Advertisement

ಕೋವಿಡ್ 19: ಕಡಿಮೆಗೊಳ್ಳುತ್ತಿಲ್ಲ ಸೋಂಕಿನ ವೇಗ.! ಮಹಾರಾಷ್ಟ್ರಕ್ಕೆ ಮತ್ತಷ್ಟು ಬಿಗಿ ಕ್ರಮ..?

05:16 PM Apr 27, 2021 | Team Udayavani |

ಮಹಾರಾಷ್ಟ್ರ :  ಮುಂಬೈ ಮತ್ತು ಥಾಣೆಯಲ್ಲಿ ಕೋವಿಡ್ 19 ಪರಿಸ್ಥಿತಿ ಕಡಿಮೆಯಾಗಿದ್ದರೂ ವಿದರ್ಭ ಮತ್ತು ಮರಾಠವಾಡದಲ್ಲಿ ಸೋಂಕುಗಳು ಹೆಚ್ಚಾಗುತ್ತಿವೆ ಎಂದು ಮಹಾರಾಷ್ಟ್ರ ಸಮಾಜ ಕಲ್ಯಾಣ ಸಚಿವ ವಿಜಯ್ ವಾಡೆಟ್ಟಿವಾರ್ ಅವರು ಹೇಳಿದ್ದಾರೆ.

Advertisement

ಈ ಬಗ್ಗೆ ಏಪ್ರಿಲ್ 29 ಗುರುವಾರ ನಡೆಯುವ  ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದರು. ಸಭೆ ರಂದು ಮಧ್ಯಾಹ್ನ 12.30 ಕ್ಕೆ ನಡೆಯಲಿದೆ.

ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದ ಜನರಿಗೆ ಉಚಿತ  ಕೋವಿಡ್ 19 ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದ್ದರು.

 ಓದಿ : I went for campaigning because they conducted the Elections: Siddaramaiah

ಇನ್ನು, ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 66,191 ಹೊಸ ಕೊರೊನಾವೈರಸ್ ಸಕಾರಾತ್ಮಕ ಪ್ರಕರಣಗಳೊಂದಿಗೆ ಸೋಂಕಿನ ಪ್ರಮಾಣ 42,95,027 ಕ್ಕೆ ತಲುಪಿದ್ದರೆ, 832 ಮಂದಿ ಮೃತರಾಗುವುದರೊಂದಿಗೆ ಸಾವಿನ ಸಂಖ್ಯೆ 64,760 ಕ್ಕೆ ಏರಿಕೆಯಾಗಿದೆ.

Advertisement

ಇನ್ನು, ಮಹಾರಾಷ್ಟ್ರದಲ್ಲಿ ಈಗ 6,98,354 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಏಪ್ರಿಲ್ 15 ರಿಂದ ಮಹಾರಾಷ್ಟ್ರವು ಲಾಕ್‌ ಡೌನ್ ನಿರ್ಬಂಧಗಳಿಗೆ ಒಳಪಟ್ಟಿದೆ. ಏಪ್ರಿಲ್ 21 ರಂದು ಮಹಾರಾಷ್ಟ್ರ ಸರ್ಕಾರವು  ಕೋವಿಡ್ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು, ಇದು ಏಪ್ರಿಲ್ 22 ರಂದು ರಾತ್ರಿ 8 ರಿಂದ ಜಾರಿಗೆ ಬರುವ ಮತ್ತು ಮೇ 1 ರಂದು ಬೆಳಿಗ್ಗೆ 7 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.  ಅಗತ್ಯ ಅಂಗಡಿಗಳು ಮತ್ತು ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಅಂಗಡಿ ಮುಂಗಟ್ಟಯಗಳನ್ನು  ಮೇ ವರೆಗೆ ಮುಚ್ಚಬೇಕೆಂಬುದಾಗಿ ಮಾರ್ಗಸೂಚಿಯಲ್ಲಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಒಟ್ಟಿನಲ್ಲಿ ಲಾಕ್ ಡೌನ್ ನಿರ್ಬಂಧಗಳಿದ್ದರು ನಿತ್ಯ ದಾಖಲಾಗುತ್ತಿರುವ ಸೋಂಕಿನ  ಪ್ರಮಾಣದಲ್ಲಿ ಕಡಿಮೆ ಕಂಡುಬಂದಿಲ್ಲ. ಈಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಗುರುವಾರದಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ರಾಜಕೀಯ ವಲಯದಲ್ಲಿ ಹೇಳಲಾಗುತ್ತರುವುದಾಗಿ ವರದಿಯಾಗಿದೆ.

 ಓದಿ : ಕಾಂಗ್ರೆಸ್ ನಿಂದ ರಾಜ್ಯಮಟ್ಟ ಕೋವಿಡ್ ಸೆಂಟರ್ ಮಾಡುತ್ತೇವೆ: ಡಿ.ಕೆ.ಶಿವಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next