Advertisement

Maharaja Trophy; ಮೊದಲ ಬಾರಿಗೆ ದ್ರಾವಿಡ್ ಪುತ್ರ ಸಮಿತ್ ಆಯ್ಕೆ; ಭಾರೀ ಮೊತ್ತ ಪಡೆದ ಚೇತನ್

05:58 PM Jul 25, 2024 | Team Udayavani |

ಬೆಂಗಳೂರು: ಕೆಎಸ್‌ಸಿಎ ಮತ್ತು ಶ್ರೀರಾಮ್‌ ಕ್ಯಾಪಿಟಲ್ಸ್‌ ಸಹಭಾಗಿತ್ವದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯ 3ನೇ ಆವೃತ್ತಿಗಾಗಿ, ಗುರುವಾರ ಆಟಗಾರರ ಹರಾಜು ನಡೆದಿದೆ. ಇದೇ ಮೊದಲ ಬಾರಿಗೆ ಹರಾಜಿಗೆ ಬಂದಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಆಯ್ಕೆಯಾಗಿದ್ದಾರೆ.

Advertisement

ಆಲ್ ರೌಂಡರ್ ಆಗಿರುವ ಸಮಿತ್ ದ್ರಾವಿಡ್ ಅವರು ಮೈಸೂರು ವಾರಿಯರ್ಸ್ ತಂಡದ ಪಾಲಾಗಿದ್ದಾರೆ.

ಬೆಂಗಳೂರು ಬ್ಲಾಸ್ಟರ್, ಗುಲ್ಬರ್ಗಾ ಮಿಸ್ಟಿಕ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್‌ ತಂಡಗಳು ಆಟಗಾರರನ್ನು ಆರಿಸಿವೆ. ಪಂದ್ಯಾವಳಿ ಆ.15- ಸೆ.1 ರವರೆಗೆ ನಡೆಯಲಿದೆ.

ಭಾರೀ ಮೊತ್ತ ಪಡೆದ ಚೇತನ್ ಎಲ್ಆರ್

Advertisement

ಆಲ್ ರೌಂಡರ್ ಚೇತನ್ ಎಲ್ಆರ್ ಇಂದಿನ ಹರಾಜಿನಲ್ಲಿ ಹೆಚ್ಚಿನ ತಂಡಗಳಲ್ಲಿ ಗಮನ ಸೆಳೆದರು. ಚೇತನ್ ಇಂದಿನ ಬಿಡ್ಡಿಂಗ್ ಪ್ರಕ್ರಿಯೆಯ ಅತ್ಯಂತ ದುಬಾರಿ ಖರೀದಿಯಾದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ರೂ 8.60 ಲಕ್ಷಕ್ಕೆ ಅವರನ್ನು ಖರೀದಿ ಮಾಡಿತು.

ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಮಂಗಳೂರು ಡ್ರ್ಯಾಗನ್ಸ್ ತಂಡವು 7.60 ಲಕ್ಷ ರೂ ನೀಡಿ ಖರೀದಿ ಮಾಡಿತು.

ಐಪಿಎಲ್ ಅನುಭವ ಹೊಂದಿರುವ ಪ್ರಮುಖ ಆಟಗಾರರಾದ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ವೈಶಾಕ್ ವಿಜಯ್ ಕುಮಾರ್, ಅಭಿನವ್ ಮನೋಹರ್ ಮತ್ತು ಕರುಣ್ ನಾಯರ್ ಹರಾಜಿಗೆ ಮುಂಚಿತವಾಗಿ ತಂಡಗಳು ಉಳಿಸಿಕೊಂಡ ಆಟಗಾರರಲ್ಲಿ ಸೇರಿದ್ದಾರೆ.

