Advertisement

Maharaja Trophy: ಭಾರಿ ಮೊತ್ತ ಪಡೆದ ಅಭಿನವ್, ಮಯಾಂಕ್, ಪಡಿಕ್ಕಲ್;ಮಂಗಳೂರು ತಂಡಕ್ಕೆ ಗೌತಮ್

02:05 PM Jul 22, 2023 | Team Udayavani |

ಬೆಂಗಳೂರು: ಕರ್ನಾಟಕ ಆಟಗಾರರ ಟಿ20 ಲೀಗ್ ಮಹಾರಾಜ ಟ್ರೋಫಿಯ ಮತ್ತೊಂದು ಸೀಸನ್ ಗೆ ಕೆಎಸ್ ಸಿಎ ತಯಾರಾಗಿದೆ. ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹೊಡಿಬಡಿ ದಾಂಡಿಗ ಅಭಿನವ್ ಮನೋಹರ್ ಅತೀ ಹೆಚ್ಚು ಹಣ ಪಡೆದ ಆಟಗಾರನಾಗಿ ಮೂಡಿ ಬಂದಿದ್ದಾರೆ.

Advertisement

ಈ ಬಾರಿಯ ಪಂದ್ಯಾವಳಿಗೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರ್ಪಡೆಗೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆ ಆರಕ್ಕೇರಿದೆ. ಹಾಲಿ ಚಾಂಪಿಯನ್‌ ಗುಲ್ಬರ್ಗ್‌ ಮಿಸ್ಟಿಕ್ಸ್‌, ರನ್ನರ್‌ ಅಪ್‌ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್ ಮತ್ತು ಹುಬ್ಬಳ್ಳಿ ಟೈಗರ್ ಕಳೆದ ವರ್ಷ ಆಡಿದ್ದವು.

ಈ ವರ್ಷದ ಪಂದ್ಯಾವಳಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ.

ಪ್ರಮುಖ ಆಟಗಾರರ ಪಟ್ಟಿ

ಅಭಿನವ್ ಮನೋಹರ್:  ಶಿವಮೊಗ್ಗ ಲಯನ್ಸ್: 15 ಲಕ್ಷ

Advertisement

ಮಯಾಂಕ್ ಅಗರ್‌ವಾಲ್‌; ಬೆಂಗಳೂರು ಬ್ಲಾಸ್ಟರ್ಸ್‌ ; 14 ಲಕ್ಷ

ದೇವದತ್ ಪಡಿಕ್ಕಲ್ : ಗುಲ್ಬರ್ಗಾ ಮೈಸ್ಟಿಕ್ಸ್‌; 13 ಲಕ್ಷ

ಮನೀಶ್ ಪಾಂಡೆ: ಹುಬ್ಬಳ್ಳಿ ಟೈಗರ್ಸ್; 10.60 ಲಕ್ಷ

ಕರುಣ್ ನಾಯರ್:  ಮೈಸೂರು ವಾರಿಯರ್ಸ್; 6.8 ಲಕ್ಷ

ಅಭಿಮನ್ಯು ಮಿಥುನ್: ಬೆಂಗಳೂರು ಬ್ಲಾಸ್ಟರ್ಸ್; 5.20 ಲಕ್ಷ

ಜೆ ಸುಚಿತ್: ಮೈಸೂರು ವಾರಿಯರ್ಸ್; 8.40 ಲಕ್ಷ

ರೋನಿತ್ ಮೋರೆ: ಮಂಗಳೂರು ಡ್ರಾಗನ್ಸ್; 4 ಲಕ್ಷ

ಕೆಪಿ ಅಪ್ಪಣ್ಣ; ಗುಲಬರ್ಗಾ ಮಿಸ್ಟಿಕ್ಸ್; 4 ಲಕ್ಷ

ಗೌತಮ್ ಕೆ: ಮಂಗಳೂರು ಡ್ರಾಗನ್ಸ್; 6.6 ಲಕ್ಷ

ಪ್ರವೀಣ್ ದುಬೆ: ಹುಬ್ಬಳ್ಳಿ ಟೈಗರ್ಸ್; 5.8 ಲಕ್ಷ

ಕಾರಿಯಪ್ಪ ಕೆಸಿ: ಹುಬ್ಬಳ್ಳಿ ಟೈಗರ್ಸ್; 7.20 ಲಕ್ಷ

ವೈಶಾಕ್ ವಿ: ಗುಲ್ಬರ್ಗಾ ಮಿಸ್ಟಿಕ್ಸ್; 8.80 ಲಕ್ಷ

ಪ್ರಸಿದ್ಧ್ ಕೃಷ್ಣ: ಮಂಗಳೂರು ಡ್ರಾಗನ್ಸ್; 7.40 ಲಕ್ಷ

ಶ್ರೇಯಸ್ ಗೋಪಾಲ್: ಶಿವಮೊಗ್ಗ ಲಯನ್ಸ್; 7.80 ಲಕ್ಷ

ನಿಕಿನ್ ಜೋಸ್: ಮಂಗಳೂರು ಡ್ರಾಗನ್ಸ್; 7 ಲಕ್ಷ

ಲುವಿನಿತ್ ಸಿಸೋಡಿಯಾ: ಹುಬ್ಬಳ್ಳಿ ಟೈಗರ್ಸ್; 7.1 ಲಕ್ಷ

ಕೌಶಿಕ್ ವಿ: ಶಿವಮೊಗ್ಗ ಲಯನ್ಸ್;  5.9 ಲಕ್ಷ

ಶರತ್ ಬಿ ಆರ್ :ಮಂಗಳೂರು ಡ್ರಾಗನ್ಸ್; 3.2 ಲಕ್ಷ

ಚೇತನ್ ಎಲ್ ಆರ್: ಗುಲಬರ್ಗಾ ಮಿಸ್ಟಿಕ್ಸ್; 6.2 ಲಕ್ಷ

ಪ್ರತೀಕ್ ಜೈನ; ಮಂಗಳೂರು ಡ್ರಾಗನ್ಸ್;  3  ಲಕ್ಷ

ವಿದ್ವತ್ ಕಾವೇರಪ್ಪ: ಹುಬ್ಬಳ್ಳಿ ಟೈಗರ್ಸ್; 6.7  ಲಕ್ಷ

ರೋಹನ್ ಪಾಟೀಲ್: ಮಂಗಳೂರು ಡ್ರಾಗನ್ಸ್; 3.7 ಲಕ್ಷ

ರೋಹನ್ ಕದಂ; ಶಿವಮೊಗ್ಗ ಲಯನ್ಸ್;  4.7  ಲಕ್ಷ

ಮನೋಜ್ ಭಾಂಡಗೆ: ಮೈಸೂರು ವಾರಿಯರ್ಸ್; 9 ಲಕ್ಷ

ವಿಧ್ಯಾದರ್  ಪಾಟೀಲ್; ಬೆಂಗಳೂರು ಬ್ಲಸ್ಟರ್ಸ್; 7 ಲಕ್ಷ

ಅಭಿಲಾಷ್ ಶೆಟ್ಟಿ; ಗುಲಬರ್ಗಾ ಮಿಸ್ಟಿಕ್ಸ್; 1 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next