ನವದೆಹಲಿ: ಮಹಾರಾಷ್ಟ್ರ ಸರ್ಕಾರ ಶುಕ್ರವಾರ(ಜೂನ್ 04) ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರಕ್ಕೆ(ಬ್ಲ್ಯಾಕ್ ಫಂಗಸ್) ನೀಡಲಿರುವ ಚಿಕಿತ್ಸೆಗೆ ದರವನ್ನು ನಿಗದಿಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:5ಜಿ ತಂತ್ರಜ್ಞಾನ: ಜೂಹಿ ಚಾವ್ಲಾ ಅರ್ಜಿ ವಜಾಗೊಳಿಸಿ 20 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆ 1950ರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಎಲ್ಲಾ ಚಾರಿಟೇಬಲ್ (ಖಾಸಗಿ) ಆಸ್ಪತ್ರೆಗಳು ಬ್ಲ್ಯಾಕ್ ಫಂಗಸ್ ಗೆ ನಿಗದಿಪಡಿಸಿರುವ ದರವನ್ನು ಅನುಸರಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.
ಬ್ಲ್ಯಾಕ್ ಫಂಗಸ್ ನಲ್ಲಿ 28 ಬಗೆಯ ಶಸ್ತ್ರಚಿಕಿತ್ಸೆಗಳನ್ನು ಗುರುತಿಸಲಾಗಿದೆ. ಮೂರು ಶ್ರೇಣಿಯ ನಗರಗಳಲ್ಲಿ ಕನಿಷ್ಠ 6000 ಸಾವಿರ ರೂಪಾಯಿ ದರವನ್ನು ಸರ್ಕಾರ ನಿಗದಿಪಡಿಸಿದೆ. ಅಲ್ಲದೇ ಪ್ರದೇಶ ಮತ್ತು ಚಿಕಿತ್ಸೆಯ ಗಂಭೀರತೆ ಆಧಾರದ ಮೇಲೆ ಒಂದು ಲಕ್ಷ ರೂಪಾಯಿವರೆಗೆ ಶುಲ್ಕ ಪಡೆಯಬಹುದಾಗಿದೆ ಎಂದು ತಿಳಿಸಿದೆ. ಈ ಆದೇಶ ಜುಲೈ 31ರವರೆಗೆ ಮುಂದುವರಿಯಲಿದೆ.
ಮೆಟ್ರೋ ನಗರಗಳಾದ ಮುಂಬಯಿ, ಪುಣೆ , ನಾಗ್ಪುರ್ ಗಳಲ್ಲಿ ಕೆಲವು ಮಲ್ಟಿ ಸೌಕರ್ಯದ ಖಾಸಗಿ ಆಸ್ಪತ್ರೆಗಳನ್ನು ಹೊಂದಿದೆ. ಇಲ್ಲಿ ಮೆದುಳು, ಮೂಗು, ಕಣ್ಣು, ಕಿವಿ ಸೇರಿದಂತೆ ಎಲ್ಲಾ ವಿಧದ ತಜ್ಞ ವೈದ್ಯರುಗಳಿದ್ದು, ಇಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ದಾಖಲಿಸಿಕೊಳ್ಳುತ್ತಾರೆ. ಇಂತಹ ಆಸ್ಪತ್ರೆಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಎಂದು ಕರೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ರೋಗಿಗಳು ಇಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಯಸಿದಲ್ಲಿ ಅದು ದೊಡ್ಡ ಪ್ರಮಾಣದ ಶುಲ್ಕವನ್ನು ನೀಡಬೇಕಾಗುತ್ತದೆ. ಆದರೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ರೋಗಿಗಳು ಚಿಕಿತ್ಸೆ ಪಡೆದಲ್ಲಿ ಸರ್ಕಾರ ನಿಗದಿಪಡಿಸಿದ ದರ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.