Advertisement

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

10:33 PM Nov 26, 2024 | Team Udayavani |

ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ, ಏಕನಾಥ ಶಿಂಧೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಶಿಂಧೆ ಶಿವಸೇನೆ ಕಾರ್ಯಕರ್ತರು, ನಾಯಕರು ಆಗ್ರಹಿಸಿದ್ದಾರೆ.

Advertisement

ಇದರ ಭಾಗವಾಗಿ ಮೋದಿ ಅವರ ಏಕ್‌ ಹೇ ಥೋ ಸೇಫ್ ಹೇ (ಒಟ್ಟಾಗಿದ್ದರೆ, ಸುರಕ್ಷಿತವಾಗಿರುತ್ತೇವೆ) ಘೋಷಣೆಯನ್ನು ಏಕ್‌ನಾಥ್‌ ಹೇ ತೋ, ಸೇಫ್ ಹೇ ಎಂದು ಬದಲಿಸಿ, ಶಿಂಧೆ ಶಿವಸೇನೆ ನಾಯಕಿ ಡಾ.ಮನೀಷಾ ಕಾಯ್ಕಂಡೆ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿ ಒಳಗೊಂಡ ಮಹಾಯುತಿ ಸರ್ಕಾರವು ಶಿಂಧೆ ನೇತೃತ್ವದಲ್ಲಿದ್ದರೆ ಸುರಕ್ಷಿತವಾಗಿರುತ್ತದೆ ಹಾಗಾಗಿ ಅವರೇ ಸಿಎಂ ಆಗಬೇಕು ಎಂದು ಟ್ವೀಟರ್‌ನಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next