Advertisement

ನೀಟ್‌ನಲ್ಲಿ ಬುಡಕಟ್ಟು ಮಕ್ಕಳ ಸಾಧನೆ: ವೈದ್ಯರಾಗುವ ಕನಸು ನನಸು

09:06 PM Sep 11, 2022 | Team Udayavani |

ನಾಗ್ಪುರ: ಎಲ್ಲ ರೀತಿಯ ಸೌಲಭ್ಯ ಸಿಕ್ಕರೂ ಅದೆಷ್ಟೋ ಮಕ್ಕಳಿಗೆ ನೀಟ್‌ ಕಬ್ಬಿಣದ ಕಡಲೆಯೇ. ಹಾಗಿರುವಾಗ ಮಹಾರಾಷ್ಟ್ರದ ಬುಡಕಟ್ಟು ಜನಾಂಗಕ್ಕೆ ಸೇರಿರುವ ನಾಲ್ಕು ಮಕ್ಕಳು ನೀಟ್‌ ಬರೆದು, ಅದರಲ್ಲಿ ಉತ್ತೀರ್ಣರಾಗಿ, ವೈದ್ಯರಾಗುವ ಕನಸು ನನಸು ಮಾಡಿಕೊಂಡಿದ್ದಾರೆ.

Advertisement

ಅರುಣ್‌ ಲಾಲ್ಸು ಮತ್ತಮಿ ಹೆಸರಿನ ವಿದ್ಯಾರ್ಥಿ ಭಾಮ್ರಗಡ ತಾಲೂಕಿನ ಬುಡಕಟ್ಟು ಜನಾಂಗದವರಾಗಿದ್ದು, 4ನೇ ತರಗತಿಯಿಂದಲೂ ಹಾಸ್ಟೆಲ್‌ನಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೀಟ್‌ ಕೋಚಿಂಗ್‌ಗೆ ಹಣವಿಲ್ಲದ ಅವರು “ಲಿಫ್ಟ್ ಫಾರ್‌ ಅಪ್‌ಲಿಫ್ಟ್ಮೆಂಟ್‌’ ಹೆಸರಿನ ಸಂಸ್ಥೆಯ ಉಚಿತ ಕೋಚಿಂಗ್‌ ನೆರವಿನಿಂದ ನೀಟ್‌ನಲ್ಲಿ ತೇರ್ಗಡೆ ಹೊಂದಲು ಸಾಧ್ಯವಾಯಿತು ಎಂದಿದ್ದಾರೆ.

ಹಾಗೆಯೇ ಭಾಮ್ರಗಡದ ಅಚಿನ್‌ ಅರ್ಕಿ ಮತ್ತು ರಾಕೇಶ್‌ ಪೊಡಾಲಿ ಹಾಗೂ ಅಮರಾವತಿ ಜಿಲ್ಲೆಯ ಸಪ್ನಾ ಜವಾರ್ಕರ್‌ ನೀಟ್‌ನಲ್ಲಿ ತೇರ್ಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next