Advertisement
ಆಂದೋಲನಕ್ಕೆ ವರ್ಷಕ್ಕೆ 2 ಕೋಟಿ ರೂ.ನಂತೆ ಐದು ವರ್ಷಕ್ಕೆ 10 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರದ ಕಡೆ ಮುಖಮಾಡಿದೆ. ರಾಜಸ್ಥಾನ ಹೊರತು ಪಡಿಸಿದರೆ ದೇಶದಲ್ಲೇ ಎರಡನೇ ಅತಿದೊಡ್ಡ ಬರಪೀಡಿತ ರಾಜ್ಯವೆಂಬ ಹಣೆಪಟ್ಟಿಯನ್ನು ಕರ್ನಾಟಕ ಹೊತ್ತಿದೆ. ರಾಜ್ಯದಲ್ಲಿ ಇಂದಿಗೂ ಶೇ.70ರಷ್ಟು ಕೃಷಿ ಭೂಮಿ ಮಳೆಯನ್ನೇ ಆಶ್ರಯಿಸಿದೆ. ಇದ್ದ ನದಿ-ಕೆರೆ ನೀರಿನ ಸಂಪತ್ತಿನ ಪರಿಣಾಮಕಾರಿ ಬಳಕೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ವಾಲ್ಮಿ , ಕರ್ನಾಟಕ ಜಲ ಸಾಕ್ಷರತಾ ಆಂದೋಲನಕ್ಕೆ ಮುಂದಾಗಿದ್ದು, ಮಹಾರಾಷ್ಟ್ರದ ಮಾದರಿಯಲ್ಲಿ ಇಲ್ಲಿಯೂ ಸರ್ಕಾರದ ನೆರವು ದೊರೆತರೆ ಆಂದೋಲನ ಯಶಸ್ವಿಗೊಳಿಸಿ, ಕೃಷಿಕರಿಗೆ ನೆರವಾಗಲುನಿರ್ಧರಿಸಿದೆ.
Related Articles
Advertisement
ರಾಜ್ಯದಲ್ಲಿನ 10 ಕೃಷಿ ಹವಾಮಾನ ವಲಯ ಸೇರಿದಂತೆ ಇಡೀ ರಾಜ್ಯದ ವಿವಿಧ ಭೌಗೋಳಿಕ,ನಗರ-ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದಾಗಿದೆ. ಆಂದೋಲನದ ಆಡಳಿತಾತ್ಮಕ ನಿರ್ವಹಣೆಗೆ ರಾಜ್ಯಮಟ್ಟದಲ್ಲಿ ಮಾರ್ಗದರ್ಶಿ ಹಾಗೂ ಜಲ ತಜ್ಞರ ಸಲಹಾ ಸಮಿತಿ, ನೋಡಲ್ ಸಂಸ್ಥೆಯಾಗಿ ವಾಲಿ¾ ಕಾರ್ಯ ನಿರ್ವಹಿಸಲಿದ್ದು, ಜಿಲ್ಲಾ, ತಾಲೂಕು ಹಾಗೂ ಗಾಮಮಟ್ಟದ ಸಮಿತಿಗಳನ್ನು ರಚಿಸಲಾಗುತ್ತದೆ.
ಮಹಾರಾಷ್ಟ್ರ ಮಾದರಿ: ಜಲ ಸಾಕ್ಷರತೆ ನಿಟ್ಟಿನಲ್ಲಿ ಮಹಾರಾಷ್ಟ್ರ ದೇಶಕ್ಕೆ ಮಾದರಿ ಹೆಜ್ಜೆ ಇರಿಸಿದೆ. ಅಂತಾರಾಷ್ಟ್ರೀಯಜಲತಜ್ಞ ಡಾ.ರಾಜೇಂದ್ರ ಸಿಂಗ್ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರ ಸರ್ಕಾರ ಜಲ ಸಾಕ್ಷರತೆಗೆಂದು ಅಲ್ಲಿನ ವಾಲ್ಮಿಗೆ 10 ಕೋಟಿ ರೂ. ನೀಡಿದ್ದು, ಆಂದೋಲನ ಉತ್ತಮ ಫಲಿತಾಂಶ ನೀಡತೊಡಗಿದೆ. ಕರ್ನಾಟಕದಲ್ಲೂ ಸರ್ಕಾರ ಜಲ ಸಾಕ್ಷರತೆ ಆಂದೋಲನಕ್ಕೆ ಮುಂದಾದರೆ ಉಚಿತವಾಗಿ ಮಾರ್ಗದರ್ಶನ ನೀಡಲು ಸಿದಟಛಿ ಎಂದು ಡಾ.ರಾಜೇಂದ್ರ ಸಿಂಗ್ ಈಗಾಗಲೇ ತಿಳಿಸಿದ್ದು, ಸರ್ಕಾರ ಅವರ ಸೇವೆ ಬಳಸಿಕೊಳ್ಳಬೇಕಾಗಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ವಾಲ್ಮಿ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿ, ಸಂಸ್ಥೆ ಅಭಿವೃದ್ಧಿಗೆ ಅನುದಾನದ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಜಲ ಸಾಕ್ಷರತೆ ಆಂದೋಲನಕ್ಕೆ ವಾಲ್ಮಿ ಅಗತ್ಯ ಯೋಜನೆ ಸಿದ್ಧಪಡಿಸಿದೆ.ರಾಜ್ಯಾದ್ಯಂತ ಆಂದೋಲನಕ್ಕೆ ಸರ್ಕಾರದ ಹಸಿರು ನಿಶಾನೆಗೆ ಎದುರು ನೋಡುತ್ತಿದ್ದು, ಐದು ವರ್ಷಗಳ ಯೋಜನೆಗೆ ಅಗತ್ಯ ಅನುದಾನ ದೊರೆತರೆ ಆಂದೋಲನ ಆರಂಭಗೊಳ್ಳಲಿದೆ.
– ಡಾ.ರಾಜೇಂದ್ರ ಪೊದ್ದಾರ,
ನಿರ್ದೇಶಕರು, ಧಾರವಾಡ ವಾಲ್ಮಿ – ಅಮರೇಗೌಡ ಗೋನವಾರ