Advertisement

ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ; 2 ದಿನ ಮನೆ, ಮನೆ ಪ್ರಚಾರ

09:58 AM Oct 20, 2019 | Team Udayavani |

ಮುಂಬೈ/ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶನಿವಾರ ತೆರೆ ಬಿದ್ದಿದ್ದು, ಮತದಾರರ ಮನವೊಲಿಸುವ ನಿಟ್ಟಿನಲ್ಲಿ ಇಂದು ಮತ್ತು ನಾಳೆ ಮನೆ, ಮನೆ ತೆರಳಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

Advertisement

ಇಂದು ಎರಡು ಲೋಕಸಭಾ ಕ್ಷೇತ್ರ ಹಾಊ 17 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಬಿಹಾರದ ಸಮಸ್ಠಿಪುರ್ ಲೋಕಸಭಾ ಕ್ಷೇತ್ರ ಮತ್ತು ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ, ಗುಜರಾತ್ ನ 06, ಕೇರಳ 05, ಬಿಹಾರ 05, ಸಿಕ್ಕಿಂ 03, ಪಂಜಾಬ್ ನ 04, ಅಸ್ಸಾಂನ 02, ತಮಿಳುನಾಡಿನ 02, ರಾಜಸ್ಥಾನದ 02, ಹಿಮಾಚಲ್ ಪ್ರದೇಶದ 02, ಒಡಿಶಾದ 01, ತೆಲಂಗಾಣದ 01, ಮಧ್ಯಪ್ರದೇಶದ 01, ಚತ್ತೀಸ್ ಗಢದ 01, ಮೇಘಾಲಯ 01, ಪಾಂಡಿಚೇರಿ 01 ಮತ್ತು ಅರುಣಾಚಲ ಪ್ರದೇಶದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಅಕ್ಟೋಬರ್ 21ರಂದು ಹರ್ಯಾಣ, ಮಹಾರಾಷ್ಟ್ರ ಹಾಗೂ 51 ವಿಧಾನಸಭಾ ಕ್ಷೇತ್ರಗಳ, 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next