Advertisement

Nagpur: ಸೋಲಾರ್‌ ಘಟಕದಲ್ಲಿ ಸ್ಫೋಟ; ಕನಿಷ್ಠ 9 ಮಂದಿ ಮೃತ್ಯು

02:13 PM Dec 17, 2023 | Team Udayavani |

ಮಹಾರಾಷ್ಟ್ರ: ಸೋಲಾರ್‌ ಘಟಕದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 9 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ಮುಂಜಾನೆ (ಡಿ.17 ರಂದು) ನಡೆದಿದೆ.

Advertisement

ಭಾನುವಾರ ಬೆಳಿಗ್ಗೆ ಸುಮಾರು 9.30 ಕ್ಕೆ ಬಜಾರ್‌ಗಾಂವ್ ಪ್ರದೇಶದಲ್ಲಿರುವ ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಪ್ಯಾಕಿಂಗ್‌ ಪ್ರಕ್ರಿಯೆ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಪೋಟಕ್ಕೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಸ್ಫೋಟದ ಪರಿಣಾಮ 9 ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕಂಪನಿಯು ದೇಶದ ರಕ್ಷಣಾ ಇಲಾಖೆಗೆ ಸ್ಫೋಟಕಗಳು ಮತ್ತು ಇತರ ರಕ್ಷಣಾ ಸಾಧನಗಳ ಪೂರೈಕೆಯೊಂದಿಗೆ ವ್ಯವಹರಿಸುತ್ತದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next