Advertisement

ಏಪ್ರಿಲ್ 30ರವರೆಗೂ ಲಾಕ್ ಡೌನ್, ಜನರ ನಡವಳಿಕೆ ಮೇಲೆ ಮುಂದಿನ ನಿರ್ಧಾರ: ಸಿಎಂ ಠಾಕ್ರೆ

09:12 AM Apr 12, 2020 | Nagendra Trasi |

ಮುಂಬೈ: ಕೋವಿಡ್ 19 ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ತಿಳಿಸಿದ್ದಾರೆ.

Advertisement

ಲಾಕ್ ಡೌನ್ ವಿಚಾರದಲ್ಲಿ ನಂತರ ಕೆಲವೊಂದು ವಿನಾಯ್ತಿ ನೀಡಲಾಗುವುದು ಎಂದಿರುವ ಠಾಕ್ರೆ, ಆದರೆ ಇದು ರಾಜ್ಯದ ಜನರ ನಡವಳಿಕೆ, ಆದೇಶ ಪಾಲನೆಯನ್ನು ಅವಲಂಬಿಸಿದೆ ಎಂದು ಎಚ್ಚರಿಸಿದ್ದಾರೆ.

ಏಪ್ರಿಲ್ 14ರಿಂದ ಏ.30ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಕೆಲವೊಮ್ಮೆ ನಾವು ಲಾಕ್ ಡೌನ್ ರಿಲ್ಯಾಕ್ಸ್ ಮಾಡಲಿದ್ದೇವೆ. ಆದರೆ ಅದನ್ನು ನಾವು ನಂತರ ತಿಳಿಸುತ್ತೇವೆ. ಇದೆಲ್ಲವೂ ಜನರ ನಡವಳಿಕೆ ಮೇಲೆ ನಿಂತಿದೆ. ಲಾಕ್ ಡೌನ್ ವೇಳೆ ತರಕಾರಿ, ದಿನಸಿ ಖರೀದಿ ವೇಳೆ ಗುಂಪು ಸೇರಬೇಡಿ ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ವೇಳೆ ಎಷ್ಟು ಸಾಧ್ಯವೋ ಅಷ್ಟು ಮನೆಯಿಂದಲೇ ಕೆಲಸ ಮಾಡಿ ಎಂದು ಸಿಎಂ ಠಾಕ್ರೆ ಸಲಹೆ ನೀಡಿದ್ದಾರೆ. ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು 13 ಮುಖ್ಯಮಂತ್ರಿಗಳ ಪೈಕಿ ಠಾಕ್ರೆ ಕೂಡಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next