Advertisement
ಸೋಮವಾರ (ಮೇ 3) ಹೆಚ್ಚುವರಿ ಮುನ್ಸಿಪಲ್ ಕಮಿಷನರ್ (ಎಂಸಿಜಿಎಂ) ಮುಂಬೈ ಸಂಜೀವ್ ಜೈಸ್ವಾಲ್ ಅವರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವುದನ್ನು ಆದಿತ್ಯ ಠಾಕ್ರೆ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ, ನಾವು ಮಹಾರಾಷ್ಟ್ರದಲ್ಲಿ 3 ನೇ ಅಲೆಯನ್ನು ನಿಯಂತ್ರಣ ಮಾಡುವುದ್ಕಾಗಿ ತಯಾರಿ ನಡೆಸುತ್ತಿರುವಾಗ, ಮುಂಬೈನಲ್ಲಿ ನಾವು ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ನಾನು ಎಎಂಸಿ ಸಂಜೀವ್ ಜೈಸ್ವಾಲ್ ಜಿ ಅವರನ್ನು ಭೇಟಿಯಾದೆ. ಮುಂದಿನ ಅಲೆಯನ್ನು ಎದುರಿಸಲು ಪೀಡಿಯಾಟ್ರಿಕ್ ಕೋವಿಡ್ ಕೇರ್ ವಾರ್ಡ್ ಅನ್ನು ನಾವು ರಚಿಸಬೇಕೆಂದು ನಾನು ಅವರಿಗೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Related Articles
Advertisement
ಕಳೆದ ತಿಂಗಳು ಮುಂಬೈನಲ್ಲಿ ಕೋವಿಡ್ ರೂಪಾಂತರಿ ಸೋಂಕು ಭಾರಿ ಏರಿಕೆ ಕಂಡಿದ್ದು, ಹಾಸಿಗೆಗಳು ಮತ್ತು ಸೌಲಭ್ಯಗಳ ಲಭ್ಯತೆಯಿಂದಾಗಿ ನಾವು ಪರಿಸ‍್ಥಿತಿಯನ್ನು ಎದುರಿಸುವುದಕ್ಕೆ ಸಾಧಯವಾಯಿತು. ಮುಂಬರುವ ಕೆಲವು ದಿನಗಳಲ್ಲಿ ನ್ಯೂ ಜಂಬೋಸ್ ನಲ್ಲಿ ಸುಮಾರು 6500 O2 ಹಾಸಿಗೆಗಳು ಮತ್ತು ಸುಮಾರು 1500 ಹೆಚ್ಚು ಐಸಿಯು / ಎಚ್ ಡಿ ಯು ಹಾಸಿಗೆಗಳ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಓದಿ : ಬಾಗಲಕೋಟೆ: ಕಾಳ ಸಂತೆಯಲ್ಲಿ ರೆಮ್ ಡಿಸ್ವಿಯರ್ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