ಥಾಣೆ :ನಿರ್ಮಾಣದ ಕೆಲಸ ಮುಂದುವರಿಸದಂತೆ ಕಾರ್ಮಿಕರನ್ನು ತಡೆದು ಬಂದೂಕು ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಯನ್ನು ಯತೀಶ್ ಮುರಳೀಧರ್ ಭೋಯಿರ್ ಎಂದು ಗುರುತಿಸಲಾಗಿದ್ದು. ಆತ ಕೆಲವು ಸ್ಥಳೀಯರೊಂದಿಗೆ ಘೋಡ್ಬಂದರ್ ರಸ್ತೆಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಸ್ಥಳಕ್ಕೆ ಬಂದು,ಕೆಲಸ ಮುಂದೂವರಿಸದಂತೆ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ರಿವಾಲ್ವರ್ ಹಿಡಿದು ಕೆಲಸ ಮಾಡುವುದನ್ನು ನಿಲ್ಲಿಸದಿದ್ದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಭೋರ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 352 ಮತ್ತು 506 ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ ಎಂದು ಕಾಪುರ್ಬಾವಾಡಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು ಮೇ ತಿಂಗಳಲ್ಲಿ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದೇ ರೀತಿ ಬೆದರಿಕೆ ಹಾಕಿದ್ದ, ಏಕೆಂದರೆ ಕೆಲಸಕ್ಕಾಗಿ ಸ್ಥಳೀಯರನ್ನು ತೊಡಗಿಸಿಕೊಳ್ಳಬೇಕೆಂದು ಆತ ಬಯಸಿದ್ದ ಎಂದು ಹೇಳಿದರು.