Advertisement

Maharashtra Politics; ಡಬಲ್ ಇಂಜಿನ್ ಸರ್ಕಾರ ಈಗ ತ್ರಿಬಲ್ ಇಂಜಿನ್ ಆಗಿದೆ: ಸಿಎಂ ಶಿಂಧೆ

03:53 PM Jul 02, 2023 | Team Udayavani |

ಮುಂಬಯಿ: ಡಬಲ್ ಇಂಜಿನ್ ಸರ್ಕಾರ ಈಗ ತ್ರಿಬಲ್ ಇಂಜಿನ್ ಆಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ, ಅಜಿತ್ ಪವಾರ್ ಮತ್ತು ಅವರ ನಾಯಕರನ್ನು ನಾನು ಸ್ವಾಗತಿಸುತ್ತೇನೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ನೀಡಿದ್ದಾರೆ.

Advertisement

ಭಾನುವಾರ ರಾಜಭವನದಲ್ಲಿ ನಡೆದ ಮಹತ್ವದ ಸಂಪುಟ ವಿಸ್ತರಣೆಯಲ್ಲಿ ಎನ್ ಸಿಪಿ ನಾಯಕ ಅಜಿತ್ ಪವಾರ್ ಡಿಸಿಎಂ ಆಗಿ ಮತ್ತು ಇತರ 9 ಎನ್‌ಸಿಪಿ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ಈಗ ನಮ್ಮಲ್ಲಿ ಒಬ್ಬರು ಮುಖ್ಯಮಂತ್ರಿ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳಿದ್ದಾರೆ. ಅಜಿತ್ ಪವಾರ್ ಅವರ ಅನುಭವವು ಮಹಾರಾಷ್ಟ್ರವನ್ನು ಬಲಪಡಿಸಲು ಸಹಾಯ ಮಾಡುತ್ತದೆ ” ಎಂದರು.

”ಸಂಪುಟದಲ್ಲಿ ಸ್ಥಾನ ಹಂಚಿಕೆ ಕುರಿತು ಚರ್ಚಿಸಲು ಸಾಕಷ್ಟು ಸಮಯವಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದರು. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವು ಒಟ್ಟಾಗಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು 4-5 ಸ್ಥಾನಗಳನ್ನು ಪಡೆದಿದ್ದರು, ಈ ಬಾರಿ ಅವರು ಅಷ್ಟು ಸೀಟುಗಳನ್ನು ಸಹ ಪಡೆಯುವುದಿಲ್ಲ” ಎಂದರು.

ಉಪಮುಖ್ಯಮಂತ್ರಿ ಅಜಿತ್ ಪವಾರ್ 40 ಎನ್‌ಸಿಪಿ ಶಾಸಕರು ಮತ್ತು 6 ಎನ್‌ಸಿಪಿ ಎಂಎಲ್‌ಸಿಗಳ ಬೆಂಬಲವನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next