Advertisement
ಇನ್ನೊಂದೆಡೆ ಭಾರೀ ಹಿಂಸಾಚಾರವನ್ನು ಕಂಡ ಮಧ್ಯಪ್ರದೇಶದಲ್ಲಿ ರೈತರ ಮಕ್ಕಳಿಗೆ ಸ್ವ ಉದ್ಯೋಗ ನಡೆಸಲು ಸಾಲ ನೀಡುವುದಾಗಿ ಹಾಗೂ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ರೈತರ ಮಕ್ಕಳ ಶುಲ್ಕವನ್ನು ಭರಿಸುವುದಾಗಿ ಸರಕಾರ ಘೋಷಿಸಿದೆ. ಆದರೆ ಇಲ್ಲಿ ರೈತರ ಪ್ರಮುಖ ಬೇಡಿಕೆಯಾದ ಸಾಲ ಮನ್ನಾ ಮತ್ತು ಬೆಂಬಲ ಬೆಲೆಯನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿಲ್ಲ.
ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಶಾಂತಿಗಾಗಿ ಶನಿವಾರ ನಿರಶನ ಆರಂಭಿಸಿದ್ದ ಚೌಹಾಣ್ ಅವರು ರವಿವಾರ ಉಪವಾಸ ಅಂತ್ಯಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಶಾಂತಿ ಮರುಕಳಿಸಿದೆ. ಸಾವಿಗೀಡಾದ ರೈತರ ಕುಟುಂಬಗಳೇ ಉಪವಾಸ ಮಾಡದಂತೆ ನನಗೆ ಮನವಿ ಮಾಡಿಕೊಂಡವು. ಹೀಗಾಗಿ ಉಪವಾಸ ಅಂತ್ಯಗೊಳಿಸುತ್ತಿದ್ದೇನೆ’ ಎಂದಿದ್ದಾರೆ. ಇದಕ್ಕೂ ಮುನ್ನ ಅವರು ರೈತರ 236 ಸಮಿತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.