Advertisement
ಗರ್ಭಧಾರಣೆ ಖಾತ್ರಿಪಡಿಸುವ ಯಂತ್ರದಷ್ಟೇ ಚಿಕ್ಕದಾಗಿರುವ ಯಂತ್ರ ಈ ಕಿಟ್‌ನಲ್ಲಿದ್ದು, ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿರುವ ಗೋಮಾಂಸವನ್ನು ಕೇವಲ 30 ನಿಮಿಷದಲ್ಲಿ ಪತ್ತೆ ಮಾಡುತ್ತದೆ. ಪ್ರಸ್ತುತ ಈ ರೀತಿಯ 45 ಗೋಮಾಂಸ ಪತ್ತೆ ಕಿಟ್‌ಗಳ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರ ಪೊಲೀಸರು, ಮೊಬೈಲ್ ವ್ಯಾನ್‌ಗಳಲ್ಲಿ ಈ ಕಿಟ್‌ಗಳನ್ನು ಇರಿಸಿಕೊಂಡು ಗೋ ಮಾಂಸ ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ.
ಪತ್ತೆ ಯಂತ್ರದಲ್ಲಿನ ಲೈಟ್‌ನ ಬಣ್ಣ ಬದಲಾದರೆ, ಅದು ಗೋಮಾಂಸ ಎಂಬುದು ಖಾತ್ರಿಯಾಗುತ್ತದೆ. ಇದರ ಆಧಾರದಲ್ಲಿ ಪೊಲೀಸರು ಆರೋಪಿ ಗಳ ವಿರುದ್ಧ ಎಫ್ಐಆರ್ ದಾಖಲಿಸಬಹು ದಾಗಿದೆ,’ ಎಂದು ಮಹಾರಾಷ್ಟ್ರ ವಿಧಿವಿಜ್ಞಾನ ಪ್ರಯೋಗಾ
ಲಯದ ನಿರ್ದೇಶಕ ಕೃಷ್ಣ ಕುಲಕರ್ಣಿ ಹೇಳಿದ್ದಾರೆ. “ಈ ಸಂಬಂಧ “ಗೋ ಮಾಂಸ ವಿರೋಧಿ ಘಟಕ’ ಸ್ಥಾಪಿಸಲಿದ್ದು, ಕಿಟ್ ಬಳಸುವುದು ಹೇಗೆ ಎಂಬ ಕುರಿತು 100 ಪೊಲೀಸರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಈ ಪೈಕಿ ಈಗಾಗಲೆ 25 ಸಿಬಂದಿ ತರಬೇತಿ ಪಡೆ
ಯುತ್ತಿದ್ದಾರೆ. ಸಿಬಂದಿಯ ಶೈಕ್ಷಣಿಕ ಅರ್ಹತೆಯನ್ನು ಧರಿಸಿ ಅವರನ್ನು ಘಟಕಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಕುಲಕರ್ಣಿ ಮಾಹಿತಿ ನೀಡಿದ್ದಾರೆ.