Advertisement

ಮಹಾರಾಷ್ಟ್ರ: ಧಾರಾವಿಯಲ್ಲಿ ಕೋವಿಡ್ 19 ವೈರಸ್ ಗೆ ಮತ್ತೊಬ್ಬ ವ್ಯಕ್ತಿ ಸಾವು

09:08 AM Apr 14, 2020 | Nagendra Trasi |

ಮುಂಬೈ: ಕೋವಿಡ್ 19 ವೈರಸ್ ಗೆ ಹಾಟ್ ಸ್ಪಾಟ್ ಎಂದೇ ಗುರುತಿಸಲ್ಪಟ್ಟಿದ್ದ ಮಹಾರಾಷ್ಟ್ರದ ಧಾರಾವಿಯಲ್ಲಿ ನಾಲ್ಕು ಹೊಸ ಪ್ರಕರಣ ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

Advertisement

ಏಷ್ಯಾದ ಅತೀ ದೊಡ್ಡ ಕೊಳಗೇರಿ ಎಂದು ಖ್ಯಾತಿ ಪಡೆದಿರುವ ಧಾರಾವಿಯಲ್ಲಿ ಸೋಮವಾರ ನೆಹರು ಚಾವಲ್ ಪ್ರದೇಶದ 60ವರ್ಷದ ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿಯೊಬ್ಬರು ಸೈಯನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಸಾವನ್ನಪ್ಪಿರುವ ಸೋಂಕು ಪೀಡಿತ ವ್ಯಕ್ತಿಯ ಸಂಪರ್ಕಕ್ಕೆ ಎಷ್ಟು ಮಂದಿ ಬಂದಿದ್ದಾರೆ ಎಂಬ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 11ರಂದು ಹೆಲ್ತ್ ಕೇರ್ ವರ್ಕರ್ಸ್ ಗಳು ಧಾರಾವಿಯಲ್ಲಿ ಮನೆ, ಮನೆಗೆ ಭೇಟಿ ನೀಡಿ ಸ್ಕ್ರೀನಿಂಗ್ ಮಾಡುತ್ತಿದ್ದರು. ಧಾರಾವಿಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಮನೆ, ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಲು ತುಂಬಾ ಸಮಯ ತೆಗೆದುಕೊಳ್ಳಲಿದೆ. ಧಾರಾವಿಯ ಖಾಸಗಿ ಮತ್ತು ಬಿಎಂಸಿ ಮೆಡಿಕಲ್ ಸಿಬ್ಬಂದಿಗಳ ತಂಡ ಭೇಟಿ ನೀಡಿ ಅರೋಗ್ಯ ತಪಾಸಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next