ಮಹಾರಾಜ ಟ್ರೋಫಿ ಹರಾಜಿನ ಪ್ರಮುಖ ಖರೀದಿಗಳು

ಚೇತನ್ ಎಲ್ ಆರ್ (ಬೆಂಗಳೂರು ಬ್ಲಾಸ್ಟರ್ಸ್) – 8.60 ಲಕ್ಷ ರೂ

ಶ್ರೇಯಸ್ ಗೋಪಾಲ್ (ಮಂಗಳೂರು ಡ್ರಾಗನ್ಸ್) – 7.60 ಲಕ್ಷ ರೂ

ಕೆ ಗೌತಮ್ (ಮೈಸೂರು ವಾರಿಯರ್ಸ್) – 7.40 ಲಕ್ಷ ರೂ

ಲವ್ನಿತ್ ಸಿಸೋಡಿಯಾ (ಗುಲ್ಬರ್ಗಾ ಮಿಸ್ಟಿಕ್ಸ್) – 7.20 ಲಕ್ಷ ರೂ

ಪ್ರವೀಣ್ ದುಬೆ (ಗುಲ್ಬರ್ಗಾ ಮಿಸ್ಟಿಕ್ಸ್) – 6.80 ಲಕ್ಷ ರೂ

ಮೊಹಮ್ಮದ್ ತಾಹಾ (ಹುಬ್ಬಳ್ಳಿ ಟೈಗರ್ಸ್) – 6.60 ಲಕ್ಷ ರೂ

ವಿದ್ಯಾಧರ್ ಪಾಟೀಲ್ (ಮೈಸೂರು ವಾರಿಯರ್ಸ್) – 6.40 ಲಕ್ಷ ರೂ

ಅನೀಶ್ವರ್ ಗೌತಮ್ (ಹುಬ್ಬಳ್ಳಿ ಟೈಗರ್ಸ್) – 6.20 ಲಕ್ಷ ರೂ

ಹಾರ್ದಿಕ್ ರಾಜ್ (ಹುಬ್ಬಳ್ಳಿ ಟೈಗರ್ಸ್) – 5.80 ಲಕ್ಷ ರೂ

ಜಗದೀಶ ಸುಚಿತ್ (ಮೈಸೂರು ವಾರಿಯರ್ಸ್) – 4.80 ಲಕ್ಷ ರೂ

ಕ್ರಾಂತಿ ಕುಮಾರ್ ಎಂ (ಬೆಂಗಳೂರು ಬ್ಲಾಸ್ಟರ್ಸ್) – 4.40 ಲಕ್ಷ ರೂ

ಕೆ.ಸಿ.ಕಾರಿಯಪ್ಪ (ಹುಬ್ಬಳ್ಳಿ ಟೈಗರ್ಸ್)- 4.20 ಲಕ್ಷ ರೂ

ವೆಂಕಟೇಶ್ ಎಂ (ಮೈಸೂರು ವಾರಿಯರ್ಸ್) – 3.40 ಲಕ್ಷ ರೂ

ಅನಿರುದ್ಧ ಜೋಶಿ (ಬೆಂಗಳೂರು ಬ್ಲಾಸ್ಟರ್ಸ್) – 3 ಲಕ್ಷ ರೂ

ಎಂಜಿ ನವೀನ್ (ಬೆಂಗಳೂರು ಬ್ಲಾಸ್ಟರ್ಸ್) – 2.30 ಲಕ್ಷ ರೂ

ಧೀರಜ್ ಗೌಡ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಪ್ರದೀಪ್ ಟಿ (ಶಿವಮೊಗ್ಗ ಲಯನ್ಸ್) – 1 ಲಕ್ಷ ರೂ

ಪ್ರತೀಕ್ ಜೈನ್ (ಬೆಂಗಳೂರು ಬ್ಲಾಸ್ಟರ್ಸ್) – 1 ಲಕ್ಷ ರೂ

ದರ್ಶನ್ ಎಂಬಿ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಶರತ್ ಬಿಆರ್ (ಗುಲ್ಬರ್ಗಾ ಮಿಸ್ಟಿಕ್ಸ್) – 1 ಲಕ್ಷ ರೂ

ಪ್ರಸಿಧ್ ಕೃಷ್ಣ (ಮೈಸೂರು ವಾರಿಯರ್ಸ್) – 1 ಲಕ್ಷ ರೂ

Advertisement

Udayavani is now on Telegram. Click here to join our channel and stay updated with the latest news.

Next