ಥಾಣೆ: ಇಲ್ಲಿನ ವಿಟ್ಠಲವಾಡಿ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲ್ದಾಣದಲ್ಲಿಲ್ಲಿ ದಾಟುವ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹಾರಿದ ಹದಿಹರೆಯದ ಹುಡುಗನನ್ನು ಕೆಲವೇ ಸೆಕೆಂಡುಗಳ ಅಂತರದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಸವಾಲು ಸ್ವೀಕರಿಸಿ ರೈಲ್ವೆ ಹಳಿಯಿಂದ ದೂರ ತಳ್ಳುವ ಮೂಲಕ ಜೀವ ಉಳಿಸಿರುವ ಘಟನೆ ನಡೆದಿದ್ದು, ವಿಡಿಯೋ ಸಮಾಜೂಕ ತಾಣಗಳಲ್ಲಿ ವೈರಲ್ ಆಗಿದೆ.
ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಹೃಷಿಕೇಶ್ ಮಾನೆ ಅವರು ಬಾಲಕನ ಜೀವ ಉಳಿಸುವ ಮೂಲಕ ಧೈರ್ಯಶಾಲಿ ಕ್ರಮ ಕೈಗೊಂಡಿದ್ದಕ್ಕಾಗಿ ಅಂತರ್ಜಾಲದಲ್ಲಿ ವ್ಯಾಪಕವಾಗಿ ಪ್ರಶಂಸೆ ಪಡೆಯುತ್ತಿದ್ದಾರೆ.
ಹುಡುಗ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹಾರಿದ್ದು, ಸ್ಥಳದಲ್ಲಿದ್ದ ಮಾನೆ ಕ್ಷಣ ಮಾತ್ರದಲ್ಲಿ ಹಳಿಗೆ ಜಿಗಿದು ಯುವಕನನ್ನು ರಕ್ಷಿಸಿದ್ದಾರೆ. ಘಟನೆಯ ದ್ರಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
Related Articles
ರಕ್ಷಣೆಗೊಳಗಾದ ಹುಡುಗನನ್ನು ಸ್ಥಳೀಯ ಠಾಣೆಗೆ ಕರೆದೊಯ್ದು ಆತನ ಪೋಷಕರಿಗೆ ಒಪ್ಪಿಸಲಾಗಿದೆ.