ಮುಂಬಯಿ : ದಕ್ಷಿಣ ಮುಂಬೈನ ಮಹಾರಾಷ್ಟ್ರ ಸಚಿವಾಲಯದ ಸಂಕೀರ್ಣವಾದ ಮಂತ್ರಾಲಯಕ್ಕೆ ಪ್ರವೇಶಿಸಿದ ವ್ಯಕ್ತಿಯ ಬ್ಯಾಗ್‌ನಲ್ಲಿ ಚಾಕು ಪತ್ತೆಯಾದ ನಂತರ ಆತನನ್ನು ಗುರುವಾರ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಗೊಳಗಾಗುತ್ತಿರುವ ವ್ಯಕ್ತಿ ಒಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ತಹಸಿಲ್‌ನವನು ಎಂದು ತಿಳಿಸಿದ್ದಾರೆ. ‘ಮಧ್ಯಾಹ್ನ ಯಾವುದೋ ಕೆಲಸದ ನಿಮಿತ್ತ ಮಂತ್ರಾಲಯದ ನೂತನ ಆಡಳಿತ ಕಟ್ಟಡಕ್ಕೆ ಪ್ರವೇಶಿಸುತ್ತಿದ್ದಾಗ ಆತನ ಬ್ಯಾಗ್ ಸ್ಕ್ಯಾನ್ ಮಾಡಲಾಗಿದ್ದು, ಒಳಗೆ ಚಾಕು ಪತ್ತೆಯಾಗಿದೆ.
ಸ್ಥಳದಲ್ಲಿದ್ದ ಪೊಲೀಸ್ ಸಿಬಂದಿ ಆತನನ್ನು ವಶಕ್ಕೆ ಪಡೆದಿದ್ದು, ಆತ ಚಾಕುವನ್ನು ಏಕೆ ಹೊಂದಿದ್ದ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟಿಸುವ ಬೆದರಿಕೆ ಕರೆ
“ಮಂತ್ರಾಲಯ ಸ್ಫೋಟಿಸುವ ಬೆದರಿಕೆ ಕರೆ ಮಾಡಲಾಗಿದ್ದು. ಸಿಎಂ ಏಕನಾಥ್ ಶಿಂಧೆ ಅವರೊಂದಿಗೆ ಮಾತನಾಡಲು ಅವಕಾಶ ನೀಡದಿದ್ದಾಗ, ಮಂತ್ರಾಲಯದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಲಾಗಿದೆ. ಮುಂಬೈ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದು,ಅಹ್ಮದ್‌ನಗರ ಜಿಲ್ಲೆಯ ನಿವಾಸಿ ಬಾಲಕೃಷ್ಣ ಭೌಸಾಹೇಬ್ ಧಾಕ್ನೆ ಎಂಬವರು ಕರೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.