Advertisement

ಮಗನ ಮೊದಲ ಹುಟ್ಟುಹಬ್ಬದಂದೇ ನಡೆದ ಮಹಾರಾಷ್ಟ್ರ ಯೋಧನ ಅಂತ್ಯಕ್ರಿಯೆ

05:41 PM Jun 24, 2017 | Team Udayavani |

ಪುಣೆ : ಜಮ್ಮು ಕಾಶ್ಮೀರದಲ್ಲಿ ನಿನ್ನೆ ಗುರುವಾರ ಹುತಾತ್ಮರಾಗಿದ್ದ ಮಹಾರಾಷ್ಟ್ರದ ಜವಾನ ನಾಯಕ್‌ ಸಂದೀಪ್‌ ಜಾಧವ್‌ ಅವರ ಅಂತ್ಯಕ್ರಿಯೆ ಇಂದು ತಮ್ಮ ಮಗನ ಮೊದಲ ಹುಟ್ಟುಹಬ್ಬದ ದಿನದಂದೇ ನಡೆದಿರುವುದು ವಿಧಿಯ ವಿಪರ್ಯಾಸವೆನಿಸಿತು. 

Advertisement

ಇಲ್ಲಿಂದ ಸುಮಾರು 230 ಕಿ.ಮೀ. ದೂರದಲ್ಲಿರುವ ಮಧ್ಯ ಮಹಾರಾಷ್ಟ್ರದ ಸಿಲೋಡ್‌ ತಾಲೂಕಿನ ಕೇಲ್‌ ಗಾಂವ್‌ನಲ್ಲಿ ಇಂದು ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಯೋಧ ಸಂದೀಪ್‌ ಜಾಧವ್‌ ಅವರ ಅಂತ್ಯಕ್ರಿಯೆ ನಡೆದಾಗ ಅವರ ಒಂದು ವರ್ಷ ಪ್ರಾಯದ ಪುತ್ರ ಶಿವಂ ನ ಮುದ್ದು ಮುಖದಲ್ಲಿ ನಗೆಯೇ ಇರಲಿಲ್ಲ. ತಂದೆಯ ಪಾರ್ಥಿವ ಶರೀರ ಅಗ್ನಿಯಲ್ಲಿ ಬೆಂದು ಹೋಗುವುದಕ್ಕೆ ಆತನ ಹನಿಗೂಡಿದ ಕಣ್ಣುಗಳು ಸಾಕ್ಷಿಯಾದ ದೃಶ್ಯ ಅತ್ಯಂತ ಹೃದಯ ವಿದ್ರಾವಕವಾಗಿತ್ತು. 

15 ಮರಾಠಾ ಲೈಟ್‌ ಇನ್‌ಫೆಂಟ್ರಿಗೆ ಸೇರಿದ 34ರ ಹರೆಯದ ಸಂದೀಪ್‌ ಜಾಧವ್‌ ಮತ್ತು 24ರ ಹರೆಯದ ಕೊಲ್ಲಾಪುರ ಮೂಲದ ಸಿಪಾಯಿ ಶ್ರವಣ್‌ ಮಾನೆ ಇವರು ಪಾಕಿಸ್ಥಾನದ ವಿಶೇಷ “ಬ್ಯಾಟ್‌’ ಪಡೆಯ ದಾಳಿಗೆ ಎರಡು ದಿನಗಳ ಹಿಂದೆ ಹುತಾತ್ಮರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next