನಿರ್ವ ಹಿ ಸುತ್ತಿದ್ದಾರೆ. ಮ್ಯಾ ನ್ಮಾರ್‌ ಮತ್ತು ಪಾಕಿಸ್ಥಾನದಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ನಲ್ಲಿ ದೋವಲ್‌ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 2016ರಲ್ಲಿ ಪಾಕಿಸ್ಥಾನ ಸರ್ಜಿಕಲ್‌ ಮತ್ತು 2019ರಲ್ಲಿ ಬಾಲಾಕೋಟ್‌ ಏರ್‌ ಸ್ಟ್ರೈಕ್‌ನ ಹಿಂದಿನ ರೂವಾರಿಗಳ ಪೈಕಿ ಇವರೂ ಒಬ್ಬರಾಗಿದ್ದಾರೆ.

ಅಂದುಕೊಂಡಂತೆ ನಡೆದಿದ್ದರೆ ದಾವೂದ್‌ ಇಬ್ರಾಹಿಂ ಫಿನಿಶ್‌!

ಅಜಿತ್‌ ದೋವಲ್‌ ಅವರು ಭಾರತದ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ದಾವೂದ್‌ ಇಬ್ರಾಹಿಂನನ್ನು ಮಟ್ಟ ಹಾಕುವ ಅವಕಾಶ ವನ್ನು ಸ್ವಲ್ಪದಲ್ಲಿ ತಪ್ಪಿಸಿ ಕೊಂಡರು. ಪಾಕ್‌ ಕ್ರಿಕೆಟರ್‌ ಜಾವೇದ್‌ ಮಿಯಾಂದಾದ್‌ ಪುತ್ರ ಮತ್ತು ದಾವೂದ್‌ ಪುತ್ರಿಯ ವಿವಾಹ 2005ರಲ್ಲಿ ದುಬಾೖಯಲ್ಲಿ ಆಯೋಜಿಸ ಲಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ದೋವಲ್‌ ಅವರು, ಛೋಟಾ ರಾಜನ್‌ ಗ್ಯಾಂಗ್‌ ಸದಸ್ಯರಿಂದ ಹತ್ಯೆ ಮಾಡಿಸಲು ಪಕ್ಕಾ ಪ್ಲ್ರಾನ್‌ ಮಾಡಿದ್ದರು. ಆದರೆ, ಮುಂಬಯಿ ಪೊಲೀಸರು ಚೋಟಾ ರಾಜನ್‌ ಗ್ಯಾಂಗಿನ ಸದಸ್ಯರನ್ನು ಅರೆಸ್ಟ್‌ ಮಾಡುವ ಮೂಲಕ ಇಡೀ ಪ್ಲ್ರಾನ್‌ ವೈಫ‌ಲ್ಯ ಕಂಡಿತ್ತು.

15 ವಿಮಾನಗಳ ಹೈಜಾಕ್‌ ತಪ್ಪಿಸಿದ್ದರು!

ವಾಜಪೇಯಿ ಸರಕಾರದ ಅವಧಿ ಯಲ್ಲಿ ನಡೆದ ಕಂದಹಾರ್‌ ವಿಮಾನ ಹೈಜಾಕ್‌ ಎಲ್ಲರಿಗೂ ಗೊತ್ತಿರುವ ಸಂಗತಿ. ಐಸಿ 814 ವಿಮಾನ ಎಂದು ಹೇಳಲಾಗುವ ಇಂಡಿಯನ್‌ ಏರ್‌ಬಸ್‌ ಎ300 ಅನ್ನು ಉಗ್ರರು ಹೈಜಾಕ್‌ ಮಾಡಿ, ಅಫ್ಘಾನಿಸ್ಥಾನದ ಕಂದಹಾರ್‌ಗೆ ತೆಗೆದುಕೊಂಡು ಹೋಗಿದ್ದರು. ಆಗ ಉಗ್ರರ ಜತೆಗಿನ ಮಾತುಕತೆಯಲ್ಲಿ ದೋವಲ್‌ ಪ್ರಮುಖ ಪಾತ್ರ ನಿರ್ವಹಿಸಿ, ಪ್ರಯಾ ಣಿಕರ ಬಿಡುಗಡೆ ಮಾಡಿಸಿದ್ದರು. ಗೊತ್ತಿಲ್ಲದ ಸಂಗತಿ ಎಂದರೆ, 1971ರಿಂದ 1999ರ ಅವಧಿಯಲ್ಲಿ ಅವರು 15 ಭಾರತೀಯ ವಿಮಾನಗಳ ಹೈಜಾಕ್‌ ತಪ್ಪಿಸಿದ್ದಾರೆ!

ಗುಪ್ತಚರ ಇಲಾಖೆಗೆ ಖಡಕ್‌ ಬಾಸ್‌!

ಗುಪ್ತಚರ ಇಲಾಖೆಯ ಆಪರೇಷನ್‌ ವಿಂಗ್‌ನ ಮುಖ್ಯಸ್ಥರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಅಜಿತ್‌ ದೋವಲ್‌ ಅವರು 2004-2005ರ ವರೆಗೆ, ಅದೇ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ಬಳಿಕ ಪ್ರಮುಖ ದಿನಪತ್ರಿಕೆಗಳು ಮತ್ತು ಜರ್ನಲ್‌ಗ‌ಳಿಗೆ ಲೇಖನಗಳನ್ನು ಈಗಲೂ ಬರೆಯುತ್ತಾರೆ. ಭಾರತೀಯ ಭದ್ರತಾ ಸವಾಲುಗಳ ಕುರಿತು ಅತ್ಯಂತ ನಿಖರವಾಗಿ ಮಾತನಾಡಬಲ್ಲ ಕೆಲವೇ ಕೆಲವು ವ್ಯಕ್ತಿಗಳ ಪೈಕಿ ಅವರು ಒಬ್ಬರು.

Advertisement

Udayavani is now on Telegram. Click here to join our channel and stay updated with the latest news.

Next