Advertisement

Maharashtra; ಪ್ರತೀ ಕ್ಷೇತ್ರದಲ್ಲೂ 10 ಸಾವಿರ ಬೋಗಸ್ ಮತದಾರರು: MVA ಆರೋಪ

06:44 PM Oct 19, 2024 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಕಾವೇರಿದ್ದು, ಆರೋಪ ಪ್ರತ್ಯಾರೋಪಗಳು ತೀವ್ರವಾಗಿದೆ. ವಿಪಕ್ಷ ಮೈತ್ರಿಕೂಟವಾದ ಮಹಾ ವಿಕಾಸ್ ಆಘಾಡಿ ಆಡಳಿತಾರೂಢ ಮಾಹಾಯುತಿ ಮೈತ್ರಿಕೂಟದ ವಿರುದ್ಧ ಗಂಭೀರ ಆರೋಪ ಮಾಡಿದೆ. ಪ್ರತೀ  ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಾವಿರ ಬೋಗಸ್ ಮತದಾರನ್ನು ನೋಂದಣಿ ಮಾಡಲಾಗಿದೆ ಎಂದು ಚುನಾವಣ ಆಯೋಗಕ್ಕೆ ದೂರು ನೀಡಿದೆ.

Advertisement

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ “ಲಫಂಗಿ ಎಂದು ನಾವು ಕರೆಯುವ ಮಹಾಯುವತಿ(NDA) ಸಂವಿಧಾನವು ನೀಡಿರುವ ವಿಶೇಷ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.  ನಿನ್ನೆ ಚುನಾವಣ ಆಯೋಗವನ್ನು ಎಂವಿಎ ನಾಯಕರು ಭೇಟಿ ಮಾಡಿದ್ದು, . ಆ್ಯಪ್ ತಯಾರಿಸಿ ಜನರ ಮತಗಳನ್ನು ಕಡಿಮೆ ಮಾಡಿ ಬೋಗಸ್ ಮತಗಳನ್ನು ಸೇರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಯೋಗಕ್ಕೆ ತಿಳಿಸಿದ್ದಾರೆ.ಪ್ರತಿ ಕ್ಷೇತ್ರದಲ್ಲಿ ಸುಮಾರು 10,000 ಬೋಗಸ್ ಮತಗಳು ಸೇರ್ಪಡೆಯಾಗುತ್ತಿವೆ.ಇದು ಮಹಾರಾಷ್ಟ್ರದ ಭವಿಷ್ಯದ ವಿಷಯವಾಗಿದೆ, ಈ ಷಡ್ಯಂತ್ರವನ್ನು ಮುನ್ನೆಲೆಗೆ ತರಲು ನಾವು ಕೆಲಸ ಮಾಡುತ್ತೇವೆ. ಅಗತ್ಯವಿದ್ದರೆ, ನಾವು ಚುನಾವಣ ಆಯೋಗದ ವಿರುದ್ಧ ದೊಡ್ಡ ರ್‍ಯಾಲಿಯನ್ನು ಸಹ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಎನ್‌ಸಿಪಿ-ಎಸ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಮಾತನಾಡಿ “ಇದು ಗಂಭೀರ ವಿಷಯವಾಗಿದೆ. ಬಿಜೆಪಿ ಸಮೀಕ್ಷೆ ನಡೆಸಿ ಅವರ ಮತದಾರರಲ್ಲದವರನ್ನು ಗುರುತಿಸಲು ಹೇಳಿದೆ. ಅವರು ವಿಶೇಷ ಅರ್ಜಿಯನ್ನು ತಂದು ಹೆಸರುಗಳನ್ನು ಸಂಪೂರ್ಣವಾಗಿ ಅಳಿಸಿ ಹೊಸ ಹೆಸರುಗಳನ್ನು ಸೇರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಪ್ರತಿಕ್ರಿಯಿಸಿ” ಸಂಜಯ್ ರಾವುತ್ ಹೇಳಿದಂತೆ ಮಹಾಯುತಿ ಸರಕಾರವು ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಮೂಲ ವ್ಯಕ್ತಿಗಳ ಹೆಸರನ್ನು ತೆಗೆದು ಬೋಗಸ್ ಮತದಾರರನ್ನು ಸೇರಿಸುತ್ತಿದೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಅದನ್ನು ನೋಡುತ್ತಿಲ್ಲ. ಚುನಾವಣೆಯಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಇಲ್ಲವಾಗಿದೆ. ಚುನಾವಣ ಆಯೋಗ ಮೋದಿಯವರ ಕಾಲಿನ ಕೆಳಗೆ ಕುಳಿತಿರುವಂತೆ ತೋರುತ್ತಿದೆ” ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next