Advertisement
ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬಯಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಬಿಜೆಪಿ-ಶಿವಸೇನೆ ಮಹಾಮೈತ್ರಿ ಅ.21ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ನಾಯಕದ್ವಯರು ವ್ಯಕ್ತಪಡಿಸಿದ್ದಾರೆ. ಕೆಲವು ವಿಷಯಗಳ ಬಗ್ಗೆ ಶಿವಸೇನೆ ಜತೆಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಇದೆ. ಆದರೆ ಹಿಂದುತ್ವ ಎಂಬ ವಿಚಾರದಲ್ಲಿ ಎರಡೂ ಪಕ್ಷಗಳು ಒಂದೇ ನಿಲುವು ಹೊದಿವೆ. ಶಿವಸೇನೆಗೆ 124 ಕ್ಷೇತ್ರಗಳು ಮತ್ತು ವಿಧಾನ ಪರಿಷತ್‌ನ 2 ಸ್ಥಾನಗಳು, 14 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳಿಗೆ ಅವಕಾಶ ನೀಡಿದ್ದೇವೆ. 164 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ ಎಂದು ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
Related Articles
ಕಾಂಗ್ರೆಸ್ ವಿರುದ್ಧ ಟೀಕೆ ಮುಂದುವರಿಸಿರುವ ಅದೇ ಪಕ್ಷದ ನಾಯಕ ಸಂಜಯ್ ನಿರುಪಮ್ ಶುಕ್ರವಾರ ಮಾತನಾಡಿ, ಮುಂಬಯಿನಲ್ಲಿ 2-3 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆಯೂ ಕಾಂಗ್ರೆಸ್ ಸೋಲು ನಿಶ್ಚಿತ ಎಂದಿದ್ದಾರೆ.
Advertisement
ಎಮ್ಮೆನ್ನೆಸ್‌ಗೆ ಕೈ-ಎನ್‌ಸಿಪಿ ಬೆಂಬಲ:ಪುಣೆ ಸಿಟಿಯ ಕೊಥ್ರೂಡ್ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ್ ಪಾಟೀಲ್‌ರನ್ನು ಸೋಲಿಸಲು ಪಣತೊಟ್ಟಿರುವ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ, ಈ ಕ್ಷೇತ್ರದಲ್ಲಿ ಎಂಎನ್‌ಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಎಂಎನ್‌ಎಸ್‌ನಿಂದ ಇಲ್ಲಿ ಕಿಶೋರ್ ಶಿಂದೆ ಕಣಕ್ಕಿಳಿದಿದ್ದಾರೆ.