Advertisement

ಮುಂಬೈ; ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಕುಟುಂಬ ಸದಸ್ಯರು ಗುಂಡಿನ ದಾಳಿಗೆ ಬಲಿ

12:30 PM Oct 07, 2019 | Team Udayavani |

ಮುಂಬೈ: ಬಿಜೆಪಿ ಕಾರ್ಪೋರೇಟರ್ ಹಾಗೂ ಕುಟುಂಬದ ಸದಸ್ಯರನ್ನು ಮನೆಯೊಳಗೆ ಮೂವರು ಶಸ್ತ್ರಧಾರಿಗಳು ಗುಂಡಿನ ದಾಳಿ ನಡೆಸಿದ ಹತ್ಯೆಗೈದಿರುವ ಘಟನೆ ಭಾನುವಾರ ಮಹಾರಾಷ್ಟ್ರದ ಜಲ್ ಗಾಂವ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಭಾನುವಾರ ತಡರಾತ್ರಿ ಬಿಜೆಪಿ ಕಾರ್ಪೋರೇಟರ್ ರವೀಂದ್ರ ಖಾರಟ್(55ವರ್ಷ) ಮತ್ತು ಕುಟುಂಬದ ಸದಸ್ಯರು ಮನೆಯೊಳಗೆ ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಟ್ಟು ಹತ್ಯೆಗೈದ ನಂತರ ಮೂವರು ಖುದ್ದಾಗಿ ಪೊಲೀಸರಿಗೆ ಶರಣಾಗಿದ್ದು, ಆರೋಪಿಗಳು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ರವೀಂದ್ರ ಖಾರಟ್ (55ವರ್ಷ), ಸಹೋದರ ಸುನೀಲ್ (56ವರ್ಷ), ಪುತ್ರರಾದ ಪ್ರೇಮ್ ಸಾಗರ್ (26ವರ್ಷ), ರೋಹಿತ್ (25ವರ್ಷ) ಸಾವಿಗೀಡಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಏನೆಂದು ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next