ಬೀಡ್ / ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ವೇಗ ಕಡಿಮೆಯಾಗದ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಮಹಾರಾಷ್ಟ್ರಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವುದಕ್ಕೆ ಯೋಚಿಸುತ್ತಿದೆ ಎಂಬ ಸುದ್ದಿಯಾಗುತ್ತಿದ್ದಂತೆ, ಒಂದೇ ಆ್ಯಂಬುಲೆನ್ಸ್ ನಲ್ಲಿ 22 ಕೋವಿಡ್ ಸೋಂಕಿತ ಮೃತದೇಹವನ್ನು ಸಾಗಿಸಿದ ಅಮಾನವೀಯ ಘಟನೆ ನಡೆದಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶವಗಾರದಿಂದ ಒಂದೇ ಆಂಬ್ಯುಲೆನ್ಸ್ ನಲ್ಲಿ 22 ಕೋವಿಡ್ ಸೋಂಕಿತರ ಮೃತದೇಹಗಳನ್ನು ತುಂಬಿಸಿ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಆ್ಯಂಬುಲೆನ್ಸ್ ಗಳ ಕೊರತೆಯೇ ಇದಕ್ಕೆ ಕಾರಣ ಎಂದು ಜಿಲ್ಲಾಡಳಿತ ಹೇಳಿದೆ.
ಓದಿ : ಅಡ್ಯಾರ್ ನಲ್ಲಿ ನಡೆದಿದ್ದ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಅಪರಾಧಿಗೆ 12 ವರ್ಷ ಕಠಿಣ ಸಜೆ
ಬೀಡ್ ನ ಅಂಬಜೋಗೈನಲ್ಲಿರುವ ಸ್ವಾಮಿ ರಾಮಾನಂದ್ ತೀರ್ಥ್ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿರುವ ಶವಗಳನ್ನು ಕೊನೆಯ ವಿಧಿಗಳಿಗಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಈ ಘಟನೆಯು ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ಗೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ. ಶಿವಾಜಿ ಸುಕ್ರೆ, ಇಲ್ಲಿ ಆ್ಯಂಬುಲೆನ್ಸ್ ನ ಕೊರತೆ ಇರುವ ಕಾರಣದಿಂದಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ. ಕಳೆದ ವರ್ಷ ಕೋವಿಡ್ -19 ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಐದು ಆಂಬುಲೆನ್ಸ್ ಗಳಿದ್ದವು. ಅವುಗಳಲ್ಲಿ, ಮೂರನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಆಸ್ಪತ್ರೆಯು ಈಗ ಎರಡು ಆಂಬ್ಯುಲೆನ್ಸ್ ಗಳಲ್ಲಿ ಕೋವಿಡ್ 19 ಸೋಂಕಿತರ ಸಾಗಣೆಯನ್ನು ನಿರ್ವಹಿಸುತ್ತಿದೆ. ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿರುವ ಕೋವಿಡ್ -19 ಕೇಂದ್ರದಿಂದ ಶವಗಳನ್ನು ಸಹ ಕೋಲ್ಡ್ ಸ್ಟೋರೇಜ್ ಇಲ್ಲದ ಕಾರಣ ನಮ್ಮಲ್ಲಿಗೆ ಕಳುಹಿಸಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಅಂಬಾಜೋಗೈ ಮುನ್ಸಿಪಲ್ ಕೌನ್ಸಿಲ್ ಮುಖ್ಯ ಅಧಿಕಾರಿ ಅಶೋಕ್ ಸಬಲೆ ಮಾಂಡ್ವಾ ರಸ್ತೆಯಲ್ಲಿರುವ ಶವಸಂಸ್ಕಾರಕ್ಕೆ ಶವಗಳನ್ನು ಸಾಗಿಸುವುದು ವೈದ್ಯಕೀಯ ಕಾಲೇಜಿನ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಕಾಲೇಜು ಮಜುಖ್ಯಸ್ಥರು ಸಾಕಷ್ಟು ಆಂಬ್ಯುಲೆನ್ಸ್ ಗಳನ್ನು ಹೊಂದಿಲ್ಲ ಎಂದು ಹೇಳಿರುವ ವಿಷಯದ ಕುರಿತು ಸಭೆ ನಡೆಸಲಾಗಿದೆ. ಒಂದು ವೇಳೆ, ಅವರು ಯಾವುದೇ ಸೌಲಭ್ಯವನ್ನು ಹೊಂದಿಲ್ಲ ಎಂದಾದಲ್ಲಿ ಅವರು ಯಾಕೆ ಇದುವರೆಗೆ ಆ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದಿಲ್ಲ ಎಂದು ಅವರು ಕೇಳಿದ್ದಾರೆ.
ಓದಿ : 10 ದಿನದೊಳಗೆ 300 ಬೆಡ್ ವ್ಯವಸ್ಥೆ ಮಾಡಿ : ಸಚಿವ ಜೋಶಿ