Advertisement

ನದಿಯಲ್ಲಿ ಬೋಟ್ ಮುಳುಗಡೆ |ದುರಂತದಲ್ಲಿ ನಾಲ್ವರ ಸಾವು | 7 ಜನ ಕಣ್ಮರೆ

07:38 PM Sep 14, 2021 | Team Udayavani |

ಮುಂಬೈ : ಬೋಟ್ ಮುಳುಗಡೆಯಾಗಿ ನಾಲ್ವರು ಸಾವನ್ನಪ್ಪಿ, ಏಳು ಜನರು ಕಣ್ಮರೆಯಾಗಿರುವ ದುರಂತ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಂಗಳವಾರ(ಸೆ.14) ನಡೆದಿದೆ.

Advertisement

ಇಂದು ಮುಂಜಾನೆ 10.30 ರ ಸುಮಾರಿಗೆ ವಾರ್ಧಾ ನದಿಯಲ್ಲಿ ಈ ದುರಂತ ಘಟಿಸಿದೆ. ಗಡೆಗಾಂವ್ ಗ್ರಾಮದ 12 ಜನರು ಜಲಪಾತವನ್ನು ವೀಕ್ಷಿಸಿ, ದೇವಸ್ಥಾನಕ್ಕೆ ಬೋಟ್ ಮೂಲಕ ತೆರಳುತ್ತಿದ್ದರು. ಬೋಟ್ ಮ್ಯಾನ್ ಸೇರಿ ಒಟ್ಟು 13 ಜನರಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಬೋಟ್ ಮುಳುಗುತ್ತಿದ್ದಂತೆ ಇಬ್ಬರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ನಾಲ್ಕು ಜನರು ಮರಣ ಹೊಂದಿದ್ದಾರೆ. 7 ಜನರು ಕಣ್ಮರೆಯಾಗಿದ್ದು, ಅವರು ಹುಡುಕಾಟಕ್ಕೆ ಕಾರ್ಯಾಚರಣೆ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಬಹುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ಕಾರ್ಯಾಚರಣೆ ನಡೆಸಿ ಇದುವರೆಗೆ ನಾಲ್ಕು ಶವಗಳನ್ನು ಹೊರ ತೆಗೆದಿದ್ದಾರೆ. ಅವುಗಳಲ್ಲಿ ಮೂರು ಶವಗಳ ಗುರುತು ಪತ್ತೆಯಾಗಿದ್ದು, ಬೋಟ್ ಮ್ಯಾನ್ ನಾರಾಯಣ್ ಮಾತಾರೆ (45), ವಂಶಿಕಾ ಶಿವಾಂಕರ್ (2) ಮತ್ತು ಕಿರಣ್ ಖಂಡಾಲೆ (25) ಎಂದು ಗುರುತಿಸಲಾಗಿದೆ.

ಇನ್ನು ಇತ್ತೀಚಿಗಷ್ಟೆ ಅಸ್ಸಾಂ ರಾಜ್ಯದ ಜೋರ್ಹತ್​ನ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟ್​ಗಳು ಡಿಕ್ಕಿಯಾಗಿವೆ ಸುಮಾರು 60 ಪ್ರಯಾಣಿಕರು ನಾಪತ್ತೆಯಾಗಿದ್ದರು. 35 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿತ್ತು. ಎರಡು ಬೋಟ್​ಗಳಲ್ಲಿ ಒಟ್ಟು 100 ಪ್ರಯಾಣಿಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next