Advertisement

Online Gambling: ಆನ್‌ಲೈನ್‌ ಜೂಜಾಟ: 5 ಕೋಟಿ ಗೆದ್ದು, 58 ಕೋಟಿ ರೂ. ಕಳೆದುಕೊಂಡ ಉದ್ಯಮಿ

10:33 AM Jul 23, 2023 | Team Udayavani |

ನಾಗ್ಪುರ: ಆನ್‌ ಲೈನ್‌ ಜೂಜಾಟದಿಂದ ಉದ್ಯಮಿಯೊಬ್ಬರು 58 ಕೋಟಿ ರೂ.ವನ್ನು ಕಳೆದುಕೊಂಡು ಮೋಸ ಹೋಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

Advertisement

ಆರೋಪಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್  ಎಂದು ಗುರುತಿಸಲಾಗಿದೆ.

ಜೈನ್‌ ಅವರು ನಾಗ್ಪುರ ಮೂಲದ ಉದ್ಯಮಿಯೊಬ್ಬರಿಗೆ ಆನ್‌ ಲೈನ್‌ ಜೂಜಾಟದ ಬಗ್ಗೆ ಮಾಹಿತಿಯನ್ನು ಕೊಟ್ಟು, ಅದರಲ್ಲಿ ಲಾಭದಾಯಕವಾಗಿ ಹಣವನ್ನು ಮಾಡಬಹುದೆಂದು ಹೇಳಿದ್ದಾರೆ. ಇದಕ್ಕೆ ಮೊದಲು ಉದ್ಯಮಿ ಒಪ್ಪಲಿಲ್ಲ. ಆದರೆ ನಿರಂತರವಾಗಿ ಜೈನ್‌ ಉದ್ಯಮಿಯ ಮನವೊಲಿಸಿದ್ದಾರೆ. ಇದರ ಜೊತೆಗೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷ ರೂ.ವನ್ನು ಖಾತೆಗೆ ವರ್ಗಾಯಿಸಿದ್ದಾರೆ.

ಮೊದಲು ಆನ್‌ ಲೈನ್‌ ಜೂಜಾಟದ ಲಿಂಕ್‌ ವೊಂದನ್ನು ವಾಟ್ಸಪ್‌ ಮೂಲಕ ಜೈನ್‌ ಉದ್ಯಮಿಗೆ ಕಳುಹಿಸಿದ್ದಾರೆ. ಆನ್‌ ಲೈನ್‌ ಜೂಜಾಟದ ಖಾತೆಯಲ್ಲಿ 8 ಲಕ್ಷ ರೂ. ಇಟ್ಟಿರುವುದನ್ನು ನೋಡಿ, ಉದ್ಯಮಿ ಜೂಜಾಟವನ್ನು ಆರಂಭಿಸಿದ್ದಾರೆ. ಆರಂಭಿಕವಾಗಿ ಉದ್ಯಮಿಗೆ ಯಶಸ್ವಿ ಸಿಕ್ಕಿದೆ. ಅವರು ಜೂಜಾಟದ ಮೂಲಕ ಹಣ ಗಳಿಸಿದ್ದಾರೆ. 5 ಕೋಟಿ ರೂ.ವನ್ನು ಗೆದ್ದ ಬಳಿಕ, ಅವರು 58 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗುತ್ತಿದ್ದೇನೆ ಎಂದು ಶಂಕಿಸಿ ಉದ್ಯಮಿ ಜೈನ್‌ ಬಳಿ ತನ್ನ ಹಣವನ್ನು ವಾಪಾಸ್‌ ಕೇಳಿದ್ದಾರೆ. ಆದರೆ ಆತ ಹಣ ವಾಪಾಸ್‌ ನೀಡಲು ನಿರಾಕರಿಸಿದ್ದಾರೆ ಎಂದು ಘಟನೆ ಕುರಿತು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದರು.

ಈ ಸಂಬಂಧ ಉದ್ಯಮಿ  ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಜೈನ್‌ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ.

Advertisement

ಇದೇ ವೇಳೆ ಪೊಲೀಸರು ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಆರೋಪಿಯ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಆರೋಪಿ ಅಲ್ಲಿಂದ ಮೊದಲೇ ಪರಾರಿಯಾಗಿದ್ದಾನೆ. ಆತ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿರುವುದಾಗಿ ವರದಿ ತಿಳಿಸಿದೆ.

ದಾಳಿಯ ವೇಳೆ 14 ಕೋಟಿ ರೂ. ನಗದು ಮತ್ತು ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳು ಸೇರಿದಂತೆ ಗಣನೀಯ ಪ್ರಮಾಣದ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next