ಮುಂಬೈ: ಕಳೆದ ಎರಡು ತಿಂಗಳಿನಿಂದ ಬಿಗಿಯಾದ ಲಾಕ್ ಜಾರಿಗೊಳಿಸಿದ ಮಹಾರಾಷ್ಟ್ರ ಸರ್ಕಾರ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದ್ದು, ಇದೀಗ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.
ಇಂದು ( ಜೂನ್ 07) ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಯೋ ಬಬಲ್ ವ್ಯವಸ್ಥೆಯಡಿ ಚಿತ್ರೀಕರಣ ನಡೆಸಬೇಕು. ಹಾಗೂ ಚಿತ್ರೀಕರಣ ತಂಡದವರು ಲಸಿಕೆ ಪಡೆಯುವಂತೆ ಸೂಚಿಸಿದರು.
ಇನ್ನು ಹಿರಿತೆರೆ ಹಾಗೂ ಕಿರುತೆರೆಯ ಶೂಟಿಂಗ್ ಗೆ ಅನುಮತಿ ನೀಡಿದರೂ ಕೂಡ ಕೆಲವೊಂದು ನಿರ್ಬಂಧ ಹೇರಿದೆ. ಸರ್ಕಾರ ಸೂಚಿಸಿರುವ ಸಮಯದಲ್ಲಿ ಮಾತ್ರ ಚಿತ್ರೀಕರಣ ನಡೆಸುವಂತೆ ಸೂಚಿಸಿದೆ.
ಇನ್ನು ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಗೆ ಯೋಜನೆ ರೂಪಿಸಿರುವ ಮಹಾರಾಷ್ಟ್ರ ಸರ್ಕಾರ, ಒಂದು ಮತ್ತು ಎರಡನೇ ಹಂತದ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವ್ಯಾಪಾರಗಳನ್ನು ನಡೆಸಲು ಅವಕಾಶ ನೀಡಲಾಗಿದೆ. 3 ಮತ್ತು 4ನೆ ಹಂತಗಳಲ್ಲಿ ಸಂಜೆ ನಾಲ್ಕ ಗಂಟೆವರೆಗೆ ಅವಕಾಶ ನೀಡಲಾಗಿದೆ. 5ನೇ ಹಂತದಲ್ಲಿ ಸಂಜೆ ನಾಲ್ಕು ಗಂಟೆವರೆಗೂ ಅವಕಾಶ ನೀಡಲಾಗಿದೆ, ವಾರಾಂತ್ಯದ ದಿನಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಮಾಲ್, ಥಿಯೆಟರ್ ಮತ್ತು ಮಲ್ಟಿಫ್ಲೆಕ್ಸ್ ಗಳು ಒಂದನೆ ಹಂತದಲ್ಲಿ ಎಂದಿನಂತೆ ಕಾರ್ಯಾರಂಭಿಸಲಿವೆ, ಎರಡನೆ ಹಂತದಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ, ಉಳಿದಂತೆ 3ರಿಂದ 5 ಹಂತಗಳಲ್ಲಿ ಮಾಲ್, ಥಿಯೆಟರ್ ಗಳು ಮುಚ್ಚಿರಲಿವೆ.